ಮಳೆ.. ಮಳೆ.. ಮಳೆ.. ಸಾಕು ನಿಲ್ಲಿಸು ಮಾರಾಯ ನಿನ್ನ ರಗಳೆ.. ಹಿಂಗೆ ಜನರು ಕವಿತೆ ಹೇಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಳೆದ ವರ್ಷ ಈ ಸಮಯದಲ್ಲಿ ಒಂದೇ ಒಂದು ಬಾರಿ ಜೋರಾಗಿ ಮಳೆ ಬರಲಿ ದೇವರೆ ಅಂತಾ ಬೇಡುತ್ತಿದ್ದ ಜನರೇ ಇದೀಗ, ಮಳೆಗೆ ಶಾಪ ಹಾಕಿ ನಿಲ್ಲುವಂತೆ ಬೇಡುವ ಸ್ಥಿತಿ ಎದುರಾಗಿದೆ. ಈಗಾಗಲೇ 2024ರ ಏಪ್ರಿಲ್-ಮೇ ತಿಂಗಳಲ್ಲಿ ಶುರು ಆಗಿದ್ದ ಮಳೆ, ನವೆಂಬರ್ ತಿಂಗಳ ತನಕ ಸುರಿದು ಸಾಕು ಸಾಕು ಎನಿಸಿದೆ. ಆದರೂ ಮತ್ತೆ, ಮುಂದಿನ 3 ದಿನ ಅಥವಾ 72 ಗಂಟೆಗಳ ಕಾಲ ಮಳೆಯ ಆರ್ಭಟ ಗ್ಯಾರಂಟಿ ಆಗಿದೆ!
ಮಳೆ ಆರ್ಭಟ ನಿಲ್ಲುತ್ತಿಲ್ಲ, ಮಳೆ ಕಾರಣಕ್ಕೆ ಕನ್ನಡಿಗರು ಈಗ ನಲುಗಿ ಹೋಗುವಂತಾಗಿದೆ. ವಾಯುಭಾರ ಕುಸಿತದ ಪರಿಣಾಮ ಇದೀಗ ಭಾರಿ ಘೋರ ಮಳೆ ಸುರಿಯುವ ಆತಂಕ ಕೂಡ ಆವರಿಸಿದೆ. ಅದರಲ್ಲೂ ಮುಂದಿನ 3 ದಿನ ಅಥವಾ 72 ಗಂಟೆಗಳ ಕಾಲ ಬೆಂಗಳೂರು ಸೇರಿದಂತೆ ಕರ್ನಾಟಕದ ಈ ಜಿಲ್ಲೆಗಳಿಗೆ ಭರ್ಜರಿ ಮಳೆ ಆರ್ಭಟದ ವಾರ್ನಿಂಗ್ ಕೊಡಲಾಗಿದೆ. ಹಾಗಾದ್ರೆ ಯಾವೆಲ್ಲಾ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ?
ಬೆಂಗಳೂರಿಗೆ ಕಾದಿದೆ ಮಳೆ ಕಂಟಕ! ಹೌದು, ಬೆಂಗಳೂರಲ್ಲಿ ನಾಳೆ ಅಂದ್ರೆ ಡಿಸೆಂಬರ್ 11 ರಿಂದ ಭಾರಿ ಭರ್ಜರಿ ಮಳೆ ಸುರಿಯಲಿದೆ. ಈ ಬಗ್ಗೆ ಇದೀಗ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 11ರ ಬುಧವಾರ ಮಳೆ ಶುರುವಾಗಿ ಗುರುವಾರ & ಶುಕ್ರವಾರ ಕೂಡ ಮಳೆ ಮುಂದುವರಿಯುವ ಭಯ ಇದೀಗ ಎದುರಾಗಿದೆ. ಬೆಂಗಳೂರಿನ ಜೊತೆಗೆ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಿಗೆ ಕೂಡ ಭಾರಿ ಮಳೆಯ ಭಯ ಈಗ ಕಾಡುತ್ತಿದೆ. ಬಂಗಾಳ ಕೊಲ್ಲಿ ಸಮುದ್ರದಲ್ಲಿ ಈಗ ವಾಯುಭಾರ ಕುಸಿತ ಉಂಟಾಗಿದ್ದು, ಇದರ ಪರಿಣಾಮ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗೆ, ಭಾರಿ ಮಳೆಯ ಪರಿಣಾಮ ಜನರು ಕೂಡ ಚಿಂತೆ ಮಾಡುವಂತೆ ಆಗಿದೆ. ಬಂಗಾಳ ಕೊಲ್ಲಿಯ ಸಮುದ್ರದಲ್ಲಿ ಕೆಲವು ದಿನಗಳ ಹಿಂದಷ್ಟೇ ವಾಯುಭಾರ ಕುಸಿದು ಚಂಡಮಾರುತ ಅಂದರೆ, ಸೈಕ್ಲೋನ್ ಸೃಷ್ಟಿ ಆಗಿತ್ತು. ಈಗ ಮತ್ತೊಮ್ಮೆ ಬಂಗಾಳ ಕೊಲ್ಲಿಯಲ್ಲಿ ಸೈಕ್ಲೋನ್ ಸೃಷ್ಟಿ ಆಗಿದ್ದು ಮತ್ತೆ ಭಾರಿ ಮಳೆಯ ಭಯ ಕಾಡುತ್ತಿದೆ.
ಮಳೆ.. ಮಳೆ.. ಭಾರಿ ಮಳೆ! ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಗೂ ಭಾರಿ ಮಳೆ ಭಯ ಈಗ ಕಾಡುತ್ತಿದೆ. ಡಿಸೆಂಬರ್ 11 ರಿಂದ ಭಾರಿ ಮಳೆ ಸುರಿಯುವ ಆತಂಕ ಆವರಿಸಿದೆ.