ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ ನವದೆಹಲಿ ಇವರಿಂದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಗೆ ಅಡಿಯಲ್ಲಿ ಮಂಜೂರಾಗಿರುವ ಮತ್ತು ಪ್ರಸ್ತುತ ಖಾಲಿ ಇರುವ ಡೆಸಿಗ್ನೇಟೆಡ್ ಎಸ್.ಟಿ.ಐ/ ಆರ್.ಟಿ.ಐ ಕ್ಲಿನಿಕ್ಗಳಲ್ಲಿ ಖಾಲಿ ಇರುವ ಆಪ್ತ ಸಮಾಲೋಚಕರು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಸೂಚಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಆಪ್ತ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು ಹಾಗೂ ಇತರ ವಿವರಗಳು ಈ ಕೆಳಗಿನಂತಿದೆ.
ಹುದ್ದೆಯ ಹೆಸರು: ಆಪ್ತಸಮಾಲೋಚಕರ ಹುದ್ದೆ ಜಿಲ್ಲಾ ಆಸ್ಪತ್ರೆ, ಮಡಿಕೇರಿ. ಹುದ್ದೆಯ ಸಂಖ್ಯೆ: 1 (ಗುತ್ತಿಗೆ ಆಧಾರದ ಮೇಲೆ 1 ವರ್ಷ ಗುತ್ತಿಗೆ ಆಧಾರ) ವೇತನಶ್ರೇಣಿ: ಸಂಚಿತ ಮೊತ್ತ ಮಾಸಿಕ 21,000 ರೂಪಾಯಿ, ಗರಿಷ್ಠ ವಯೋಮಿತಿ: 60 ವರ್ಷ
ಅರ್ಹತೆ- ಸಮಾಜ ಕಾರ್ಯ/ ಮನೋವಿಜ್ಞಾನ/ ಸಮಾಜಶಾಸ್ತ್ರ/ ಮಾನವ ಶಾಸ್ತ್ರ/ ಮಾನವ ಅಭಿವೃದ್ಧಿ/ ನರ್ಸಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಹೊಂದಿದವರು ಅಥವಾ ಸಮಾಜ ಕಾರ್ಯ/ ಮನೋವಿಜ್ಞಾನ / ಸಮಾಜಶಾಸ್ತ್ರ/ ಮಾನವ ಶಾಸ್ತ್ರ/ ಮಾನವ ಅಭಿವೃದ್ಧಿಯಲ್ಲಿ ಪದವಿ ಹೊಂದಿದವರು, ನರ್ಸಿಂಗ್-ಕೌನ್ಸೆಲಿಂಗ್ ನಲ್ಲಿ 3 ವರ್ಷಗಳ ಅನುಭವದೊಂದಿಗೆ / ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಹೊಂದಿದವರು, ಸಮಾಜ ಕಾರ್ಯ / ಮನೋವಿಜ್ಞಾನ / ಸಮಾಜಶಾಸ್ತ್ರ/ ಮಾನವ ಶಾಸ್ತ್ರ/ ಮಾನವ ಅಭಿವೃದ್ಧಿಯಲ್ಲಿ ಪದವಿ ಹೊಂದಿದವರು, ನರ್ಸಿಂಗ್-ಕೌನ್ಸೆಲಿಂಗ್ ನಲ್ಲಿ 1 ವರ್ಷದ ಅನುಭವದೊಂದಿಗೆ / ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದ ಅಡಿಯಲ್ಲಿ ಶಿಕ್ಷಣ ಹೊಂದಿದವರು ಅರ್ಜಿ ಸಲ್ಲಿಸಬಹುದು.
ಆದ್ಯತೆ: ರಾಷ್ಟ್ರೀಯ ಏಡ್ಸ್ ಮತ್ತು ಎಸ್ಟಿಡಿ ನಿಯಂತ್ರಣ ಕಾರ್ಯಕ್ರಮ ಅಥವಾ ಸಮುದಾಯ ಸೆಟ್ಟಿಂಗ್ಗಳ ಅಡಿಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.
ಜ್ಞಾನ ಮತ್ತು ಕೌಶಲ್ಯ
ಅಭ್ಯರ್ಥಿಯು ಎಂಎಸ್ ಆಫೀಸ್ ಇಂಟರ್ನೆಟ್ ಬಳಕೆ ಮತ್ತು ಎಲೆಕ್ಟ್ರಾನಿಕ್ ಮೇಲ್ ಕೆಲಸದ ಜ್ಞಾನದೊಂದಿಗೆ ಕಂಪ್ಯೂಟರ್ ಸಾಕ್ಷರರಾಗಿರಬೇಕು. ತಂಡಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಮತ್ತು ಕಾರ್ಯಕ್ರಮದ ಅಗತ್ಯಕ್ಕೆ ಅನುಗುಣವಾಗಿ ಕೆಲಸ ಮಾಡುವ, ಹೊಂದಿಕೊಳ್ಳುವ ಸಾಮರ್ಥ್ಯವಿರಬೇಕು. ಸರ್ಕಾರದ ಆರೋಗ್ಯ ನೀತಿ ನಿಯಮ ಹಾಗೂ ಸಂಬಂಧಪಟ್ಟ ಕಾರ್ಯಕ್ರಮದ ಬಗ್ಗೆ ಅರಿವು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಓಂಕಾರೇಶ್ವರ ದೇವಸ್ಥಾನ ರಸ್ತೆ, ಮಡಿಕೇರಿ. ಇಲ್ಲಿ ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ-30.10.2024 ಸಂಜೆ 5.00 ಗಂಟೆಯೊಳಗೆ ಅರ್ಜಿ ಮತ್ತು ಮೂಲ ದಾಖಲಾತಿಗಳನ್ನು ಸಲ್ಲಿಸಬೇಕು.
ಅರ್ಜಿಯೊಂದಿಗೆ ವಿದ್ಯಾರ್ಹತೆಯ (ಸ್ನಾತಕೋತ್ತರ ಪದವಿ, ಪದವಿ, ಎಸ್.ಎಸ್.ಎಲ್.ಸಿ) ಅಂಕಪಟ್ಟಿ, ಪ್ರತಿ, ಕಂಪ್ಯೂಟರ್ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿಯೊಂದಿಗೆ ದಿನಾಂಕ 30.10.2024 ಒಳಗೆ ಸಲ್ಲಿಸಬೇಕು. ನಿಗದಿತ ಸಮಯದ ನಂತರದ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಈ ನೇಮಕಾತಿಯು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಮಂಡಳಿ (ಎನ್ಎಸಿಒ) ನವದೆಹಲಿ ಇವರಿಂದ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಎನ್ಎಸಿಪಿ-ವಿ ರ ಮಾರ್ಗಸೂಚಿ ಅನ್ವಯ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು