ಬೆಂಗಳೂರು || ದ್ರಾವಿಡ್‌ ಕಾರಿಗೆ ಗುದ್ದಿದ ಗೂಡ್ಸ್‌ ಆಟೋ

ಬೆಂಗಳೂರು || ದ್ರಾವಿಡ್ ಕಾರಿಗೆ ಗುದ್ದಿದ ಗೂಡ್ಸ್ ಆಟೋ

ಬೆಂಗಳೂರು: ಟೀಂ ಇಂಡಿಯಾದ (Team India) ಮಾಜಿ ಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಅವರ ಕಾರಿಗೆ ಗೂಡ್ಸ್‌ ಅಟೋ (Goods Auto) ಗುದ್ದಿದ ಘಟನೆ ಇಂದು ಸಂಜೆ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ನಡೆದಿದೆ.

‌ರಾಹುಲ್ ದ್ರಾವಿಡ್‌ ಅವರು ಸಂಜೆ 6:30ಕ್ಕೆ ಇಂಡಿಯನ್ ಎಕ್ಸ್‌ಪ್ರೆಸ್‌ ಸಿಗ್ನಲ್‌ನಿಂದ ಹೈಗ್ರೌಂಡ್ಸ್‌ ಕಡೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್‌ ಜಾಮ್‌ ಆಗಿತ್ತು. ದ್ರಾವಿಡ್‌ ಅವರು ಕಾರನ್ನು ನಿಲ್ಲಿಸಿದ್ದಾಗ ಹಿಂದಿನಿಂದ ಗೂಡ್ಸ್‌ ರಿಕ್ಷಾ ಗುದ್ದಿದೆ.

ಗುದ್ದಿದ ನಂತರ ದ್ರಾವಿಡ್‌ ಕಾರಿನಿಂದ ಕೆಳಗಡೆ ಇಳಿದು ಪರಿಶೀಲನೆ ನಡೆಸಿದ್ದಾರೆ. ನಂತರ ಅಟೋ ಚಾಲಕನನ್ನು ಪ್ರಶ್ನೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಹೈ ಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದರೂ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.

ರಾಹುಲ್‌ ದ್ರಾವಿಡ್‌ ರಿಕ್ಷಾ ಚಾಲಕನ ಜೊತೆ ಮಾತನಾಡಿದ ವಿಡಿಯೋವನ್ನು ಯಾರೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Leave a Reply

Your email address will not be published. Required fields are marked *