ವರಮಹಾಲಕ್ಷ್ಮಿ ವ್ರತ- ದಿನಾಂಕ, ಶುಭ ಸಮಯ ಮತ್ತು ಆಚರಣೆ ಬಗ್ಗೆ ತಿಳಿಯಿರಿ | Varamahalakshmi Vrata

Varamahalakshmi Vrata- Know about date, auspicious time and ritual

Varamahalakshmi Vrata- Know about date, auspicious time and ritual

ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ಇನ್ನೇನು ದೂರವಿಲ್ಲ. ಶ್ರಾವಣ ಮಾಸದ ಕೊನೆ ಶುಕ್ರವಾರದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 16ರಂದು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾದ ವರಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಭಕ್ತರಿಗೆ ಬೇಡಿದ ವರವನ್ನು ಕಲ್ಪಿಸುವ ಲಕ್ಷ್ಮಿಗೆ ವರಲಕ್ಷ್ಮಿ ಎಂದು ಕರೆಯಲಾಗುತ್ತದೆ.

ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀದೇವಿಯನ್ನು ಮೆಚ್ಚಿಸಲು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ವಿಶೇಷವಾಗಿ ಈ ವ್ರತಾಚರಣೆಯನ್ನು ಸುಮಂಗಲಿಯರು ಆಚರಿಸುತ್ತಾರೆ. ಈ ವ್ರತಾಚರಣೆ ಮಾಡುವುದರಿಂದ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗಬಹುದು, ಜೊತೆಗೆ ಸಂಪತ್ತು ಕೀರ್ತಿ, ಸಂತಾನ, ಸಂತೋಷ ಎಲ್ಲವನ್ನೂ ಪಡೆಯುತ್ತಾರೆ ಎಂಬ ನಂಬಿಕೆ ಇದೆ.

ವರಮಹಾಲಕ್ಷ್ಮೀ ವ್ರತ 2024 ಶುಭ ಸಮಯ

ವರಮಹಾಲಕ್ಷ್ಮೀ ವ್ರತ ದಿನಾಂಕ ಆಗಸ್ಟ್ 16

ಸಿಂಹ ಲಗ್ನ ಪೂಜೆ ಮುಹೂರ್ತ (ಬೆಳಿಗ್ಗೆ) – 06:20 AM ರಿಂದ 08:19 AM

ವೃಶ್ಚಿಕ ಲಗ್ನ ಪೂಜೆ ಮುಹೂರ್ತ (ಮಧ್ಯಾಹ್ನ) – 12:20 PM ರಿಂದ 02:30 PM

ಕುಂಭ ಲಗ್ನ ಪೂಜೆ ಮುಹೂರ್ತ (ಸಂಜೆ) – 06:34 PM ರಿಂದ 08:20 PM

ವೃಷಭ ಲಗ್ನ ಪೂಜೆ ಮುಹೂರ್ತ (ಮಧ್ಯರಾತ್ರಿ) – 11:55 PM ರಿಂದ ಆಗಸ್ಟ್ 17 ಬೆಳಗ್ಗೆ 01:58 AM,

ವ್ರತ ಕಥೆ

ಪಾರ್ವತಿ ದೇವಿಯು ತನ್ನ ಪ್ರೀತಿಯ ಪತ್ನಿ ಮತ್ತು ತನ್ನ ಕುಟುಂಬದ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಉಪವಾಸವನ್ನು ಆಚರಿಸುತ್ತಾಳೆ. ಅಂದಿನಿಂದ ದಕ್ಷಿಣ ಭಾರತದಾದ್ಯಂತ ಮಹಿಳೆಯರು ಶ್ರಾವಣ ಮಾಸದ ಕೊನೆ ಶುಕ್ರವಾರದಂದು ವರಲಕ್ಷ್ಮಿ ವ್ರತ ಅಥವಾ ವರಮಹಾಲಕ್ಷ್ಮಿ ವ್ರತವನ್ನು ಆಚರಿಸುವ ಜನಪ್ರಿಯ ಸಂಪ್ರದಾಯವಿದೆ. ಕೆಲವು ಸಂದರ್ಭಗಳಲ್ಲಿ ಮಹಿಳೆಯರು ಮಕ್ಕಳಿಗಾಗಿ ಆಶೀರ್ವದಿಸಬೇಕೆಂದು ವರಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ.

ವರಲಕ್ಷ್ಮಿ ವ್ರತ ವಿಧಾನಗಳು

ಪುರುಷರು ಈ ವ್ರತವನ್ನು ಮಾಡಬಹುದಾದರೂ, ಸಾಮಾನ್ಯವಾಗಿ ಕುಟುಂಬದ ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಪಡೆಯಲು ಉಪವಾಸವನ್ನು ಇರುತ್ತಾರೆ.

*ಈ ಮಂಗಳಕರ ದಿನದಂದು, ಮಹಿಳೆಯರು ಬೇಗನೆ ಎದ್ದು ಸ್ನಾನ ಮಾಡಿ, ವರಲಕ್ಷ್ಮಿಯ ಪೂಜೆಗೆ ಸಿದ್ದತೆ ಮಾಡಿಕೊಳ್ಳುತ್ತಾರೆ.

* ಒಂದು ಕಲಶ ಅಥವಾ ಹಿತ್ತಾಳೆಯ ಬಿಂದಿಗೆಯನ್ನು ತೆಗೆದುಕೊಳ್ಳಲಾಗುತ್ತದೆ. ಕಲಶದ ಚಂಬಿನಲ್ಲಿ ಅಕ್ಕಿ ಅಥವಾ ನೀರು, ನಾಣ್ಯ, ಅಡಿಕೆ, ಅರಿಶಿಣ ಕೊಂಬು, ಲವಂಗ, ಏಲಕ್ಕಿ, ಗೋಡಂಬಿ, ವೀಳ್ಯದೆಲೆಗಳನ್ನು ಹಾಕಲಾಗುತ್ತದೆ.

* ನಂತರ ಇದರ ಮೇಲೆ ತೆಂಗಿನಕಾಯಿ ಇಟ್ಟು ಇದಕ್ಕೆ ಲಕ್ಷ್ಮಿಯ ಮುಖವಾಡವಿಡಲಾಗುತ್ತದೆ. ಅದಕ್ಕೆ ಕುಂಕುಮ, ಅರಿಶಿಣ ಹಚ್ಚಿ ಮತ್ತು ಶ್ರೀಗಂಧದಿಂದ ಸ್ವಸ್ತಿಕ ಚಿಹ್ನೆಯನ್ನು ಬರೆದು, ಸೀರೆ ಉಡಿಸಿ, ಆಭರಣಗಳಿಂದ ಅಲಂಕರಿಸಲಾಗುತ್ತದೆ.

* ಕೊನೆಗೆ ಕಲಶದ ಬಾಯಿಗೆ ಕೆಲವು ಮಾವಿನ ಎಲೆಗಳನ್ನು ಇಟ್ಟು, ಲಕ್ಷ್ಮಿಗೆ ಸೀರೆ, ಬಳೆ, ಅರಿಶಿಣ, ಕುಂಕುಮ, ಹೂವು ಇದೆಲ್ಲವನ್ನೂ ಬಳಸಿ ಅಲಂಕರಿಸಲಾಗುತ್ತದೆ.

* ವಿಧಿವತ್ತಾಗಿ ಪೂಜೆಗೆ ತಯಾರಿ ಮಾಡಿಕೊಂಡು ದೇವಿಗೆ ತಾಜಾ ಸಿಹಿತಿಂಡಿಗಳು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.

*ದೇವರ ಮುಂದೆ ಮನೆಯಲ್ಲಿ ತಯಾರಿಸಿದ ಸಿಹಿತಿಂಡಿಗಳು ಮತ್ತು ನೈವೇದ್ಯಗಳನ್ನು ಇರಿಸಿ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಮಾಡಿ ಉಪವಾಸ ಇರುತ್ತಾರೆ ಮಹಿಳೆಯರು.

*ವರಲಕ್ಷ್ಮಿ ಪೂಜೆಯನ್ನು ಮಾಡುವ ಮಹಿಳೆಯರು ಆಹಾರವನ್ನು ಸೇವಿಸುವುದಿಲ್ಲ.

*ಸಂಜೆಯ ಸಮಯದಲ್ಲಿ ದೇವಿಗೆ ಆರತಿಯನ್ನು ಅರ್ಪಿಸಲಾಗುತ್ತದೆ.

*ಮರುದಿನ, ಕಲಶದ ನೀರನ್ನು ಮನೆಯ ಸುತ್ತಲೂ ಚಿಮುಕಿಸಲಾಗುತ್ತದೆ. ಕಲಶದಲ್ಲಿ ಇದ್ದ ಅಕ್ಕಿಯಿಂದ ಮರುದಿನ ಅಡುಗೆ ಮಾಡಿ ಅದನ್ನು ಪ್ರಸಾದವಾಗಿ ಸ್ವೀಕರಿಸಲಾಗುತ್ತದೆ.

Leave a Reply

Your email address will not be published. Required fields are marked *