Attack On Darshan: ರಾಜ್ಯ ರಾಜಧಾನಿಯಲ್ಲಿ ಮತ್ತೆ ಹಲ್ಲೆ, ಕೊಲೆಯ ಯತ್ನದಂತಹ ಪ್ರಕರಣಗಳು ಹೆಚ್ಚಾಗುತ್ತಲಿವೆ. ಅದರಲ್ಲೂ ಯಾರಾದರೂ ಬೆಳೆಯುತ್ತಾರೆ ಅಂದರೆ ತುಳಿಯುವವರು ಒಂದು ಕಡೆಯಾದರೆ, ಮತ್ತೊಂದೆಡೆ ಕೆಲವರು ಕೊಲೆ ಹಂತಕ್ಕೂ ಹೋಗಿರುವ ಉದಾಹರಣೆಗಳಿವೆ. ಇದೀಗ ದರ್ಶನ್ ಮೇಲೆ ಹಲ್ಲೆ ನಡೆಸಿರುವ ಘಟನೆ ಆರ್ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸಾಮಾನ್ಯ ಜನರು ಜೀವನ ಸಾಗಿಸುವುದೇ ಕಷ್ಟವಾಗಿಬಿಟ್ಟಿದೆ. ಅದರಲ್ಲೂ ದೂರದ ಊರುಗಳಿಂದ ಬಂದು ಇಲ್ಲಿ ಯಾವುದೋ ಒಂದು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿರುತ್ತಾರೆ. ಅಂತಹವರ ಮೇಲೂ ಕಳ್ಳ-ಕಾಕರ ಕಣ್ಣು ಬಿಟ್ಟು ಹಲ್ಲೆಯ ಹಂತಕ್ಕೂ ಹೋಗಿಬಿಡುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ಇದೀಗ ನಗರದಲ್ಲಿ ನಡೆದಿದೆ.
ಸಹೋದ್ಯೋಗಿ ಬೆಳವಣಿಗೆಯನ್ನು ಸಹಿಸದೇ ಪಾರ್ಟಿಯಲ್ಲೇ ಬಿಯರ್ ಬಾಟಲ್ನಿಂದ ಹಲ್ಲೆ ಮಾಡಿರುವ ಘಟನೆ ಆರ್ಆರ್ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದರ್ಶನ್ ಹಲ್ಲೆಗೆ ಒಳಗಾದವರಾಗಿದ್ದಾರೆ.
ರಾಜರಾಜೇಶ್ವರಿ ನಗರದ ಗ್ರೀನ್ ಟ್ರೆಂಡ್ಸ್ ಸೆಲ್ಯೂನ್ನಲ್ಲಿ ದರ್ಶನ್ ಎಂಬ ಯುವಕ ಕೆಲಸ ಮಾಡುತ್ತಿದ್ದ. ದರ್ಶನ್ ಕೇವಲ 10 ದಿನಗಳ ಹಿಂದೆಯಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದು, ಅಂಗಡಿಯಲ್ಲಿ ವ್ಯಾಪಾರ ಸಹ ಚೆನ್ನಾಗಿ ನಡೆಯುತ್ತಿತ್ತು. ಇದೇ ಕಾರಣಕ್ಕೆ 11 ದಿನಕ್ಕೆ ಮಾಲೀಕ ಪಾರ್ಟಿ ಆಯೋಜನೆ ಮಾಡಿದ್ದ.
ಪಾರ್ಟಿ ವೇಳೆ ದರ್ಶನ್ ಬಂದ ಮೇಲೆ ವ್ಯಾಪಾರ ಚೆನ್ನಾಗಿ ಆಗುತ್ತಿದೆ ಎಂದು ಮಾಲೀಕ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಈ ಸಮಯದಲ್ಲಿ ಅಲ್ಲೇ ಇದ್ದ ಮತ್ತೋರ್ವ ಉದ್ಯೋಗಿ ರಾಹುಲ್ ಏನೋ ಜಾಸ್ತಿ ಮೆರಿತಿದ್ಯಾ ಎಂದು ದರ್ಶನ್ ಮೇಲೆ ಬಿಯರ್ ಬಾಟಲ್ನಿಂದದ ಹಲ್ಲೆ ನಡೆಸಿದ್ದಾನೆ ಎಂದು ನ್ಯೂಸ್ ಫಸ್ಟ್ ಕನ್ನಡ ವರದಿ ಮಾಡಿದೆ.
ಇನ್ನು ಘಟನೆಯಲ್ಲಿ ಗಾಯಗೊಂದ ದರ್ಶನ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯನ್ನು ರಾಜರಾಜೇಶ್ವರಿ ನಗರ ಪೊಲೀಸರು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಇನ್ನೂ ಬೆಂಗಳೂರಿಗೆ ಬಂದು ಸಣ್ಣಪುಟ್ಟ ವ್ಯಾಪಾರಿಗಳಿಗೆ ಕಿವಿ ಮಾಡು ಏನೆಂದರೆ, ನಿಮ್ಮ ವ್ಯಾಪಾರ ಎಷ್ಟೇ ಚೆನ್ನಾಗಿ ನಡೆಯಲಿ ಆ ಬಗ್ಗೆ ಯಾರ ಬಳಿಯೂ ಬಿಟ್ಟು ಕೊಡಬೇಡಿ. ಯಾಕಂದ್ರೆ ಇಂತಹ ಕಿಡಿಗೇಡಿಗಳ ಕಣ್ಣು, ಅದರಲ್ಲೂ ನಿಮ್ಮ ಅಕ್ಕಪಕ್ಕದಲ್ಲಿದ್ದವರೇ ನಿಮಗೆ ತೊಂದರೆ ತಂದೊಡ್ಡುವ ಸಾಧ್ಯತೆಗಳಿರುತ್ತವೆ.