‘ಬ್ಯಾಂಗಲ್ ಬಂಗಾರಿ’ಗೆ ಭರ್ಜರಿ ರೆಸ್ಪಾನ್ಸ್, 10 million views.

‘ಬ್ಯಾಂಗಲ್ ಬಂಗಾರಿ’ಗೆ ಭರ್ಜರಿ ರೆಸ್ಪಾನ್ಸ್, 10 million views.

‘ಎಕ್ಕ’ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಕಳೆದ ಕೆಲ ದಿನಗಳಿಂದಲೂ ಎಲ್ಲ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಕಡೆಗಳಲ್ಲಿ ಸಖತ್ ಆಗಿ ಸದ್ದು ಮಾಡುತ್ತಿದೆ. ಯುವರಾಜ್ಕುಮಾರ್-ಸಂಜನಾ ನಟಿಸಿರುವ ಈ ಹಾಡು ಬಿಡುಗಡೆ ಆದ 22 ದಿನಗಳಲ್ಲಿ 10 ಮಿಲಿಯನ್ ವೀಕ್ಷಣೆ ಗಳಿಸಿಕೊಂಡಿದೆ. ಹಾಡು ಸಖತ್ ವೈರಲ್ ಆಗಿದ್ದು, ಈ ಬಾರಿ ಗಣಪತಿ ಹಬ್ಬದಲ್ಲೂ ಸಖತ್ ಮಿಂಚುವುದು ಖಾತ್ರಿ ಆಗಿದೆ.

ಯುವ ರಾಜ್ಕುಮಾರ್ ನಟಿಸಿರುವ ‘ಎಕ್ಕ’ ಸಿನಿಮಾದ ಬ್ಯಾಂಗಲ್ ಬಂಗಾರಿ ಹಾಡು ಕಳೆದ ಕೆಲ ದಿನಗಳಿಂದಲೂ ಎಲ್ಲ ಸಾಮಾಜಿಕ ಜಾಲತಾಣ ಹಾಗೂ ಇನ್ನಿತರೆ ಕಡೆಗಳಲ್ಲಿ ಸಖತ್ ಆಗಿ ಸದ್ದು ಮಾಡುತ್ತಿದೆ. ಯಾವ ಆಟೊ, ಟ್ಯಾಕ್ಸಿ ಹೊಕ್ಕಿದರೂ ಇದೇ ಹಾಡು ಕೇಳಿ ಬರುತ್ತಿದೆ. ಯೂಟ್ಯೂಬ್ನಲ್ಲಂತೂ ಜನ ಲೂಪ್ನಲ್ಲಿ ಈ ಹಾಡು ಕೇಳುತ್ತಿದ್ದಾರೆ. ಹಾಡಿನ ಮಜವಾದ ಸಾಹಿತ್ಯ, ಹಾಡಿರುವ ರೀತಿಗೆ ಕೇಳುಗರು ಫಿದಾ ಆಗಿದ್ದಾರೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಲವರು ರೀಲ್ಸ್ ಸಹ ಮಾಡಿದ್ದಾರೆ. ಇದೀಗ ಈ ಹಾಡು ಹೊಸ ದಾಖಲೆ ಬರೆದಿದ್ದು ಯೂಟ್ಯೂಬ್ನಲ್ಲಿ 10 ಮಿಲಿಯನ್ ವೀಕ್ಷಣೆ ಪಡೆದಿದೆ.

ಕನ್ನಡದಲ್ಲಿ ಈಗಾಗಲೇ ಕೆಲವು ಒಳ್ಳೆಯ ಹಾಡುಗಳನ್ನು ಹಾಡಿರುವ ಆಂಟೊನಿ ದಾಸನ್ ಅವರು ‘ಬ್ಯಾಂಗಲ್ ಬಂಗಾರಿ’ ಹಾಡನ್ನು ಹಾಡಿದ್ದಾರೆ. ಆಂಟೊನಿ ಅವರು ಈ ಹಿಂದೆ ‘ಟಗರು ಬಂತು ಟಗರು’, ‘ಭೀಮ’ ಸಿನಿಮಾದ ‘ಸೂರಿ ಅಣ್ಣ’ ಇನ್ನೂ ಕೆಲವಾರು ಹಿಟ್ ಹಾಡುಗಳನ್ನು ಕನ್ನಡದಲ್ಲಿ ಹಾಡಿದ್ದಾರೆ. ಇದೀಗ ‘ಬ್ಯಾಂಗಲ್ ಬಂಗಾರಿ’ಗೂ ತಮ್ಮ ದನಿ ನೀಡಿದ್ದಾರೆ. ‘ಎಕ್ಕ’ ಸಿನಿಮಾಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದು, ಯುವಜನೆತೆಗೆ ಇಷ್ಟವಾಗುವ ಹಾಡುಗಳನ್ನು ಚರಣ್ ನೀಡಿದ್ದಾರೆ. ಹಾಡಿಗೆ ಯುವ-ಸಂಜನಾ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಹಾಡು ಯೂಟ್ಯೂಬ್ನಲ್ಲಿ ಬಿಡುಗಡೆ ಆದ ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿದೆ. ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ.

ತನ್ನಿಷ್ಟದ ಹುಡುಗಿಗೆ ಬಳೆ ತೊಡಿಸಿದಾಗ ಹುಡುಗ ಖುಷಿಯಿಂದ ಹಾಡುವ ಹಾಡು ಇದಾಗಿದೆ. ಈಗಾಗಲೇ ಹಲವಾರು ಮಂದಿ ಸಿನಿಮಾ ಹಾಗೂ ಕಿರುತೆರೆ ಸೆಲೆಬ್ರಿಟಿಗಳು ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ತಮ್ಮದೇ ರೀತಿಯಲ್ಲಿ ಸ್ಟೆಪ್ಪುಗಳನ್ನು ಹಾಕಿ, ರೀಲ್ಸ್ ಮಾಡಿದ್ದಾರೆ. ಸ್ವತಃ ಯುವರಾಜ್ ಕುಮಾರ್ ಸಹ ಹಲವರೊಟ್ಟಿಗೆ ‘ಬ್ಯಾಂಗಲ್ ಬಂಗಾರಿ’ ಹಾಡಿಗೆ ಸ್ಪೆಟ್ಟು ಹಾಕಿ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ನಟಿ ಸಂಜನಾ ಹಾಗೂ ಯುವರಾಜ್ ಅವರ ಕೆಮಿಸ್ಟ್ರಿ ಹಾಡಿನಲ್ಲಿ ಬಹಳ ಚೆನ್ನಾಗಿ ಮೂಡಿ ಬಂದಿದೆ. ಈ ವರ್ಷದ ಗಣೇಶ ಹಬ್ಬದಲ್ಲಂತೂ ಈ ಹಾಡು ಮಿಂಚುವುದು ಪಕ್ಕಾ ಆಗಿದೆ.

‘ಎಕ್ಕ’ ಸಿನಿಮಾವನ್ನು ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಇಡೀ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಡೆಡ್ಲಿ ಸೋಮ ಖ್ಯಾತಿಯ ನಟ ಆದಿತ್ಯ ನಟಿಸಿದ್ದಾರೆ. ಬಾಲಿವುಡ್ನ ಅತುಲ್ ಕುಲಕರ್ಣಿ ಕೂಡ ನಟಿಸಿದ್ದಾರೆ. ಇವರಲ್ಲದೆ ಈ ಚಿತ್ರದಲ್ಲಿ ಸಂಜನಾ ಆನಂದ್ , ಸಂಪದಾ ಸೇರಿ ಇಬ್ಬರು ನಾಯಕಿಯರಿದ್ದಾರೆ. ಜುಲೈ-18 ರಂದು ಎಕ್ಕ ಸಿನಿಮಾ ಬಿಡುಗಡೆಯಾಗುತ್ತಿದ್ದು, ಯುವರಾಜ್ ಕುಮಾರ್ ಎರಡನೇ ಸಿನಿಮಾ ಇದಾಗಿದೆ.

Leave a Reply

Your email address will not be published. Required fields are marked *