ಅರುಣಾಚಲ ಪ್ರದೇಶ : ಈಗಿನ ಕಾಲದ ಜನರು ಸ್ವಾರ್ಥಿಗಳು, ತನ್ನದು ಎಂದು ಯೋಚನೆ ಮಾಡುತ್ತಾರೆ ಬಿಟ್ಟರೆ ಬೇರೆಯವರ ಬಗ್ಗೆ ಯೋಚನೆ ಮಾಡುವುದೇ ಇಲ್ಲ. ಹೀಗಾಗಿ ಈಗಿನ ಜನರಲ್ಲಿ ಇನ್ನೊಬ್ಬರ ಕಷ್ಟಕ್ಕೆ ಮಿಡಿಯುವ ಮನಸ್ಸಾಗಲಿ, ಮಾನವೀಯತೆ ಯಾಗಲಿ ಇಲ್ಲ ಎಂದು ಹೇಳುವುದನ್ನು ನೋಡಿರಬಹುದು. ಇಂತಹ ಜನರ ನಡುವೆ ಒಳ್ಳೆಯ ಮನಸ್ಸಿನ ವ್ಯಕ್ತಿಗಳನ್ನು ಕಂಡಾಗ ಖುಷಿಯಾಗುತ್ತದೆ. ಅದರಲ್ಲಿಯೂ ಕೆಲವರು ಈ ಮೂಕ ಪ್ರಾಣಿಗಳಿಗೆ ನೋವಾದರೂ ಸಹಿಸಿಕೊಳ್ಳಲಾಗದು. ಇದೀಗ ಈ ಪುಟ್ಟ ಬಾಲಕನದ್ದು ಎಷ್ಟು ಒಳ್ಳೆಯ ಮನಸ್ಸು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ. ರೆಕ್ಕೆ ಮುರಿದ ಗಾಯಗೊಂಡಿದ್ದ ಪಾರಿವಾಳವನ್ನುಕೈಯಲ್ಲಿ ಹಿಡಿದುಕೊಂಡು, ಅಳುತ್ತಲೇ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾನೆ ಈ ಪುಟಾಣಿ. ಆದರೆ ಚಿಕಿತ್ಸೆ ನೀಡಿದ್ರು ಪಾರಿವಾಳ ಮೃತ ಪಟ್ಟಿದೆ. ಈ ಘಟನೆಯೂ ಅರುಣಾಚಲ ಪ್ರದೇಶದ ಲೋಂಗ್ಡಿಂಗ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ಬಾಲಕ ಮಾಡಿದ್ದೇನು ಎಂದು ತಿಳಿದ್ರೆ ನಿಮ್ಮ ಕರುಳು ಚುರ್ ಎನ್ನುತ್ತೆ. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
indiatodayne ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತರ ಜೊತೆಯಲ್ಲಿ ರೆಕ್ಕೆ ಮುರಿದು ಗಾಯಗೊಂಡಿದ್ದ ಪಾರಿವಾಳವನ್ನು ಅಳುತ್ತಲೇ ಆಸ್ಪತ್ರೆಗೆ ಕರೆತರುವುದನ್ನು ಕಾಣಬಹುದು. ಇದನ್ನು ಕಂಡ ಆಸ್ಪತ್ರೆಯ ಸಿಬ್ಬಂದಿ ಪಾರಿವಾಳವನ್ನು ಮರದ ಸ್ಟೂಲ್ ಮೇಲೆ ಇಡಲು ಹೇಳಿದ್ದು, ಔಷಧಿ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಆ ಬಾಲಕನು ಮಾತ್ರ ಆತಂಕದಲ್ಲಿಯೇ ಪಾರಿವಾಳದ ಬಳಿಯೇ ನಿಂತಿರುವುದನ್ನು ನೋಡಬಹುದು. ಚಿಕಿತ್ಸೆ ನೀಡಿದರೂ ಕೂಡ ಈ ಪಾರಿವಾಳದ ಪ್ರಾಣ ಪಕ್ಷಿ ಹಾರಿ ಹೋಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಈ ಪುಟ್ಟ ಬಾಲಕ ‘ಅದು ಸತ್ತೊಯ್ತಾ?’ ಎಂದು ಕೇಳುತ್ತಾ ಬಾಲಕ ಅಳುವುದನ್ನು ಕಾಣಬಹುದು. ಈ ವೇಳೆಯಲ್ಲಿ ಆಸ್ಪತ್ರೆಯ ಸಿಬ್ಬಂದಿ ಬಾಲಕನನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದ್ದು ಆತನ ಅಳು ಮಾತ್ರ ನಿಲ್ಲಲಿಲ್ಲ. ಬಿಕ್ಕಳಿಸಿ ಅಳುತ್ತಾ ಸತ್ತ ಪಾರಿವಾಳವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುವುದನ್ನು ಕಾಣಬಹುದು.