ಬೆಂಗಳೂರು || ಬಿ.ಇಡಿ ಕೋರ್ಸ್ ಶುಲ್ಕ ಪಾವತಿ ಅವಧಿ ವಿಸ್ತರಣೆ

ಬೆಂಗಳೂರು || ಬಿ.ಇಡಿ ಕೋರ್ಸ್ ಶುಲ್ಕ ಪಾವತಿ ಅವಧಿ ವಿಸ್ತರಣೆ

ಬೆಂಗಳೂರು: ಬಿ.ಇಡಿ ಕೋರ್ಸ್ಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ವೊಂದು ಬಂದಿದೆ. ಕರ್ನಾಟಕ ಸರ್ಕಾರದ ಕೇಂದ್ರೀಕೃತ ದಾಖಲಾತಿ ಘಟಕವು ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ಸ್ವೊಂದನ್ನು ಕೊಟ್ಟಿದೆ. ಬಿ.ಇಡಿ ಕೋರ್ಸ್ಗಳ ಶುಲ್ಕ ಪಾವತಿಯ ಅವಧಿಯನ್ನು ವಿಸ್ತರಿಸಲಾಗಿದೆ. ಎಸ್.ಎಂ ಕೃಷ್ಣ ಅವರ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಮರಣಾರ್ಥವಾಗಿ ರಾಜ್ಯ ಸರ್ಕಾರವು ಇಂದು (ಡಿಸೆಂಬರ್ 11ಕ್ಕೆ) ಸಾರ್ವತ್ರಿಕ ರಜೆ ಘೋಷಿಸಿತ್ತು. ಹೀಗಾಗಿ, ಇಂದು ಕೊನೆಯಾಗಿದ್ದ ಹಲವು ಪ್ರಮುಖ ವಿಷಯಗಳು ಹಾಗೂ ದಿನಾಂಕಗಳನ್ನು ಬದಲಾಯಿಸಲಾಗಿದೆ.

2024 -25ನೇ ಸಾಲಿನ ಬಿ.ಇಡಿ ಕೋರ್ಸ್ನ ವ್ಯಾಸಾಂಗಕ್ಕಾಗಿ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 1ನೇ ಸುತ್ತಿನ ಸೀಟು ಹಂಚಿಕೆಯ ಪಟ್ಟಿಯನ್ನು ಡಿಸೆಂಬರ್ 6ಕ್ಕೆ ಪ್ರಕಟಿಸಲಾಗಿತ್ತು. ಈ ವಿವರವನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತು. ಇನ್ನು ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್ಲೂನ್ನ ಚಲನ್ ಡೌನ್ಲೋಡ್ ಮಾಡಿಕೊಂಡು ನಿಗದಿತ ದಾಖಲಾತಿ ಶುಲ್ಕವನ್ನು ಎಸ್ಬಿಐ ಬ್ಯಾಂಕಿನಲ್ಲಿ ಪಾವತಿಸಿ ಡಿಸೆಂಬರ್ 11ರ ವರೆಗೆ ವಿಸ್ತರಿಸಲಾಗಿತ್ತು. ಆದರೆ, ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ಬುಧವಾರ ಸಾರ್ವತ್ರಿಕ ರಜೆ ಘೋಷಿಸಲಾಗಿದ್ದು, ಈ ಅವಧಿಯನ್ನು ಇದೀಗ ಡಿಸೆಂಬರ್ 12ರ ವರೆಗೆ (ಗುರುವಾರದ) ವರೆಗೆ ವಿಸ್ತರಿಸಿ ಆದೇಶ ಮಾಡಲಾಗಿದೆ.

ಮಂಗಳೂರು ಪರೀಕ್ಷೆ ಮುಂದೂಡಿಕೆ: ಇನ್ನು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಇನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 11ರಂದು ನಿಗದಿ ಮಾಡಲಾಗಿದ್ದ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ. ಮಂಗಳೂರು ವಿಶ್ವ ವಿದ್ಯಾಲಯದ ಎಲ್ಲಾ ಸಾತ್ನಕ (ಯುಜಿ) ಪದವಿ ಪರೀಕ್ಷೆಗಳನ್ನು ಮುಂದೂಡಿರುವುದಾಗಿ ಮಂಗಳೂರು ವಿಶ್ವವಿದ್ಯಾಲಯವು ಹೇಳಿದೆ. ಇದೀಗ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಮುಂದಿನ ಪರೀಕ್ಷೆ ದಿನಾಂಕಗಳ ಬಗ್ಗೆ ಶೀಘ್ರವೇ ತಿಳಿಸುವುದಾಗಿ ಹೇಳಲಾಗಿದೆ.

Leave a Reply

Your email address will not be published. Required fields are marked *