ದರ್ಶನ್ ಬಳಿಕ ಮತ್ತೊಬ್ಬ ಆರೋಪಿ ಜೈಲಿನಿಂದ ರಿಲೀಸ್

ದರ್ಶನ್ ಬಳಿಕ ಮತ್ತೊಬ್ಬ ಆರೋಪಿ ಜೈಲಿನಿಂದ ರಿಲೀಸ್

ತುಮಕೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ‌ ಆರೋಪಿ ರವಿಶಂಕರ್ ಜೈಲಿನಿಂದ ರಿಲೀಸ್ ಆಗಿದ್ದಾರೆ. ತುಮಕೂರು ಜಿಲ್ಲಾ ಕಾರಾಗೃಹದಿಂದ ರಿಲೀಸ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ- 8 ಆರೋಪಿಯಾಗಿದ್ದ ರವಿಶಂಕರ್. ನ್ಯಾಯಾಲಯದಿಂದ ಜಾಮೀನು ಸಿಕ್ಕಿ 17 ದಿನಗಳ ಬಳಿಕ ಜೈಲಿನಿಂದ ರಿಲೀಸ್ ಆಗಿದ್ದಾರೆ.

ತುಮಕೂರಿನ ಹೊರವಲಯದ ಊರುಕೆರೆ ಬಳಿಯಿರುವ ತುಮಕೂರು ಜಿಲ್ಲಾ ಕಾರಾಗೃಹದಿಂದ‌ ಬಿಡುಗಡೆಯಾಗಿದ್ದಾರೆ.

ಇಷ್ಟು ದಿನ ಶ್ಯೂರಿಟಿದಾರರು ಸಿಗದೇ ಪರದಾಟ ನಡೆಸಿದ್ದ ರವಿಶಂಕರ್ ಕುಟುಂಬಸ್ಥರು. ಇಂದು ಶ್ಯೂರಿಟಿ ಪ್ರಕ್ರಿಯೆ ಮುಗಿದ ಹಿನ್ನೆಲೆ ಜೈಲಿನಿಂದ ರಿಲೀಸ್ ಆಗಿದ್ದಾರೆ. ರವಿಶಂಕರ್ ಗೆ 57 ನೇ ಸಿಸಿಎಚ್ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿತ್ತು. ಇಬ್ಬರು ಶ್ಯೂರಿಟಿದಾರರು ಹಾಗೂ 2 ಲಕ್ಷ ಬಾಂಡ್ ಕೇಳಿದ್ದ ನ್ಯಾಯಾಲಯ. ಹೀಗಾಗಿ ಇಂದು ಶ್ಯೂರಿಟಿ ಪ್ರಕ್ರಿಯೆ ಮುಗಿದು, ತುಮಕೂರು ಜೈಲಾಧಿಕಾರಿಗೆ ಬೆಲ್ ಪ್ರತಿ ಸಿಕ್ಕ ಹಿನ್ನೆಲೆ. ತುಮಕೂರು ಜಿಲ್ಲಾ ಕಾರಾಗೃಹದಿಂದ ರಿಲೀಸ್ ಮಾಡಲಾಗಿದೆ.

Leave a Reply

Your email address will not be published. Required fields are marked *