ಬೆಂಗಳೂರು : ಸ್ವಾತಂತ್ರ್ಯ ಪೂರ್ವದಲ್ಲಿ ಸಮರ್ಪಕ ವೈದ್ಯಕೀಯ ಚಿಕಿತ್ಯೆ ಲಭ್ಯವಿರಲಿಲ್ಲ, ಆಧುನಿಕ ವೈದ್ಯ ಪದ್ದತಿಯಿಂದ ಮನುಷ್ಯರ ಜೀವಿತ ಅವಧಿ ಹೆಚ್ಚಳ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು
ಜಯನಗರ: ಎನ್.ಎಮ್.ಕೆ.ಆರ್.ವಿ.ಕಾಲೇಜು ಮಂಗಳ ಮಂಟಪದಲ್ಲಿ ಇಂಟರ್ ನ್ಯಾಷನಲ್ ಸೊಸೈಟಿ ಆಫ್ ಜೀನ್ ಮತ್ತು ಸೆಲ್ ಥೆರಪಿಯ 6ನೇ ವಾರ್ಷಿಕ ಸಮ್ಮೇಳನ ನಡೆಯಿತು
ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ಜೀನ್ ಥೆರಪಿ ರಿಸರ್ಚ್ ನಿಂದ ವೈದ್ಯಕೀಯ ಲೋಕದಲ್ಲಿ ಹಲವಾರು ರೋಗ ವಾಸಿ ಮಾಡಲು ಅನುಕೂಲವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿ ನೂತನ ಅವಿಷ್ಕಾರವಾಗುತ್ತಿದೆ. ಸಂಪ್ರಾದಯಿಕ ವೈದ್ಯಕೀಯ ಪದ್ದತಿ ಎಲ್ಲ ದೇಶಗಳಲ್ಲಿ ಇದೆ.
ಮೈಕ್ರೋಸ್ಕೂಪ್ ಮೂಲಕ ನೋಡಿದಾಗ ಜೀವಾಣುಗಳ ಕಾರ್ಯಚಲನೆ ಏನು ಎಂಬುದು ತಿಳಿಯುತ್ತದೆ. ವಿಜ್ಞಾನ ಕ್ಷೇತ್ರದಲ್ಲಿ ಹಲವಾರು ರೋಗಗಳಿಗೆ ಚಿಕಿತ್ಯೆ ಕಂಡುಹಿಡಿದಿರುವ ಕಾರಣದಿಂದ ಮನುಷ್ಯರ ಜೀವಿತ ಅವಧಿ ಹೆಚ್ಚಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಅತಿ ಕಡಿಮೆ ವಯಸ್ಸಿನಲ್ಲಿ ಮರಣ ಹೊಂದುತ್ತಿದ್ದರು, 1980 ನಂತರ ವೈದ್ಯಕೀಯ ಕ್ಷೇತ್ರದಲ್ಲಿ ನೂತನ ಸಂಶೋಧನೆ,ಅವಿಷ್ಕಾರಗಳಿಂದ ಹಲವಾರು ರೋಗಗಳಿಗೆ ಚಿಕಿತ್ಯೆ ಲಭ್ಯವಿದೆ.
ಕಾರ್ಯಕ್ರಮದಲ್ಲಿ ಚೀನಾದ ಪಾಂಡಾ ಡಾಗ್ ಜನನವಾಗಿದ್ದ. ವಿಶ್ವದಲ್ಲಿ ಕಂದು ಮತ್ತು ಬಿಳಿ ಬಣ್ಣದ ಮಿಶ್ರಿತ ವಿಶ್ವದ ಏಕೈಕ ಪಾಂಡಾ ಡಾಗ್ 30ಕೋಟಿ ರೂಪಾಯಿ ಬೆಲೆಬಾಳುವ ಶ್ವಾನವಾಗಿದ್ದು ಇದರ ಮಾಲಿಕರಾದ ಸತೀಶ್ ಕ್ಯಾಡಬೊಮ್ಸ್ ರವರ ಜೊತೆಯಲ್ಲಿ ಅಂತರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಡಾ.ಸುಬ್ರಮ್ಯಣಂ, ಡಾ.ಸತ್ಯಪ್ರಭ, ರುಬಿನ್ ರಾಜ್, ಡಾ.ಬೃಂದಾದೇವಿ, ಡಾ.ವಿದ್ಯಾ ನಿರಂಜನ್, ಡಾ.ಭುವನೇಶ್ವರಿ, ಪುವನೇಶ್ವರಿ, ಜಯರಾಮ್ ರೆಡ್ಜಿ, ಪಾಚಮುತ್ತು ಅಣ್ಣಮಲೈ, ನೇಹಾರಾಟಿ, ಉಮೇಶ್ ಪಾಂಡೆರವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.