ಹೆಣ್ಣನ್ನು ಪೂಜ್ಯ ಭಾವನೆಯಿಂದ ನೋಡುವ ಭಾರತ ದೇಶದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ನಿಜಕ್ಕೂ ಕೂಡ, ಆತಂಕ, ಭಯ, ಅಸಹ್ಯ ಮೂಡಿಸುತ್ತಿವೆ. ಒಂದು ಕಡೆ ಅತ್ಯಾಚಾರ ಮಾಡಿ ಭೀಕರವಾಗಿ ಹತ್ಯೆ ಮಾಡುತ್ತಾರೆ. ಮತ್ತೊಂದು ಕಡೆ ಸತ್ತ ಶವದ ನಡುವೆ ಬಲಾತ್ಕಾರಗಳು ನಡೆಯುತ್ತವೆ. ಎಲ್ಲಿಗೆ ಬಂದಿದೆ ಆಧುನಿಕ ಭಾರತ ನವ ಸಮಾಜ.
ಈಗಾಗಲೆ ಸಾಕಷ್ಟು ಚರ್ಚೆಯಲ್ಲಿರುವ ಕೇಸ್ ಇದು, ಕೊಲ್ಕತ್ತಾದ ದೊಡ್ಡ ಆಸ್ಪತ್ರೆ ಆರ್ ಜಿ ಕರ್ ಮೆಡಿಕಲ್ ಕಾಲೇಜ್ ಅಂಡ್ ಹಾಸ್ಪಿಟಲ್ ನಲ್ಲಿ ನಡೆದ ಘಟನೆ ಇದು
Dr. Moumitha Debnath ಎಂಬ ಜೂನಿಯರ್ ಡಾಕ್ಟರ್ ಮೇಲೆ ಅತ್ಯಾಚಾರ ಮಾಡಿದ ಘಟನೆ ನಡೆದಿದೆ ರಾತ್ರಿ 7:30 ರ ಶಿಫ್ಟ್ ಆಕೆಯದಾಗಿತ್ತು, ಆಕೆ ಆಸ್ಪತ್ರೆಯಲ್ಲಿ ಜೂನಿಯರ್ ಡಾಕ್ಟರ್ ಆಗಿದ್ದಳು ಹಾಗೆ ಆಕೆಯ ಬರುವಿಕೆಗಾಗಿ ಇನ್ನೊಬ್ಬ ಜೂನಿಯರ್ ಡಾಕ್ಟರ್ ಗಳು ಕಾಯುತ್ತಿದ್ದರು.
ಫೋನ್ ಗೆ ತುಂಬಾನೇ ಸಲ ಟ್ರೈ ಮಾಡಿದ್ರು ಕೂಡ ಫೋನ್ ಪಿಕ್ ಮಾಡುತ್ತಿಲ್ಲ ಎಂದು, ಎಲ್ಲಾ ಜೂನಿಯರ್ ಡಾಕ್ಟರ್ ಇರುವ ಸೆಮಿನಾರ್ ರೂಮಲ್ಲಿ ಹೋಗಿ ನೋಡಿದಾಗ ಆಶ್ರ‍್ಯಕರ ಸಂಗತಿ ಒಂದು ಕಾದಿತ್ತು.
ಈಚೆಯಿಂದ ನೋಡಿದಾಗ ಆಕೆ ಮಲಗಿದ್ದಾಳೆ ಎಂಬುವಂತೆ ಕಾಣುತ್ತಿತ್ತು ಆದರೆ ಹತ್ತಿರದಿಂದ ನೋಡಿದಾಗ ನಡುಕ ಶುರುವಾಗುತ್ತದೆ, ಯಾಕೆಂದರೆ ಸುತ್ತಲೂ ರಕ್ತ ಹರಡಿತ್ತು, ಅರ್ಧನಗ್ನದಲ್ಲಿರುವ ಶರೀರ ,
ಶರೀರದ ತುಂಬಾ ಗಾಯ ಆಗಿದೆ, ಬಾಯಿ ಮತ್ತೆ ಕಣ್ಣುಗಳಿಂದ ರಕ್ತ ಬರುತ್ತಾನೆ ಇದೆ, ಕಾಲು ಮುರಿದು ಹೋಗಿವೆ, ಕೈ ಮತ್ತೆ ಮುಖದ ತುಂಬಾ ಎಲ್ಲಾ ಗಾಯವಾಗಿದೆ. ನಡುಗುತ ಸೀನಿಯರ್ ಡಾಕ್ಟರ್ ಗೆ ವಿಷಯ ತಿಳಿಸಿದಾಗ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಬಂದು ತನಿಖೆ ನಡೆಸಲು ಶುರು ಮಾಡಿದರು.
ಪೋಸ್ಟ್ ಮರ‍್ಟಂ ಹೇಳುವಂತೆ ವ್ಯಕ್ತಿಯನ್ನ ಉಸಿರಾಡದ ಹಾಗೆ ಬಾಯಿಯನ್ನ ಗಟ್ಟಿಯಾಗಿ ಮುಚ್ಚಿ ಸಾಯಿಸಿದ್ದಾರೆ. ಲೆಫ್ಟ್ ಹ್ಯಾಂಡ್ ರಿಂಗ್ ಫಿಂಗರ್ ಹಾಗೆ ಕಾಲರ್ ಬೋನ್ ಕೂಡ ಮುರಿದು ಹೋಗಿತ್ತು.
ಅಷ್ಟರಲ್ಲೇ ಎಲ್ಲರಿಗೂ ವಿಷಯ ತಿಳಿದು ಆ ಹಾಸ್ಪಿಟಲ್ ಇಂದ ಪ್ರೊಟೆಸ್ಟ್ ಮಾಡುವುದಕ್ಕೆ ಶುರು ಮಾಡಿದ್ದರು. ಕೇವಲ ಕೊಲ್ಕತ್ತಾದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಗೋವಾ ಹಾಗೆ ಕರ್ನಾಟಕದಲ್ಲಿ ಕೂಡ ಮೆಡಿಕಲ್ ಸ್ಟೂಡೆಂಟ್ಸ್ ಪ್ರೊಟೆಸ್ಟ್ ಶೋರೂ ಮಾಡಿದ್ರು.
ಆದರೆ ಹಾಸ್ಪಿಟಲ್ ನವರು ಹಾಗೂ ಪೊಲೀಸ್ ನವರು ಮಾತ್ರ ಇದು ಕ್ಲಿಯರ್ ಆಗಿ ರೇಪ್ ಅಂಡ್ ಮಾಡೋ ಕೇಸ್ ಅಂತ ತಿಳಿದಿದ್ದರು ಸಹ ಆತ್ಮಹತ್ಯೆ ಕೇಸ್ ಅಂತ ಚಿತ್ರಕರಿಸುತ್ತಿದ್ದರು. ಯಾಕೆ ಅಂದ್ರೆ ಲೈಂಗಿಕವಾಗಿ ಅತ್ಯಾಚಾರ ಎಸೆದ ಸಂಜಯ್ ರಾಯ್ ಎಂಬ ವ್ಯಕ್ತಿ ಒಬ್ಬ ಸಿವಿಕ್ ವ್ಯಾಲೆಂಟಿಯರ್
ಅಂದ್ರೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡೋದು ಅಥವಾ ಪೊಲೀಸರಿಗೆ ಸಹಾಯ ಮಾಡಲು ನೇಮಕವಾದವರು ಅಂತ. ಪ್ರಸ್ತುತ ಈ ಕೇಸ್ ಸಿಬಿಐ ಹ್ಯಾಂಡ್ ಓವರ್ ನಲ್ಲಿ ಇದೆ, ಸಿಬಿಐ ನ್ಯಾಯವಾಗಿ ಇನ್ವೆಸ್ಟಿಗೇಷನ್ ಮಾಡುತ್ತಾ ಇಲ್ವಾ ಅನ್ನೋದು ಕಾದು ನೋಡಬೇಕಿದೆ.
ಹೀಗೆ ಅಸ್ಸಾಂನಲ್ಲಿ ಕೂಡ ಮೂರು ಜನ ಸೇರಿ ಒಬ್ಬ 14 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸೆದು ಅರೆಸ್ಟ್ ಆಗಿರುವ ಸಂಗತಿ ಕೂಡ ನಡೆದಿದೆ.
ಉತ್ತರ ಪ್ರದೇಶದ ಹೈಟೆಕ್ ಸಿಟಿ ನೋಯ್ಡಾದಲ್ಲಿ ಅಲ್ಲಿನ ಪೋಸ್ಟಮರ‍್ಟಂ ಹೌಸ್ ನ ಡೀಪ್ ಫ್ರೀಜರ್ ಕೋಣೆಯಲ್ಲಿ ಸ್ಚಚ್ಛತಾ ಸಿಬ್ಬಂದಿಯೊಬ್ಬ ಮೃತ ದೇಹಗಳ ನಡುವೆ ಮಹಿಳೆಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಮೂವರನ್ನು ಪೋಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಇಡೀ ಭೂಮಿ ಹಾಗೂ ದೇಶವನ್ನು ಹೆಣ್ಣಿಗೆ ಹೊಲಿಸುವ ಭಾರತ ದೇಶದಲ್ಲಿ ಇಂಥ ಕೀಳು ಮಟ್ಟದ ಮನಸ್ತತಿಯುಳ್ಳ ಜನರಿದ್ದರೆ. ಇದೆಲ್ಲವನ್ನು ನೋಡುತ್ತಿದ್ದರೆ ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಸುರಕ್ಷತೆ ಇದ್ಯಾ ಅಂತ ಅನ್ನಿಸುತ್ತಾ..? ಇನ್ನು ಇತಹ ಕೃತ್ಯ ಮಾಡುವವರಿಗೆ ಕಾನೂನು ಕಠಿಣ ಶಿಕ್ಷೆ ಒದಗಿಸಬೇಕು.
ವರದಿ: ರಂಜಿತಾ, ಪ್ರಗತಿ ಟಿ.ವಿ, ತುಮಕೂರು