‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ ಪ್ರೇಮ್..?

‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ ಪ್ರೇಮ್..?

ಸದ್ಯ ಸ್ಯಾಂಡಲ್ವುಡ್ನಲ್ಲಿ ರಕ್ಷಿತಾ vs ದರ್ಶನ್ ಅಭಿಮಾನಿಗಳು ಎಂಬಂತಾಗಿದೆ. ದರ್ಶನ್ ಫ್ಯಾನ್ಸ್ ನಡೆಗೆ ರಮ್ಯಾ  ಆಕ್ರೋಶ ಹೊರಹಾಕಿದ್ದಾರೆ. ಅವರು ಕಳಿಸುತ್ತಿರುವ ಅಶ್ಲೀಲ ಸಂದೇಶಗಳ ಸ್ಕ್ರಿನ್ಶಾಟ್ನ ರಮ್ಯಾ ಪೋಸ್ಟ್ ಮಾಡಿದ್ದಾರೆ. ರಮ್ಯಾ ಪರ ಕೆಲವರು ಧ್ವನಿ ಎತ್ತಿದ್ದಾರೆ. ಈಗ ರಕ್ಷಿತಾ ಕೂಡ ರಮ್ಯಾ ಪರ ಬ್ಯಾಟ್ ಬೀಸಿದರೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಕಾರಣ ಆಗಿರೋದು ಅವರ ಪೋಸ್ಟ್. ಅವರು ಕನಿಷ್ಠ ಸಭ್ಯತೆ ಇರಲಿ ಎಂದು ಕೋರಿದ್ದಾರೆ. ಇದು ದರ್ಶನ್ ಫ್ಯಾನ್ಸ್ಗೆ ಹೇಳಿದ್ದಿರಬಹುದು ಎನ್ನಲಾಗುತ್ತಿದೆ.

ಕಿರಿಕ್ ಶುರುವಾಗಿದ್ದು ಎಲ್ಲಿಂದ?

ಸುಪ್ರೀಂಕೋರ್ಟ್ನಲ್ಲಿ ದರ್ಶನ್ ಅರ್ಜಿ ರದ್ದು ಮಾಡಿ ಎಂದು ರಾಜ್ಯ ಸರ್ಕಾರದ ಅರ್ಜಿ ವಿಚಾರಣೆ ನಡೆದಿದ್ದು, ಆದೇಶ ಕಾಯ್ದಿರಿಸಲಾಗಿದೆ. ದರ್ಶನ್ ಜಾಮೀನು ರದ್ದಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಮೂಡಿದೆ. ಸುಪ್ರೀಂಕೋರ್ಟ್ನಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಡೆವಾಗ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ರಮ್ಯಾ ಹೇಳಿದ್ದರು. ಇದರಿಂದ ದರ್ಶನ್ ಫ್ಯಾನ್ಸ್ ಸಿಟ್ಟಾಗಿದ್ದರು. ಅವರು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದಾರೆ. ಇದನ್ನು ರಮ್ಯಾ ಓಪನ್ ಆಗಿ ಹಂಚಿಕೊಂಡಿದ್ದಾರೆ. ಅವರು ಸೈಬರ್ ಠಾಣೆಗೆ ದೂರು ನೀಡುವುದಾಗಿಯೂ ಹೇಳಿದ್ದಾರೆ.

ರಕ್ಷಿತಾ ಸ್ಟೇಟಸ್ನಲ್ಲಿ ಏನಿದೆ?

ರಕ್ಷಿತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಕೆಲ ಇಂಗ್ಲಿಷ್ ಕೋಟ್ಗಳನ್ನು ಸ್ಟೇಟಸ್ಗೆ ಹಾಕಿದ್ದಾರೆ. ‘ನಿಮಗೆ ವ್ಯಕ್ತಿಗಳ ಮಾನಸಿಕ ಆರೋಗ್ಯ ನೋಡಲು ಸಾಧ್ಯವಿಲ್ಲ. ಯಾವಾಗಲೂ ದಯೆ ಇರಲಿ’ ಎಂಬ ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾನು ನಿಜವಾಗಿಯೂ ಏನು ವೈರಲ್ ಆಗಬೇಕೆಂದು ಬಯಸುತ್ತೇನೆ ಎಂದು ನಿಮಗೆ ತಿಳಿದಿದೆಯೇ? ಮೂಲಭೂತ ಮಾನವೀಯ ಸಭ್ಯತೆ’ ಎಂದಿದ್ದಾರೆ ರಕ್ಷಿತಾ.

Leave a Reply

Your email address will not be published. Required fields are marked *