‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾಗಳ ಬಳಿಕ ಅಲ್ಲು ಅರ್ಜುನ್ ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಸಿನಿಮಾ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ತಮಿಳು ನಿರ್ದೇಶಕ ಅಟ್ಲಿ ಜೊತೆಗೆ ಕೈ ಜೋಡಿಸಿದ್ದು, ಹಾಲಿವುಡ್ ಮಾದರಿಯ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಯಾವುದೋ ಲೋಕದಲ್ಲಿ ನಡೆಯುವ ಸಾಹಸಮಯ ಕತೆಯನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಸಿನಿಮಾನಲ್ಲಿ ಅಲ್ಲು ಅರ್ಜುನ್ ನಾಯಕ, ದೀಪಿಕಾ ಪಡುಕೋಣೆ ನಾಯಕಿ. ಇದೀಗ ಈ ಸಿನಿಮಾಕ್ಕೆ ಮತ್ತೊಬ್ಬ ಸ್ಟಾರ್ ನಟನ ಎಂಟ್ರಿ ಆಗಿದೆ.
ಅಲ್ಲು ಅರ್ಜುನ್-ಅಟ್ಲಿ ಸಿನಿಮಾದ ಪ್ರಮುಖ ಪಾತ್ರವೊಂದರಲ್ಲಿ ವಿಜಯ್ ಸೇತುಪತಿ ಸಹ ನಟಿಸಲಿದ್ದಾರೆ. ವಿಜಯ್ ಸೇತುಪತಿ ಅವರದ್ದು ಸಣ್ಣ ಪಾತ್ರವಾದರೂ ಕತೆಯ ಮೇಲೆ ಬಹಳ ಪ್ರಭಾವ ಬೀರಲಿರುವ ಪಾತ್ರವಂತೆ. ಈ ಹಿಂದೆ ಅಟ್ಲಿ ನಿರ್ದೇಶನ ಮಾಡಿದ್ದ ಬಾಲಿವುಡ್ ಸಿನಿಮಾ ‘ಜವಾನ್’ನಲ್ಲಿ ವಿಜಯ್ ಸೇತುಪತಿ ವಿಲನ್ ಪಾತ್ರದಲ್ಲಿ ನಟಿಸಿದ್ದರು. ಈಗಲೂ ಸಹ ವಿಲನ್ ಮಾದರಿಯ ಪಾತ್ರದಲ್ಲೇ ವಿಜಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾನಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾಕ್ಕಾಗಿ ಬರೋಬ್ಬರಿ 100 ದಿನಗಳ ಕಾಲ್ ಶೀಟ್ ಅನ್ನು ದೀಪಿಕಾ ಪಡುಕೋಣೆ ನೀಡಿದ್ದಾರೆ. ಇಷ್ಟು ಸುದೀರ್ಘ ಕಾಲ್ ಶೀಟ್ ಅನ್ನು ಅವರು ಸಂಜಯ್ ಲೀಲಾ ಬನ್ಸಾಲಿ ಸಿನಿಮಾಕ್ಕೂ ನೀಡಿರಲಿಲ್ಲ. ಈ ಸಿನಿಮಾದ ಮೇಲೆ ದೀಪಿಕಾಗೆ ಭಾರಿ ನಿರೀಕ್ಷೆ ಇದೆ ಎನ್ನಲಾಗುತ್ತಿದೆ. ಇದು ದೀಪಿಕಾ ನಟಿಸುತ್ತಿರುವ ಮೊದಲ ಸೈ-ಫೈ ಸಿನಿಮಾ ಆಗಿದೆ
ಅಲ್ಲು ಅರ್ಜುನ್-ಅಟ್ಲಿ ಸಿನಿಮಾನಲ್ಲಿ ಕೇವಲ ದೀಪಿಕಾ ಪಡುಕೋಣೆ ಮಾತ್ರವೇ ಅಲ್ಲದೆ ರಶ್ಮಿಕಾ ಮಂದಣ್ಣ ಮತ್ತು ಮೃಣಾಲ್ ಠಾಕೂರ್ ಅವರುಗಳು ಸಹ ನಟಿಸುತ್ತಿದ್ದಾರೆ. ಆದರೆ ಅವರ ಪಾತ್ರಗಳು ಅತಿಥಿ ಪಾತ್ರಗಳಷ್ಟೆ ಆಗಿರಲಿವೆ. ಸಿನಿಮಾನಲ್ಲಿ ಚಿತ್ರ-ವಿಚಿತ್ರ ಜೀವಿಗಳು, ಅತ್ಯಾಧುನಿಕ ವಾಹನಗಳು, ಆಯುಧಗಳು ಇರಲಿವೆ. ಮಾನವರು ಮತ್ತು ಏಲಿಯನ್ ಮಾದರಿಯ ಜೀವಿಗಳ ನಡುವೆ ನಡೆಯುವ ಯುದ್ಧದ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆ. ಸಿನಿಮಾಕ್ಕೆಸನ್ ಪಿಕ್ಚರ್ಸ್ನ ಕಲಾನಿಧಿ ಮಾರನ್ ಬಂಡವಾಳ ಹೂಡಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಬಂಡವಾಳ ತೊಡಗಿಸಿದ್ದಾರೆ. ಹಾಲಿವುಡ್ ನ ಕೆಲ ದೊಡ್ಡ ವಿಎಫ್ಎಕ್ಸ್ ಸಂಸ್ಥೆಗಳು ಈ ಸಿನಿಮಾಕ್ಕಾಗಿ ಕೆಲಸ ಮಾಡಲಿವೆ.
For More Updates Join our WhatsApp Group :