ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದ್ದಾನೆ ‘Baahubali’

ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದ್ದಾನೆ 'Baahubali'

ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಾರಥ್ಯದ ‘ಬಾಹುಬಲಿ: ದಿ ಕನ್ಕ್ಲೂಷನ್’ ಏಪ್ರಿಲ್ 28ರಂದು ಎಂಟನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು. ಈ ಸಂದರ್ಭ, ಚಿತ್ರದ ನಿರ್ಮಾಪಕ ಶೋಬು ಯರ್ಲಗಡ್ಡ ಅವರು ‘ಬಾಹುಬಲಿ’ ಚಿತ್ರದ ಮರು ಬಿಡುಗಡೆಯನ್ನು ಘೋಷಿಸಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಮುಖ್ಯಭೂಮಿಕೆಯ ಬ್ಲಾಕ್ಬಸ್ಟರ್ ಚಿತ್ರಗಳ ಮೊದಲ ಭಾಗ 2015ರ ಜುಲೈ 10ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಎರಡನೇ ಭಾಗ 2017ರ ಏಪ್ರಿಲ್ 28ರಂದು ತೆರೆಗಪ್ಪಳಿಸಿತು. ಕಳೆದ ದಿನ ಎರಡನೇ ಭಾಗ 10ನೇ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರೆ, ಮೊದಲ ಭಾಗ 8ನೇ ವಾರ್ಷಿಕೋತ್ಸವದ ಸಮೀಪದಲ್ಲಿದೆ. ಈ ಖುಷಿಯಲ್ಲಿ ಚಿತ್ರ ತಯಾರಕರು ಅಭಿಮಾನಿಗಳಿಗೆ ಹ್ಯಾಪಿ ನ್ಯೂಸ್ ಕೊಟ್ಟಿದ್ದಾರೆ.

ಬಾಹುಬಲಿ 2′ ಚಿತ್ರದ ಎಂಟನೇ ವಾರ್ಷಿಕೋತ್ಸವ ಹಿನ್ನೆಲೆ, ನಿರ್ಮಾಪಕ ಶೋಬು ಯರ್ಲಗಡ್ಡ ಸಿನಿಪ್ರಿಯರೊಂದಿಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಇದೇ ಸಾಲಿನ ಅಕ್ಟೋಬರ್ನಲ್ಲಿ ‘ಬಾಹುಬಲಿ’ಯನ್ನು ಭಾರತದಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರು ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ನಲ್ಲಿನ ನಿಖರ ದಿನಾಂಕ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.

ಅವರ ಪೋಸ್ಟ್ನಲ್ಲಿ, ”ಈ ವಿಶೇಷ ದಿನದಂದು, ಈ ಸಾಲಿನ ಅಕ್ಟೋಬರ್ನಲ್ಲಿ ಬಾಹುಬಲಿ ಚಿತ್ರವನ್ನು ಭಾರತ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರು-ಬಿಡುಗಡೆ ಮಾಡಲು ನಾವು ಪ್ಲ್ಯಾನ್ ಮಾಡುತ್ತಿದ್ದೇವೆ ಎಂಬುದನ್ನು ನಿಮಗೆ ತಿಳಿಸಲು ನಾನು ಸಖತ್ ಥ್ರಿಲ್ ಆಗಿದ್ದೇನೆ. ಇದು ಕೇವಲ ಮರು-ಬಿಡುಗಡೆಯಾಗುವುದಿಲ್ಲ. ಇದು ನಮ್ಮ ಪ್ರೀತಿಯ ಅಭಿಮಾನಿಗಳಿಗೆ ಸಂಭ್ರಮಾಚರಣೆಯ ವರ್ಷವಾಗಿರುತ್ತದೆ. ಮುಂದಿನ ದಿನಗಳಲ್ಲಿ ಕೆಲ ಅದ್ಭುತ ಆಶ್ಚರ್ಯಗಳನ್ನು ನಿರೀಕ್ಷಿಸಬಹುದು. ನಮ್ಮೊಂದಿಗಿರಿ” ಎಂದು ಬರೆಯಲಾಗಿದೆ.

Leave a Reply

Your email address will not be published. Required fields are marked *