ಅಯ್ಯೋ,,,,,,! ಇವಳು ಡಾಕ್ಟರ್ ಅಲ್ಲ ಖತರ್ನಾಕ್ ಕಳ್ಳಿ..!

ಬೆಂಗಳೂರು :  ಬೆಂಗಳೂರಿನ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯೆಯ ರೀತಿ ವೇಷ ಧರಿಸಿ ಆಸ್ಪತ್ರೆಯಲ್ಲಿದ್ದ ರೋಗಿಗಳ ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂದಿಸಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ವೈದ್ಯೆಯ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಆಸ್ಪತ್ರೆ ಎಂಟ್ರಿಯಾಗಿದ್ದ ಕಳ್ಳಿ ಲಕ್ಷ್ಮಿ, ರೋಗಿಗಳ ವಾರ್ಡ್ ಗೆ ಹೋಗುತ್ತಿದ್ದಳು. ಬಳಿಕ ರೋಗಿಯ ಜೊತೆಗಿದ್ದವರನ್ನು ಚಿಕಿತ್ಸೆ ಕೊಡುವ ವೇಳೆ ಯಾರು ಒಳಗೆ ಇರಬಾರದು ಅಂತಾ ಹೊರಗೆ ಕಳುಹಿಸುತ್ತಿದ್ದಳು. ಹಾಗೆಯೇ ಹೊರಗೆ ಕಳುಹಿಸಿ ಚಿಕಿತ್ಸೆ ಕೊಡುವ ನೆಪದಲ್ಲಿ ರೋಗಿಗಳ ಬಳಿಯಿದ್ದ ಚಿನ್ನಾಭರಣ ಕಳವು ಮಾಡಿ ಎಸ್ಕೇಪ್ ಆಗುತ್ತಿದ್ದಳು.

ರೋಗಿ ಸರಸಮ್ಮ ಎಂಬುವವರ ಬಳಿ ಇದೇ ರೀತಿ ವಂಚಿಸಿ 40 ಗ್ರಾಂ ಚಿನ್ನದ ಸರ ಕಳವು ಮಾಡಿದ್ದಳು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಕಲಿ ಡಾಕ್ಟರ್ ಲಕ್ಷ್ಮಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆರೋಪಿ ಲಕ್ಷ್ಮಿಯ ಖಾಸಗಿ ಫೋಟೋ ಇಟ್ಟುಕೊಂಡು ಹಣ ತರುವಂತೆ ಬ್ಲಾಕ್ ಮೇಲ್ ಮಾಡ್ತಿದ್ದ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಕಳ್ಳತನ ಮಾಡಿದಳು ಅನ್ನೋದು ಬೆಳಕಿಗೆ ಬಂದಿದೆ. ಸದ್ಯ ಆ ವ್ಯಕ್ತಿಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

Pragati TV Social Connect for more latest u

Leave a Reply

Your email address will not be published. Required fields are marked *