ಬೆಂಗಳೂರು: ದಕ್ಷಿಣ ಭಾರತದ ಏಕೈಕ ಐಷಾರಾಮಿ ದಿ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಇಂದಿನಿಂದ ಪ್ರಾರಂಭ.
ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಭಾರತೀಯ ರೈಲ್ವೆಯು ಆಗಾಗ ವಿಶೇಷ ಯೋಜನೆಗಳನ್ನು ಘೋಷಣೆ ಮಾಡುತ್ತಲೇ ಬಂದಿದೆ. ಹಬ್ಬಗಳ ಸಂದರ್ಭಗಳಲ್ಲಿ, ವಿಶೇಷ ಕಾರ್ಯಕ್ರಮಗಳ ವೇಳೆ ದಟ್ಟಣೆ ನಿಯಂತ್ರಣ ಮಾಡಲು ಹಾಗೂ ಪ್ರವಾಸಿಗರ ಅನೂಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಅದರಲ್ಲೂ ಪ್ರವಾಸಿ ತಾಣಗಳ ವೀಕ್ಷಣೆ ಮಾಡುವವರಿಗಾಗಿಯೇ ಹೆಚ್ಚುವರಿ ವಿಶೇಷ ರೈಲಳನ್ನು ಬಿಡುತ್ತಾ ಬಂದಿದೆ. ಇದೀಗ ದಕ್ಷಿಣ ಭಾರತದ ಏಕೈಕ ಐಷಾರಾಮಿ ದಿ ಗೋಲ್ಡನ್ ಚಾರಿಯಟ್ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ.
ಉದ್ದೇಶ ಏನು?: ದಿ ಗೋಲ್ಡನ್ ಚಾರಿಯೇಟ್ ರೈಲನ್ನು ಪ್ರವಾಸೋದ್ಯಮ ವಿಭಾಗದವಾಗಿರುವ ಐಆರ್ಸಿಟಿಸಿ ನಿರ್ವಹಣೆ ಮಾಡುತ್ತಿದೆ. 2024-25ನೇ ಸಾಲಿನಲ್ಲಿ ಪ್ರವಾಸ ಕಾರ್ಯಕ್ರಮಗಳು ಹೆಚ್ಚಿರುವ ಹಿನ್ನೆಲೆ ರಾಜ್ಯದ ಪ್ರವಾಸಿ ತಾಣಗಳಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಆಕರ್ಷಿಸುವ ಹಿನ್ನೆಲೆ ದಿ ಗೋಲ್ಡನ್ ಚಾರಿಯೇಟ್ ರೈಲನ್ನು ವುನಾರಂಭ ಮಾಡಲಾಗಿದೆ. ಯಾವ್ಯಾವ ಮಾರ್ಗಗಳಲ್ಲಿ ರೈಲು ಸಂಚಾರ?: ಇಂದಿನಿಂದಲೇ ಅಂದರೆ ಡಿಸೆಂಬರ್ 21ರಿಂದ ದಿ ಗೋಲ್ಡನ್ ಚಾರಿಯೇಟ್ ರೈಲು ಬೆಂಗಳೂರಿನಿಂದ ಹೊರಟು ಮೈಸೂರು- ಕಾಂಚಿಪುರಂ- ಮಹಾಬಲಿಪುರಂ- ತಂಜಾವೂರು- ಚೆಟ್ಟಿನಾಡು- ಕೊಚ್ಚಿ- ಚರ್ತಲ ಮಾರ್ಗವಾಗಿ ಸಂಚಾರ ಮಾಡಲಿದೆ. ಇನ್ನು ಈ ರೈಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಹಾಯಕ ಸಚಿವರು, ಡಿಸಿಎಂ ಡಿಕೆ ಶಿವಕುಮಾರ್, ಪ್ರವಾಸೋದ್ಯಮ ಇಲಾಖೆ ಸಚಿವರೂ ಸೇರಿದಂತೆ ರೈಲ್ವೆ, ಪ್ರವಾಸೋದ್ಯಮ ಇಲಾಖೆ ಅಕಾರಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿದುಬಂದಿದೆ.