ಕ್ರೀಡಾ ಸಾಧಕರು, ಉತ್ತಮ ಸಂಚಲನ ನೆರವೇರಿಸಿದವರಿಗೆ ಪುರಸ್ಕಾರ

ಕ್ರೀಡಾ ಸಾಧಕರು, ಉತ್ತಮ ಸಂಚಲನ ನೆರವೇರಿಸಿದವರಿಗೆ ಪುರಸ್ಕಾರ

ತುಮಕೂರು: ಜಿಲ್ಲಾಡಳಿತದಿಂದ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ 69 ಮಂದಿ ವಿವಿಧ ಕ್ಷೇತ್ರದ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಸನ್ಮಾನ ನೆರವೇರಿಸುವ ಜೊತೆಗೆ ಕ್ರೀಡಾ ಕ್ಷೇತ್ರದ ಸಾಧಕರು, ಪರೇಡ್‌ನಲ್ಲಿ ಉತ್ತಮ ಪಥ ಸಂಚಲನ ಮಾಡಿದ ತಂಡಕ್ಕೆ ಹಾಗೂ ಮೈದಾಳ ಕೆರೆಕೋಡಿಗೆ ಬಿದ್ದಿದ್ದ ಯುವತಿ ರಕ್ಷಣೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದವರಿಗೆ ಗೌರವ ಸನ್ಮಾನವನ್ನು ಗೃಹ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹಾಗೂ ಗಣ್ಯರು ನೆರವೇರಿಸಿದರು.

ಕ್ರೀಡಾ ಸನ್ಮಾನ ಪುರಷ್ಕೃತರು:ಕಬಡ್ಡಿ ಕ್ರೀಡಾ ಸಾಧಕರಾದ ನಂಜೇಗೌಡ, ಮಹಮ್ಮದ್ ಇಸ್ಮಾಯಿಲ್ ಎಲ್. ಹಾಗೂ ಪಿ.ಎನ್.ರಾಮಯ್ಯ; ಅಥ್ಲೆಟಿಕ್ಸ್ನಲ್ಲಿ ಸಾಧನೆಗೈದ ಟಿ.ಕೆ.ಆನಂದ್, ಟಿ.ಎ.ನರೇಶ್‌ಬಾಬು ಹಾಗೂ ಶಶಾಂಕ್ ವರ್ಮ; ಜಿಮ್ನಾಸ್ಟಿಕ್ಸ್ ಸಾಧಕ ಸುಧೀರ್ ದೇವದಾಸ್; ಕುಸ್ತಿಯಲ್ಲಿ ಉಮೇಶ್; ಖೋ-ಖೋ ಕ್ರೀಡೆಯಲ್ಲಿ ಟಿ.ಎ.ರಾಘವೇಂದ್ರ ಕುಮಾರ್ ಹಾಗೂ ಕು: ಟಿ.ಎನ್. ಹರ್ಷಿತ; ಯೋಗದಲ್ಲಿ ಡಾ: ಎಂ.ಎಸ್. ಜಗದೀಶ ಸೇರಿದಂತೆ ವಿವಿಧ ಕ್ರೀಡೆಯಲ್ಲಿ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತಂದ ಜಿ.ವಿ. ಉಮೇಶ್, ಕು: ಜಿ.ವಿ.ಜಯತೇಷ್ಣ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಉತ್ತಮ ಪಥ ಸಂಚಲನಕ್ಕೆ ಬಹುಮಾನ :ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ಉತ್ತಮ ಪಥ ಸಂಚಲನ ಪ್ರದರ್ಶನ ನೀಡಿದ ಪೊಲೀಸ್ ವಿಭಾಗದ ಜಿಲ್ಲಾ ಸಶಸ್ತç ಮೀಸಲು ಪೊಲೀಸ್ ತಂಡ ಪ್ರಥಮ ಬಹುಮಾನ, ನಾಗರೀಕ ಪೊಲೀಸ್ ತಂಡ ದ್ವಿತೀಯ ಹಾಗೂ ಗೃಹರಕ್ಷಕ ದಳಕ್ಕೆ ತೃತೀಯ ಬಹುಮಾನ ನೀಡಲಾಯಿತು. ಅದೇ ರೀತಿ ಎನ್‌ಸಿಸಿ ವಿಭಾಗದಲ್ಲಿ ಸರ್ವೋದಯ ಕಾಲೇಜಿನ ಬಾಲಕರ ತಂಡ ಪ್ರಥಮ, ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಬಾಲಕರ ತಂಡ ದ್ವಿತೀಯ ಹಾಗೂ ಸಿದ್ಧಗಂಗಾ ಕಾಲೇಜಿನ ಬಾಲಕಿಯರ ತಂಡವು ತೃತೀಯ ಬಹುಮಾನ ಗಳಿಸಿತು. ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕಲ್ಪತರು ರೋಮ್ಸ್ ಮುಕ್ತದಳ ಪ್ರಥಮ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಭಗತ್ ಸಿಂಗ್ ರೋರ‍್ಸ್ ಘಟಕ ದ್ವಿತೀಯ ಹಾಗೂ ಮರಳೂರಿನ ಅಂಕಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ತಂಡವು ತೃತೀಯ ಬಹುಮಾನ ಪಡೆದಿದೆ. ಸೇವಾದಳ ವಿಭಾಗದಲ್ಲಿ ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಭಾರತ ಸೇವಾದಳ(ಬಾಲಕರ ವಿಭಾಗ) ಪ್ರಥಮ, ಬಾಪೂಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಭಾರತ ಸೇವಾದಳ(ಬಾಲಕಿಯರ ವಿಭಾಗ) ದ್ವಿತೀಯ ಹಾಗೂ ಕನ್ನಿಕ ಆಂಗ್ಲ ಶಾಲೆಯ ಭಾರತ ಸೇವಾದಳ(ಬಾಲಕಿಯರ ವಿಭಾಗ) ತೃತೀಯ ಬಹುಮಾನ ಗಳಿಸಿದೆ.

Leave a Reply

Your email address will not be published. Required fields are marked *