ಬೆಂಗಳೂರು || ಕಾರಿಗೆ ಗುದ್ದಿ ಮಾಲೀಕರಿಗೆ ನಿಂದಿಸಿದ ಆಟೋ ಚಾಲಕ, ಆಗಿದ್ದೇನು

ಬೆಂಗಳೂರು || ಕಾರಿಗೆ ಗುದ್ದಿ ಮಾಲೀಕರಿಗೆ ನಿಂದಿಸಿದ ಆಟೋ ಚಾಲಕ, ಆಗಿದ್ದೇನು

ಬೆಂಗಳೂರು: ಬೆಂಗಳೂರಿನಲ್ಲಿ ಆಗಾಗ್ಗೆ ಈ ರೋಡ್ ರೇಜ್ನಂತಹ ಘಟನೆಗಳು ನಡೆಯುತ್ತಲೆ ಇವೆ. ಸಂಚಾರ ನಿಯಮ ಅದೆಷ್ಟೆ ಕಟ್ಟುಟ್ಟಾಗಿ ಜಾರಿಗೆ ತಂದರು ಒಂದಲ್ಲಾ ಒಂದು ಕಾರಣಕ್ಕೆ ಇಂತಹ ಪ್ರಕರಣಗಳು ವರದಿ ಆಗುತ್ತಿದೆ. ಬೆಂಗಳೂರಿನ ನಾಯಂಡಹಳ್ಳಿ ಓಆರ್ಆರ್ ರಸ್ತೆಯಲ್ಲಿ ಕಳೆದ ಶನಿವಾರ ಮತ್ತೊಂದು ಘಟನೆ ನಡೆದಿದೆ. ಆಟೋ ರಿಕ್ಷಾ ಚಾಲಕ ಕಾರಿಗೆ ಗುದ್ದಿದ್ದಲ್ಲದೇ ನಿಂದಿಸಿದ ವಿಡಿಯೋ ‘ಕರ್ನಾಟಕ ಪೋರ್ಟ್ಫೊಲಿಯೋ’ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

ಬೆಂಗಳೂರಿನಲ್ಲಿ ಕುಟುಂಬಸ್ಥರು ಇರುವ ಕಾರು, ಬೈಕ್ಗಳ ಮೇಲೆಯೇ ಇಂತಹ ಘಟನೆಗಳು ನಡೆಯುತ್ತಿವೆ. ಬಾಯಿ ಮಾತಿನಲ್ಲಿ ಮುಗಿಯುವ ಚಿಕ್ಕ ಪುಟ್ಟ ಘಟನೆಗಳು ವಾಹನ ಅಡ್ಡಗಟ್ಟಿ ಹಲ್ಲೆಯ ಮಟ್ಟಕ್ಕೆ ಹೋಗಿತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.

ಈ ನಾಯಂಡಹಳ್ಳಿಯ 4ನೇ ಮುಖ್ಯರಸ್ತೆಯಲ್ಲಿ ನಡೆದ ಘಟನೆಯ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಳ್ಳಲಾಗಿದೆ. ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಸುರಕ್ಷತೆ ಕೊರತೆಯನ್ನು ಇದು ಎತ್ತಿ ತೋರಿಸುವಂತಿದೆ. ಇಂತಹ ಘಟನೆಗಳಿಂದ ಜನರು ಆತಂಕಗೊಂಡಿದ್ದಾರೆ.

KA01AD**** ನೋಂದಣಿ ಸಂಖ್ಯೆಯ ಆಟೋ-ರಿಕ್ಷಾ ಚಾಲಕ ಕಾರಿನ ಎಡಬದಿಯ ಕಾರಿನ ಮಿರ್ಗೆ ಗುದ್ದಿ ಆಕ್ರೋಶ ವ್ಯಕ್ತಪಡಿಸಿದ್ದು ಕಾಣಿಸುತ್ತದೆ. ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಬೈಯುತ್ತಲೇ ಕಾರಿನ ಎಡಬದಿಗೆ ಬಂದು ಕೊಳಕು ಭಾಷೆಯಲ್ಲಿ ನಿಂದಿಸಿದ್ದಾನೆ. ಜವಾಬ್ದಾರಿಯುತಿವಾಗಿ ಕಾಯು ಓಡಿಸುವಂತೆ ತಿಳಿ ಹೇಳಿದ್ದರೆ ಮುಗಿಯುವ ಈ ಘರ್ಷನೆಯನ್ನು ಮತ್ತೊಂದು ಹಂತಕ್ಕೆ ಆತ ಕೊಂಡ್ಯೊಯ್ದಿದ್ದಾನೆ ಎಂದು ತಿಳಿದು ಬಂದಿದೆ. ಭಯಭೀತರಾದ ಕಾರಿನಲ್ಲಿದ್ದ ಕುಟುಂಬ ಕಾರಿನಲ್ಲಿ ಕುಟುಂಬ ಸಮೇತರಾಗಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆಟೋ ಚಾಲಕನ ವರ್ತನೆಗೆ ಅವರು ಭಯಭೀತರಾದರು. ಭದ್ರತೆಯ ಕೊರತೆ, ಬಹಿರಂಗ ನಿಂದನೆಗಳನ್ನು ಕಾರು ಮಾಲೀಕ, ಕುಟುಂಬಸ್ಥರು ಎದುರಿಸಿದ್ದಾರೆ. ಜನನಿಬಿಡ ರಸ್ತೆಗಳಲ್ಲಿಯೇ ಇಂತಹ ಘಟನೆ ನಡೆದಿದೆ. ಕಾರು, ಆಟೋ ಅಕ್ಕಪಕ್ಕ ವಾಹನಗಳು ಸಂಚರಿಸುತ್ತಿದ್ದ ಆಟೋ ಚಾಲಕನ ವರ್ತನೆ ಖಂಡನೀಯವಾಗಿದೆ.

ಕಳೆ ಶನಿವಾರ ಡಿಸೆಂಬರ್ 7ರಂದು ಘಟನೆ ನಡೆದಿದ್ದು, ಟ್ರಾಫಿಕ್ ನಿಯಮ, ರಸ್ತೆ ಸುರಕ್ಷತೆ ಕುರಿತು ಇನ್ನಷ್ಟು ಅರಿವು, ಕಠಿಣ ಕ್ರಮ ಜಾರಿಗೆ ತರುವ ಅಗತ್ಯವನ್ನು ಇದು ಒತ್ತಿ ಹೇಳುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ದಾರೆ. ಈ ಹಿಂದಿನಿಂದಲೂ ನಗರದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ರಾತ್ರಿ, ಬೆಳಗಿನ ಜಾವ ನಡೆಯುತ್ತಿವೆ. ರೋಡ್ ರೇಜ್ ನಡೆಯದಂತೆ ಕ್ರಮ ವಹಿಸಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಇಂತಹ ಘಟನೆಗಳಿಗೆ ಶಾಸ್ವತ ಕಾನೂನು ತರಬೇಕು. ನಾಗರಿಕರ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ತಪ್ಪು ಮಾಡಿದವರಿಗೆ ನೀಡುವ ಶಿಕ್ಷ ಇತರರನ್ನು ಇಂತಹ ಕೃತ್ಯ ಮಾಡಲು ಭಯ ಹುಟ್ಟಿಸುವಂತಿರಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಸದರಿ ಪ್ರಕರಣದಲ್ಲಿ ಆಟೋ ಚಾಲಕನ ವರ್ತನೆಯನ್ನು ಅವರು ಖಂಡಿಸಿದ್ದಾರೆ.

ಕಳೆ ಶನಿವಾರ ಡಿಸೆಂಬರ್ 7ರಂದು ಘಟನೆ ನಡೆದಿದ್ದು, ಟ್ರಾಫಿಕ್ ನಿಯಮ, ರಸ್ತೆ ಸುರಕ್ಷತೆ ಕುರಿತು ಇನ್ನಷ್ಟು ಅರಿವು, ಕಠಿಣ ಕ್ರಮ ಜಾರಿಗೆ ತರುವ ಅಗತ್ಯವನ್ನು ಇದು ಒತ್ತಿ ಹೇಳುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಹಾಕಿದ್ದಾರೆ. ಈ ಹಿಂದಿನಿಂದಲೂ ನಗರದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ರಾತ್ರಿ, ಬೆಳಗಿನ ಜಾವ ನಡೆಯುತ್ತಿವೆ. ರೋಡ್ ರೇಜ್ ನಡೆಯದಂತೆ ಕ್ರಮ ವಹಿಸಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಇಂತಹ

ಘಟನೆಗಳಿಗೆ ಶಾಸ್ವತ ಕಾನೂನು ತರಬೇಕು. ನಾಗರಿಕರ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ತಪ್ಪು ಮಾಡಿದವರಿಗೆ ನೀಡುವ ಶಿಕ್ಷ ಇತರರನ್ನು ಇಂತಹ ಕೃತ್ಯ ಮಾಡಲು ಭಯ ಹುಟ್ಟಿಸುವಂತಿರಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಸದರಿ ಪ್ರಕರಣದಲ್ಲಿ ಆಟೋ ಚಾಲಕನ ವರ್ತನೆಯನ್ನು ಅವರು ಖಂಡಿಸಿದ್ದಾರೆ.

ಅಜಾಗರೂಕ ಚಾಲನೆ, ಪಾದಾಚಾರಿ ಮಾರ್ಗದ ಮೇಲೆ ವಾಹನ ಸಂಚಾರ, ಇತರ ವಾಹನ ಸವಾರರಿಗೆ ಬೆದರಿಕೆಯಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ವಿರುದ್ಧು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *