ಪವಿತ್ರಾಗೌಡಗೆ ಮತ್ತೊಂದು ಸಂಕಷ್ಟ :  ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆ | Renukaswamy’s blood stain in slippers

Another difficulty for Pavitra Gowda; Renukaswamy's blood stain was also found on her slippers

ಬೆಂಗಳೂರು: ಸ್ನೇಹಿತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳಹಿಸಿದ್ದಾನೆ ಎಂದು ರೇಣುಕಾಸ್ವಾಮಿಯನ್ನು ಕೊಲೆ ಮಾಡಲಾಗಿದೆ ಎನ್ನುವ ಆರೋಪದಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ಗ್ಯಾಂಗ್ ಜೈಲಿನಲ್ಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪವಿತ್ರಾಗೌಡಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ನಟಿಯ ಚಪ್ಪಲಿಯಲ್ಲಿ ರೇಣುಕಾಸ್ವಾಮಿ ರಕ್ತದ ಕಲೆ ಪತ್ತೆಯಾಗಿದೆ.

ಪವಿತ್ರಾಗೌಡ ಮನೆಯಲ್ಲಿ ಕೊಲೆ ದಿನ ಆಕೆ ಧರಿಸಿದ್ದ ಚಪ್ಪಲಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಅದನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿತ್ತು. ಚಪ್ಪಲಿ ಮೇಲೆ ರೇಣುಕಾಸ್ವಾಮಿ ರಕ್ತದ ಕಲೆ ಇರುವುದು ಪತ್ತೆಯಾಗಿದೆ. ಪಟ್ಟಣಗೆರೆ ಶೆಡ್ಗೆ ಹೋಗಿ ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದ ಆರೋಪ ನಟಿ ಮೇಲಿತ್ತು. ಈಗ ಅದೇ ಚಪ್ಪಲಿ ಮೇಲೆ ಕೊಲೆಯಾದ ವ್ಯಕ್ತಿಯ ರಕ್ತದ ಕಲೆ ಇರುವುದು ತಿಳಿದುಬಂದಿದೆ.

ಫ್ಯಾಷನ್ ಡಿಸೈನರ್ ಆಗಿರುವ ಪವಿತ್ರಾ ಗೌಡ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ರಾಜರಾಜೇಶ್ವರಿ ನಗರದ ನಿವಾಸದ ಬಳಿ ಇರುವ ರೆಡ್ ಕಾರ್ಪೆಟ್ 777 ಶಾಪ್ ಅನ್ನು ಖುಷಿ ಗೌಡ ನಡೆಸುತ್ತಿದ್ದಾರೆ. ಸೆಲೆಬ್ರಿಟಿಗಳಿಗೆ ಭಿನ್ನ ವಿಭಿನ್ನವಾಗಿ ಉಡುಪು ವಿನ್ಯಾಸ ಮಾಡುತ್ತಿರುವ ಈ ರೆಡ್ ಕಾರ್ಪೆಟ್ ಸಂಸ್ಥೆಯನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಖುಷಿ ಗೌಡ ಮೇಲಿದೆ. ಇನ್ನು ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಪವಿತ್ರಾ ಗೌಡ ಅವರನ್ನು ಕಾಣಲು ಮಗಳು ಖುಷಿ ತಮ್ಮ ಅಜ್ಜಿಯೊಂದಿಗೆ ಆಗಾಗ ಜೈಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

Leave a Reply

Your email address will not be published. Required fields are marked *