ರಾಜ್ ಬಿ ಶೆಟ್ಟಿ ನಿರ್ಮಾಣದ ಮತ್ತು ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಯಶಸ್ಸು ಕಂಡಿದೆ. ರಿಷಬ್ ಶೆಟ್ಟಿ ಅವರು ಚಿತ್ರತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ತಮ್ಮ ‘ಸಹಿಪ್ರಾ ಶಾಲೆ’ ಚಿತ್ರದ ನೆನಪಾಯಿತು ಎಂದು ಹೇಳಿದ್ದಾರೆ.
ರಾಜ್ ಬಿ ಶೆಟ್ಟಿ ನಿರ್ಮಾಣದ, ಜೆಪಿ ತುಮಿನಾಡ್ ನಿರ್ದೇಶನದ ‘ಸು ಫ್ರಮ್ ಸೋ’ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿರುವುದನ್ನು ಇಡೀ ಕರ್ನಾಟಕ ಜನತೆ ನೋಡುತ್ತಾ ಇದೆ. ಇದು ಕನ್ನಡ ಚಿತ್ರರಂಗಕ್ಕೆ ಸಿಕ್ಕ ದೊಡ್ಡ ಗೆಲುವು. ರಾಜ್ ಅವರಿಗೆ ಹಾಗೂ ತಂಡಕ್ಕೆ ಎಲ್ಲರೂ ವಿಶ್ ತಿಳಿಸುತ್ತಾ ಇದ್ದಾರೆ. ಈಗ ರಿಷಬ್ ಶೆಟ್ಟಿ ಕೂಡ ತಂಡಕ್ಕೆ ವಿಶ್ ಮಾಡಿದ್ದಾರೆ ಮತ್ತು ತಮ್ಮ ನಿರ್ದೇಶನದ ‘ಸಹಿಪ್ರಾ ಶಾಲೆ’ ದಿನಗಳು ನೆನಪಾದವು ಎಂದು ಹೇಳಿದ್ದಾರೆ.
‘ನಮಸ್ಕಾರ ಕನ್ನಡ ಸಿನಿಪ್ರಿಯರೇ, ನೀವೆಲ್ಲರೂ ‘ಸು ಫ್ರಮ್ ಸೋ’ ಚಿತ್ರಕ್ಕೆ ನೀಡಿರುವ ಅದ್ಭುತ ಬೆಂಬಲ ಮತ್ತು ಪ್ರೀತಿಗೆ ಹೃತ್ತೂರ್ವಕ ಧನ್ಯವಾದಗಳು. ಈ ಸಿನಿಮಾ ನಿಜಕ್ಕೂ ಮನಸ್ಸಿಗೆ ಖುಷಿ ನೀಡಿದೆ. ರಚಿಸಿ ನಿರ್ದೇಶನ ಮಾಡಿದ ಜೆ.ಪಿ. ತುಮಿನಾಡ ಅವರಿಗೆ ಚಿತ್ರರಂಗಕ್ಕೆ ಸ್ವಾಗತ! ಅವರ ಚೊಚ್ಚಲ ಪ್ರಯತ್ನ ಅತ್ಯಂತ ಯಶಸ್ವಿಯಾಗಿದೆ. ನಿರ್ಮಾಪಕರಾದ ರಾಜ್ ಬಿ. ಶೆಟ್ಟಿ, ರವಿ ರೈ ಮತ್ತು ಶಶಿಧರ್ ಶೆಟ್ಟಿ ಬಾರೋಡ ಅವರ ಈ ಹೊಸ ಪ್ರಯತ್ನಕ್ಕೆ ನನ್ನ ಶುಭಾಶಯಗಳು. ಅವರ ಪ್ರೋತ್ಸಾಹದಿಂದ ಇಂತಹ ಉತ್ತಮ ಚಿತ್ರಗಳು ಹೊರಬರುತ್ತಿವೆ’ ಎಂದಿದ್ದಾರೆ ರಿಷಬ್.
