ಬೆಂಗಳೂರು : ಈಗ ಎಲ್ಲಾ ಕಡೆ ಡಿಜಿಟಲ್ ಪಾವತಿ ಸರ್ವೆ ಸಾಮಾನ್ಯವಾಗಿದೆ. ಪ್ರತಿಯೊಂದಕ್ಕೂ UPIನಲ್ಲೇ ಪೇಮೆಂಟ್ ಮಾಡುತ್ತಾರೆ, UPI ಎಷ್ಟು ಉಪಯೋಗವಿದೆಯೋ ಅದರಲ್ಲಿ ಕೆಲವು ಅಡೆಚನೆಗಳು ಸಹ ಇದೆ. ಇತ್ತೀಚಿಗೆ ಸೈಬರ್ ಕ್ರೈಂ ಸಂಖ್ಯೆಗಳು ಹೆಚ್ಚಾಗುತ್ತಿದೆ.
ಇದರ ಬೆನ್ನಲ್ಲೇ UPI ಪೇಮಂಟ್ ನಲ್ಲಿ ಕೆಲವು ಬದಲಾವಣೆಗಳನ್ನ ತಂದಿದೆ. ನಮ್ಮ ಬಾಕಿ ಮೊತ್ತ ವೀಕ್ಷಣೆ ಮತ್ತು ಹೊಸ ಬ್ಯಾಂಕ್ ಅಕೌಂಟ್ ಸೇರ್ಪಡಿಕೆಯಲ್ಲಿ ಕಡಿವಾಣ ಹಾಕಿದೆ. ದಿನದಲ್ಲಿ 50 ಬಾರಿ ಮಾತ್ರ ಬಾಕಿ ಮೊತ್ತ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಒಂದು ದಿನದಲ್ಲಿ ಒಂದು UPI ಖಾತೆಗೆ 25 ಬ್ಯಾಂಕ್ ಆಕೌಂಟ್ ಸೇರ್ಪಡಿಕೆ, ಈ ನಿಯಮ ಅಳವಡಿಕೆಯಿಂದ ಸರ್ವರ್ ಸಮಸ್ಯೆ ಕಡಿಮೆಯಾಗುತ್ತದೆ
ಸ್ವಯಂಚಾಲಿತ ಪಾವತಿ ಮತ್ತು ವಿಫಲ ಪಾವತಿಗಲ್ಲಿ ಕಡಿವಾಣ
ಸ್ವಯಂಚಾಲಿತ ಪಾವತಿ(Subscriptions, bills, EMI’s) ಇವುಗಳಿಗಾಗಿ ಪ್ರತ್ಯೇಕ ಕಾಲಾವಕಾಶ . ಬೆಳಿಗ್ಗೆ ಹತ್ತು ಗಂಟೆಗು ಮುನ್ನ ಮಧ್ಯಾಹ್ನ 1 ರಿಂದ ಸಂಜೆ 5 ರವರೆಗೆ, ರಾತ್ರಿ 9:30ರ ನಂತರ ಮಾಡಬಹುದು, ವಿಫಲ ಪಾವತಿಗಳ ಸ್ಥಿತಿಗತಿ ತಿಳಿಯಲು 3 ಬಾರಿ ಅವಕಾಶ, 90 ಸೆಕೆಂಡ್ಸ್ ಅಂತರದಲ್ಲಿ
ಹೆಚ್ಚುವರಿ ಉಪ್ಡೇಟ್ಸ್
ಹಣ ಸ್ವೀಕರಿಸುವವರ ಹೆಸರು ಪಾವತಿ ಮಾಡುವ ಮುನ್ನವೇ ತೋರಿಸಲ್ಪಡುತ್ತದೆ. ವಹಿವಾಟಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ( ಒಮ್ಮೆಗೆ ಒಂದು ಲಕ್ಷ ಪಾವತಿಸಬಹುದು, ಶಿಕ್ಷಣ ವಹಿವಾಟಿನಲ್ಲಿ 5 ಲಕ್ಷ), UPI ಮಾದರಿಯಲ್ಲೇ ಸೃಸ್ಟಿಸಲ್ಪಡುವ ವಂಚಿತ ಅಪ್ಪ್ಲಿಕೆಶನ್ಸ್ ಅಥವಾ ಸಾಫ್ಟ್ವೇರ್ಸ್ಗಳಿಗೆ ಕಡಿವಾಣ ಹಾಕಲಾಗುವುದು