ಕಾಂಗ್ರೆಸ್ನ ಮತ್ತೊಬ್ಬ ಸಚಿವನಿಗೆ ಭಾರಿ ಸಂಕಷ್ಟ! ಕೇಳಿಬಂತು ದೊಡ್ಡ ಆರೋಪ

ಕಾಂಗ್ರೆಸ್ನ ಮತ್ತೊಬ್ಬ ಸಚಿವನಿಗೆ ಭಾರಿ ಸಂಕಷ್ಟ! ಕೇಳಿಬಂತು ದೊಡ್ಡ ಆರೋಪ

ಮಂಡ್ಯ : ಮುಡಾ ಕೇಸ್ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರನ್ನು ಸುತ್ತಿಕೊಂಡಿದೆ. ಇದೀಗ ಮತ್ತೊಬ್ಬ ಕಾಂಗ್ರೆಸ್ ನಾಯಕನಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಮೇಲೆ ಭಾರಿ ಆರೋಪವೊಂದು ಕೇಳಿಬರುತ್ತಿದೆ. ಹೀಗಾಗಿ ಶೀಘ್ರವೇ ಚಲುವರಾಯಸ್ವಾಮಿ ಅವರಿಗೂ ಕಂಟಕ ಎದುರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಮಂಡ್ಯ ಜಿಲ್ಲೆಯ ಚಂದೂಪುರದಲ್ಲಿ ಬಾರ್ & ರೆಸ್ಟೋರೆಂಟ್ ತೆರೆಯಲು ಪರವಾನಗಿ ನೀಡುವ ವಿಚಾರವಾಗಿ ಲಂಚದ ಆರೋಪ ಕೇಳಿಬಂದಿದೆ. ಈ ಸಂಬಂಧ ದೂರು ಕೂಡ ದಾಖಲಾಗಿದ್ದು, ದೂರುದಾರರ ಸಲ್ಲಿಸಿರುವ ಆಡಿಯೋ ರೆಕಾರ್ಡಿಂಗ್ನಲ್ಲಿ ಸಚಿವ ಚಲುರಾಯಸ್ವಾಮಿ ಹೆಸರು ಕೂಡ ಇದೆ ಎಂದು ಹೇಳಲಾಗಿದೆ.

ಈ ಕೇಸ್ ಸಂಬಂಧ ಆಡಿಯೋ ಮತ್ತು ವಿಡಿಯೋ ಸಾಕ್ಷಿಗಳನ್ನು ಸಲ್ಲಿಸಲಾಗಿದ್ದು, ಇದರ ಸತ್ಯತೆ ತಿಳಿಯಲು ಲೋಕಾಯುಕ್ತ ಮುಂದಾಗಿದೆ. ಈ ಕೇಸ್ ವಿಚಾರವಾಗಿ ಎಫ್ಐಆರ್ ದಾಖಲಿಸುವ ಸಾಧ್ಯತೆಯೂ ಇದ್ದು, ಒಂದು ವೇಳೆ ಎಫ್ಐಆರ್ ದಾಖಲಾದರೆ ಚಲುವರಾಯಸ್ವಾಮಿ ಅವರಿಗೂ ಸಂಕಷ್ಟ ಎದುರಾಗಲಿದೆಯಂತೆ.

ಸರ್ಕಾರಿ ಇಲಾಖೆ ಅಧಿಕಾರಿ ಹಾಗೂ ದೂರುದಾರನ ನಡುವೆ ಈ ಸಂಭಾಷಣೆ ನಡೆದಿದೆ. ಇದರಲ್ಲಿ ಸಚಿವ ಚಲುವರಾಯಸ್ವಾಮಿ ಅವರ ಹೆಸರು ಕೂಡ ಉಲ್ಲೇಖವಾಗಿದೆ. ಇದರ ಬೆನ್ನಲ್ಲೇ ಭಾರಿ ಲಂಚ ಪಡೆಯುವ ವಿಚಾರದಲ್ಲಿ ಸಚಿವರ ಹೆಸರು ತಳುಕು ಹಾಕಿಕೊಂಡಿದ್ದು, ಈ ಬಗ್ಗೆ ವಿಪಕ್ಷಗಳು ಕೂಡ ತರಾಟೆಗೆ ತೆಗೆದುಕೊಳ್ಳುತ್ತಿವೆ. ಏನಿದು ಆರೋಪ?: ಮಂಡ್ಯದ ಚಂದೂಪುರದಲ್ಲಿ ಬಾರ್ & ರೆಸ್ಟೋರೆಂಟ್ಗೆ ಅನುಮತಿ ಪಡೆಯಲು ಮಹಿಳೆಯೊಬ್ಬರ ಹೆಸರಿನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು. ಮೊದಲಿಗೆ ಆನ್ಲೈನ್ ಮೂಲಕ ಸಲ್ಲಿಕೆಯಾಗಿದ್ದ ಅರ್ಜಿ ರಿಜೆಕ್ಟ್ ಆಗಿತ್ತು. ಇದಾದ ನಂತರ ಮಹಿಳೆಯ ಪುತ್ರ ಖುದ್ದು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ್ರು. ಇನ್ನು ಲೈಸೆನ್ಸ್ ನೀಡಲು ಅಬಕಾರಿ ಇಲಾಖೆ ಅಧಿಕಾರಿಗಳು ಬರೋಬ್ಬರಿ 40 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ 20 ಲಕ್ಷ ರೂಪಾಯಿ ಆದರೂ ಕೊಡಬೇಕು ಎಂದು ಡಿಮ್ಯಾಂಡ್ ಮಾಡಿದ್ದರು ಎಂದು ದೂರುದಾರರು ಹೇಳಿದ್ದಾರೆ.

ಇನ್ನು ಲಂಚ ಕೇಳಿರುವ ಆರೋಪದ ಮೇರೆಗೆ ಅಬಕಾರಿ ಇಲಾಖೆಯ ರವಿಶಂಕರ್ ಹಾಗೂ ಇನ್ಸ್ಪೆಕ್ಟರ್ ಶಿವಶಂಕರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು, ಇದರ ಜೊತೆಗೆ ಅಧಿಕಾರಿಗಳು ಮಾತನಾಡಿರುವ ಆಡಿಯೋ ಕೂಡ ದೂರಿನೊಂದಿಗೆ ಸಲ್ಲಿಸಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ಅಧಿಕಾರಿಗಳು ಕೇಸ್ನ ತನಿಖೆಗೆ ಫೀಲ್ಡಿಗಿಳಿದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಆದೇಶಿಸಿದರೆ, ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆಡಿಯೋದಲ್ಲಿ ಸಚಿವರ ಹೆಸರೂ ಇರುವುದರಿಂದ ಕಂಟಕ ಎದುರಾಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಜೆಡಿಎಸ್ ಕೂಡ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ರಾಜ್ಯ ಅಬಕಾರಿ ಇಲಾಖೆಯಲ್ಲಿ ಮಂಥ್ಲಿ ಮನಿ ಹೆಸರಲ್ಲಿ ವಸೂಲಿ ದಂಧೆ ಎಗ್ಗಿಲ್ಲದೆ ಜೋರಾಗಿ ನಡೆಯುತ್ತಿದೆ. ಅಂದು ಪ್ರಧಾನಿ ಮೋದಿಯವರ ಆಡಿದ್ದ ಮಾತು ಇಂದು ಸತ್ಯವಾಗಿದೆ. ರಾಜ್ಯ ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ಗೆ ಲಂಚ ವಸೂಲಿ ಮಂಡ್ಯ ಜಿಲ್ಲಾ ಉಸ್ತವಾರಿ ಸಚಿವ ಚಲುವರಾಯಸ್ವಾಮಿ ಮುಂದಾಳತ್ವದಲ್ಲೇ ಅಧಿಕಾರಿಗಳು ಪ್ರತಿಯೊಂದಕ್ಕೂ ರೇಟ್ ಫಿಕ್ಸ್ ಮಾಡಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಸಚಿವರಿಗೂ ಪಾಲು ಹೋಗುತ್ತಿರುವುದು ಆಡಿಯೋ ಸಂಭಾಷಣೆಯಲ್ಲಿ ಜಗಜ್ಜಾಹೀರಾಗಿದೆ ಎಂದು ವಾಗ್ದಾಳಿ ನಡೆಸಿ

Leave a Reply

Your email address will not be published. Required fields are marked *