ಬೆಂಗಳೂರು : ಗೃಹಸಚಿವ ಡಾ. ಜಿ ಪರಮೇಶ್ವರ್ ನೇತೃತ್ವದಲ್ಲಿ ನಡೆಸಲು ತೀರ್ಮಾನ ಮಾಡಲಾಗಿದ್ದ ಡಿನ್ನರ್ ಪಾರ್ಟಿಗೆ ಇದೀಗ ಬ್ರೇಕ್ ಬಿದ್ದಿದೆ. ಇದೀಗ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಕಾಣದ ಕೈ ಗಳ ಕೆಲಸವೇನಿಲ್ಲ ಚಿತ್ರದುರ್ಗ ಸಮಾವೇಶ ಮಾಡಬೇಕು ಅಂತ ಇದ್ವಿ. ಎಸ್ಸಿ ಎಸ್ಟಿ ಗಳ ಸಮಸ್ಯೆ ಬಗೆಹರಿಸೋದಾಗು ಹೇಳಿದ್ವಿ. ಅಲ್ಲಿಯ ಬೇಡಿಕೆ ಬಗ್ಗೆ ಚರ್ಚೆ ಮಾಡುವುದಿತ್ತು. ಸರ್ಕಾರ ಅನೇಕ ಭರವಸೆ ಈಡೇರಿಸಿದೆ. ನಾವು ಯಾರು ಈ ವಿಚಾರವನ್ನ ದೆಹಲಿಯವರಿಗೆ ಹೇಳಿರಲಿಲ್ಲ. ಇಂಟರ್ನಲ್ ಆಗಿರೋದ್ರಿಂದ ಅವರಿಗೆ ತಿಳಿಸಿರಲಿಲ್ಲ. ಸುರ್ಜೆವಾಲ ಅವರು ಕರೆ ಮಾಡಿದ್ರು ನಾನು ಇದರಲ್ಲಿ ಭಾಗಿಯಾಗಬೇಕು ಎಂದ್ರು. ರಾಜಕೀಯ ವಿಚಾರ ಇದರಲ್ಲಿ ಚರ್ಚೆ ಆಗಲ್ಲ ನೀವು ಭಾಗಿಯಾಗಿ ಎಂದು ಆಹ್ವಾನಿಸಿದೆ ಎಂದು ಹೇಳಿದ್ದಾರೆ.
ಸುರ್ಜೆವಾಲ ಅವರು ನಾಳೆ ಆಗೋದಿಲ್ಲ ಇನ್ನೊಂದು ದಿನ ಎಂದರು ಹೀಗಾಗಿ ಡಿನ್ನರ್ ಸಭೆಯನ್ನ ಕ್ಯಾನ್ಸಲ್ ಮಾಡಿಲ್ಲ ಮುಂದಕ್ಕೆ ಹಾಕಿದ್ದೇನೆ. ಡಿನ್ನರ್ ಅಂದರೆ ಊಟ, ನೀವು ಬೇರೆ ಬೇರೆ ಚರ್ಚೆ ಮಾಡುತ್ತಿದ್ದೀರಾ. ನೀವು ನೋಡಿದ್ರೆ ಡಿನ್ನರ್ ಮೀಟಿಂಗ್ ಎಂದು ಹೊಡಿತಾ ಇದ್ರಿ. ಊಟಕಲ್ಲ, ಚರ್ಚೆ ಮಾಡೋದಕ್ಕೆ ಹೈ ಕಮಾಂಡ್ ಒಪ್ಪಿಗೆ ಬೇಕು. ಹೈಕಮಾಂಡ್ ಅಪಾರ್ಥ ಮಾಡ್ಕೊಂಡಿದೆಯೋ ಗೊತ್ತಿಲ್ಲ. ಸಭೆಗೆ ಅವರು ಬಾಗಿ ಯಾಗ್ತೇವೆ ಎಂದಾಗ ಬೇಡ ಎನ್ನೋದಕ್ಕಾಗುತ್ತಾ? ಎಂದರು.
ಡಿ ಕೆ ಶಿವಕುಮಾರ್ ವಿರೋಧ ವಿಚಾರ ನನಗೆ ಗೊತ್ತಿಲ್ಲ. ದಲಿತ ಸಮುದಾಯದ ಅನೇಕ ಸಮಸ್ಯೆ ಇದೆ. ಯಾರಾದರೂ ಸಭೆ ಮಾಡಬಾರದು ಎಂದರೆ ನಾವು ಉತ್ತರ ಕೊಡ್ತೇವೆ. ಆ ಶಕ್ತಿ ನಮಗೆ ಇದೆ ನಾವು ಉತ್ತರ ಕೊಡ್ತೇವೆ. ಸ್ವಲ್ಪ ದಿನ ಕಾಯೋಣ ಎಲ್ಲವೂ ಗೊತ್ತಾಗಲಿದೆ. ಸಭೆ ಅವರಿಗೆ ಇಷ್ಟ ಇತ್ತೋ ಇಲ್ಲವೋ ಗೊತ್ತಾಗುತ್ತೆ ಎಂದು ತಿಳಿಸಿದರು.
ಬಿಬಿಎಂಪಿ ಮೇಲೆ ಇಡಿ ದಾಳಿ
ಬಿಬಿಎಂಪಿ ಮೇಲೆ ಇಡಿ ದಾಳಿಯ ಬಗ್ಗೆ ಮಾತನಾಡಿ, ಇಡಿಯವ್ರು ನಮ್ಮನ್ನು ಕೇಳಿ ದಾಳಿ ಮಾಡಲ್ಲ. ಯಾವ ಉದ್ದೇಶಕ್ಕೆ ಇಡಿ ದಾಳಿ ಆಗಿದೆಯೋ ಗೊತ್ತಿಲ್ಲ. ನನಗೆ ಬಂದ ಮಾಹಿತಿ ಪ್ರಕಾರ ಬಿಬಿಎಂಪಿಗೆ ಕೇಂದ್ರದಿಂದ ಬಂದ ಅನುದಾನ ದುರ್ಬಳಕೆ ಆರೋಪ ಬಗ್ಗೆ ಇಡಿ ದಾಳಿ ಆಗಿರಬಹುದು ಎಂದರು.
ನಕ್ಸಲರ ಶರಣಾಗತಿ
ಇಂದು ನಕ್ಸಲರು ಶರಣಾಗ್ತಿದ್ದಾರೆ, ಈಗ ಇಷ್ಟೇ ಹೇಳಬಹುದು ನಾನು ಬಾಕಿ ವಿಚಾರ ಈಗ ಮಾತಾಡಲ್ಲ. ನಾವು ಶರಣಾಗತಿಗೆ ಕರೆ ಕೊಟ್ಟಿದ್ವಿ. ವಿಕ್ರಮ್ ಗೌಡ ಎನ್ಕೌಂಟರ್ ವೇಳೆಯೇ ಶರಣಾಗುವಂತೆ ಕರೆ ಕೊಡಲಾಗಿತ್ತು. ಕಾಡಲ್ಲಿದ್ದು ಈ ರೀತಿ ಜೀವನ ಯಾಕೆ, ಮುಖ್ಯವಾಹಿನಿಗೆ ಬನ್ನಿ ಅಂದಿದ್ವಿ. ಅವರ ಮೇಲೆ ಹಲವು ಕೇಸ್ ಗಳಿವೆ ನಿಜ. ಅವರೆಲ್ಲ ಶರಣಾದ ಮೇಲೆ ಕೇಸ್ ಗಳ ವಿಚಾರದಲ್ಲಿ ಕಾನೂನು ಪ್ರಕಾರ ಏನು ಕ್ರಮ ಆಗಬೇಕೋ ಆಗತ್ತೆ ಎಂದು ತಿಳಿಸಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದವರ ಮೇಲೆ ಇನ್ನೂ ಚಾರ್ಜ್ಶೀಟ್ ಸಲ್ಲಿಸದ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್, ಇದರ ಬಗ್ಗೆ ವಿಚಾರ ಮಾಡ್ತೇವೆ ನೀವು ನೆನಪಿಸಿದ್ದು ಒಳ್ಳೇದಾಯ್ತು, ಯಾಕೆ ನಿಧಾನ ಆಯ್ತು ಅಂತ ಪರಿಶೀಲನೆ ಮಾಡ್ತೇವೆ ಎಂದರು.