ಬೆಂಗಳೂರು || BMTC ಹೊಸ ಮಾರ್ಗ ರಿಂಗ್ ರಸ್ತೆ ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು || BMTC ಹೊಸ ಮಾರ್ಗ ರಿಂಗ್ ರಸ್ತೆ ಪ್ರಯಾಣಿಕರಿಗೆ ಅನುಕೂಲ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸಿದೆ. ಈ ಮಾರ್ಗದ ಬಸ್ಗಳು ರಿಂಗ್ ರಸ್ತೆ ಮೂಲಕ ಸಂಚಾರ ನಡೆಸಲಿದ್ದು, ಉದ್ಯೋಗಿಗಳು, ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಆರ್. ಆರ್. ನಗರ, ನಾಗರಭಾವಿ ವೃತ್ತ, ನಾಯಂಡಹಳ್ಳಿ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳನ್ನು ಈ ಬಸ್ ಸಂಪರ್ಕಿಸುತ್ತದೆ.

ಬಿಎಂಟಿಸಿ ಈ ಮಾರ್ಗಕ್ಕೆ 410-FB ಎಂದು ನಾಮಕರಣ ಮಾಡಿದೆ. ಈ ಮಾರ್ಗದ ಬಸ್ಗಳು ಯಶವಂತಪುರದಿಂದ-ಬಿಇಎಂಎಲ್ 5ನೇ ಹಂತವನ್ನು ರಿಂಗ್ ರಸ್ತೆ ಮೂಲಕ ಸಂಪರ್ಕಿಸುತ್ತದೆ. ಪ್ರಯಾಣಿಕರು ಬಸ್ ಸೇವೆಯ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ವೇಳಾಪಟ್ಟಿ, ಮಾರ್ಗ: 410-FB ಯಶವಂತಪುರದಿಂದ-ಬಿಇಎಂಎಲ್ 5ನೇ ಹಂತದ ಬಸ್ ಮಾರ್ಗ, ವೇಳಾಪಟ್ಟಿಯನ್ನು ಬಿಎಂಟಿಸಿ ಬಿಡುಗಡೆ ಮಾಡಿದೆ. ಯಶವಂತಪುರದಿಂದ ಹೊರಡುವ ಬಸ್ ಗೊರಗುಂಟೆಪಾಳ್ಯ, ರಾಜ್ಕುಮಾರ್ ಸಮಾಧಿ, ಲಗ್ಗೆರೆ ಬ್ರಿಡ್ಜ್, ಸುಮನಹಳ್ಳಿ, ನಾಗರಭಾವಿ ವೃತ್ತ, ನಾಯಂಡಹಳ್ಳಿ, ರಾಜರಾಜೇಶ್ವರಿ ಗೇಟ್, ರಾಜರಾಜೇಶ್ವರಿ ದೇವಾಲಯ, ಬಿಇಎಂಎಲ್ ಕಾಂಪ್ಲೆಕ್ಸ್, ಬಿಇಎಂಎಲ್ ಡಬಲ್ ರಸ್ತೆ ಮೂಲಕ ಬಿಇಎಂಎಲ್ 5ನೇ ಹಂತಕ್ಕೆ ತಲುಪಲಿದೆ.

ಈ ಮಾರ್ಗದ ಬಸ್ ಯಶವಂತಪುರದಿಂದ 6.35, 9.15, 9.55, 11.30, 12.20, 14.50, 15.05, 17.10, 17.40, 20.25ಕ್ಕೆ ಹೊರಡಲಿದೆ ಎಂದು ಬಿಎಂಟಿಸಿ ಮಾಹಿತಿ ನೀಡಿದೆ.

ಈ ಮಾರ್ಗದ ಬಸ್ ಬಿಇಎಂಎಲ್ 5ನೇ ಹಂತದಿಂದ ಹೊರಡುವ ಸಮಯ 5.40, 7.40, 8.15, 10.25, 11.15, 13.25, 14.00, 16.00, 16.35, 18.50.

410-FG ಎಂಬ ಮತ್ತೊಂದು ಮಾರ್ಗದಲ್ಲಿಯೂ ಬಸ್ ಸಂಚಾರ ಆರಂಭಿಸಿದೆ. ಈ ಬಸ್ ಬನಶಂಕರಿ- ಚಿಕ್ಕ ಬಣಾವರ ನಡುವೆ ಸಂಪರ್ಕ ಕಲ್ಪಿಸುತ್ತದೆ. ಬನಶಂಕರಿಯಿಂದ ಹೊರಡುವ ಬಸ್ ಕತ್ತರಿಗುಪ್ಪೆ, ಪಿಇಎಸ್ ಕಾಲೇಜು, ನಾಯಂಡಹಳ್ಳಿ, ನಾಗರಭಾವಿ ವೃತ್ತ, ಸುಮನಹಳ್ಳಿ, ಲಗ್ಗೆರೆ ಬ್ರಿಡ್ಜ್, ರಾಜ್ಕುಮಾರ್ ಸಮಾಧಿ, ಗೊರಗುಂಟೆಪಾಳ್ಯ, ಜಾಲಹಳ್ಳಿ ಕ್ರಾಸ್, 8ನೇ ಮೈಲಿ, ಬಾಗಲಗುಂಟೆ, ಚಿಕ್ಕ ಬಣಾವರಕ್ಕೆ ತಲುಪಲಿದೆ. ಈ ಮಾರ್ಗದ ಬಸ್ ಬನಶಂಕರಿ ಇಂದ ಹೊರಡುವ ಸಮಯ 05:00, 05:40, 06:35, 07:15, 08:15, 08:55, 09:30, 10:10, 10:50, 11:20, 16:00, 17:00, 17:40, 18:40, 19:20, 20:45, 21:25. ಚಿಕ್ಕ ಬಾಣಾವರದಿಂದ ಹೊರಡುವ ಸಮಯ 05:00, 05:40, 06:35, 07:15, 08:15, 08:55, 09:40, 11:10, 12:55, 14:55, 15:35, 17:00, 17:40, 18:40, 19:20, 20:45, 21:25. ಬಿಎಂಟಿಸಿ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೂತನ ಮೆಟ್ರೋ ಫೀಡರ್ ಬಸ್ ಸೇವೆಯನ್ನು ಆರಂಭಿಸಿದೆ. MF-51 ಮಾರ್ಗ ಸಂಖ್ಯೆಯ ಬಸ್ ಮಾದಾವರ ಮೆಟ್ರೋ ನಿಲ್ದಾಣವನ್ನು ಕಡಬಗೆರೆ ಕ್ರಾಸ್ ಸಂಪರ್ಕಸುತ್ತದೆ. ಈ ಮಾರ್ಗದ ಬಸ್ ಲಕ್ಷ್ಮಿಪುರ, ವಡ್ಡರಹಳ್ಳಿ, ಜನಪ್ರಿಯ ಟೌನ್ ಶಿಪ್ ಮೂಲಕ ಸಾಗುತ್ತದೆ.

ಈ ಬಸ್ ಮಾದಾವರ ಮೆಟ್ರೋ ನಿಲ್ದಾಣವನ್ನು ಬಿಡುವ ವೇಳೆ 7:15, 7:45, 8:35, 9:05, 10:20, 10:50, 11:40, 12:10, 13:00, 13:30, 14:45, 15:15, 16:05, 17:00. ಕಡಬಗೆರೆ ಕ್ರಾಸ್ನಿಂದ ಹೊರಡುವ ಸಮಯ 7:50, 8:20, 9:10, 9:40, 10:55, 11:25, 12:15, 12:45, 14.00, 14.30, 15.20, 15.50, 16.50, 17.50.

Leave a Reply

Your email address will not be published. Required fields are marked *