ಬೆಂಗಳೂರು: ಕರ್ನಾಟಕದಲ್ಲಿ ಹಲವು ಆಸ್ತಿ ಮಾಲೀಕರು ಆಸ್ತಿಯ ಖಾತೆಯನ್ನು ಬಿ ಖಾತಾದಲ್ಲಿ ಹೊಂದಿದ್ದು. ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳುವುದು ಹೇಗೆ ಎನ್ನುವುದು ತಿಳಿಯದೆ ಪರದಾಡುತ್ತಿದ್ದಾರೆ. ಆಸ್ತಿದಾರರಿಗೆ ಎ ಖಾತಾ ಇದ್ದರೆ ಹಲವು ಸೌಲಭ್ಯಗಳು ಹಾಗೂ ಸರ್ಕಾರದ ಅಧಿಕೃತ ಆಸ್ತಿ ಖಾತಾ ಎನ್ನುವ ಮಾನ್ಯತೆ ಸೇರಿದಂತೆ ಹಲವು ಕಾನೂನು ಮಾನ್ಯತೆಗಳು ಸಿಗುತ್ತವೆ. ಆದರೆ ಬಿ ಖಾತಾದ ಆಸ್ತಿದಾರರು ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಕೆಲವು ನಿರ್ದಿಷ್ಟ ಬಿ ಖಾತಾ ಆಸ್ತಿಗಳನ್ನು ನೀವು ಎ ಖಾತಾಗೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಿದೆ. ಅದೇನು ಎನ್ನುವ ವಿವರ ನೋಡೋಣ.

ಬಿ ಖಾತಾದ ಆಸ್ತಿದಾರರಿಗೆ ಸರ್ಕಾರದ ಪ್ರಮುಖ ಸೌಲಭ್ಯಗಳು ಸಿಗುವುದಿಲ್ಲ. ಅಲ್ಲದೇ ಎ ಖಾತಾದ ಆಸ್ತಿಗಳಿಗೆ ಹೋಲಿಕೆ ಮಾಡಿದರೆ ಬಿ ಖಾತಾದ ಆಸ್ತಿಗಳಿಗೆ ಹೆಚ್ಚು ಡಿಮ್ಯಾಂಡ್ ಸಹ ಇಲ್ಲ. ಬ್ಯಾಂಕ್ಗಳಿಂದ ಸಾಲಸೌಲಭ್ಯ ಹಾಗೂ ಸರ್ಕಾರದ ಅಧಿಕೃತ ಮಾನ್ಯತೆ ಇರುವುದಿಲ್ಲ. ಆದರೆ, ಕೆಲವು ನಿರ್ದಿಷ್ಟ ಆಸ್ತಿಗಳನ್ನು ನೀವು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಿಕೊಂಡು ಸರ್ಕಾರದ ಅಧಿಕೃತ ಮಾನ್ಯತೆಯನ್ನು ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ. ಹಾಗಾದರೆ ಬಿ ಖಾತಾದ ಆಸ್ತಿಯನ್ನು ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳುವುದು ಹೇಗೆ. ಬಿ ಖಾತಾದಿಂದ ಎ ಖಾತಾಗೆ ಆಸ್ತಿ ಬದಲಾವಣೆ ಮಾಡಿಕೊಳ್ಳಲು ಬೇಕಾಗುವ ದಾಖಲೆಗಳು ಏನು ಎನ್ನುವ ಸಂಪೂರ್ಣ ವಿವರ ತಿಳಿಯೋಣ.
ಆಸ್ತಿಗಳಲ್ಲಿ ಪ್ರಮುಖವಾಗಿ ಎ ಖಾತಾ ಹಾಗೂ ಬಿ ಖಾತಾ ಎಂದಿದೆ. ಬಿ ಖಾತಾ ಇದ್ದರೆ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದರ್ಥ. ಕೆಲವೊಂದು ಸಣ್ಣಪುಟ್ಟ ತಪ್ಪುಗಳಿದ್ದರೆ ನೀವು ಬಿ ಖಾತಾದ ಆಸ್ತಿಗಳನ್ನು ಎ ಖಾತಾಗೆ ವರ್ಗಾಯಿಸಿಕೊಳ್ಳುವುದಕ್ಕೆ ಅವಕಾಶ ಇದೆ. ಬಿ ಖಾತಾದಿಂದ ಎ ಖಾತಾಗೆ ಆಸ್ತಿ ವರ್ಗಾವಣೆ ಮಾಡಿಕೊಳ್ಳುವ ಪ್ರಮುಖ ವಿಧಾನದ ವಿವರ ನೋಡೋಣ. * ಆಸ್ತಿ ತೆರಿಗೆ ಪಾವತಿ ಮಾಡಿ: ನೀವು ಆಸ್ತಿಯನ್ನು ಬಿ ಖಾತಾದಿಂದ ಎ ಖಾತಾಗೆ ಬದಲಾಯಿಸಿಕೊಳ್ಳುವ ಹಂತದಲ್ಲಿ ಮೊದಲು ಈ ನಿರ್ದಿಷ್ಟ ಆಸ್ತಿಗೆ ಬಾಕಿ ಉಳಿದಿರುವ ಎಲ್ಲಾ ಆಸ್ತಿ ತೆರಿಗೆಯನ್ನೂ ಪಾವತಿ ಮಾಡಿ. ಎಲ್ಲಾ ಬಾಕಿ ಆಸ್ತಿ ತೆರಿಗೆ ಪಾವತಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. * ಬಿ ಖಾತಾದಿಂದ ಎ ಖಾತಾ ಅರ್ಜಿ: ಖಾತಾ ಬದಲಾವಣೆಗೆ ಸಂಬಂಧಿಸಿದಂತೆ ಸ್ಥಳೀಯ ಆಡಳಿತದಲ್ಲಿ ಉದಾ: ಬೆಂಗಳೂರಿನಲ್ಲಿದ್ದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಅರ್ಜಿ ಸಲ್ಲಿಕೆ ಮಾಡಿ. ಈ ಸಂದರ್ಭದಲ್ಲಿ ಮರೆಯದೆ ಹಾಗೂ ಮುಖ್ಯವಾಗಿ ಆಸ್ತಿ ಪತ್ರದ ದಾಖಲೆ, ಪ್ರಾಪರ್ಟಿ ಟ್ಯಾಕ್ಸ್ ಡಾಕ್ಯೂಮೆಂಟ್ಸ್ ಹಾಗೂ ಕಟ್ಟಡ ನಿರ್ಮಾಣ ಪ್ಲ್ಯಾನ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ಸಲ್ಲಿಕೆ ಮಾಡಿ.
* ಪರಿಶೀಲನಾ ಪ್ರಕ್ರಿಯೆ: ಆಸ್ತಿ ಖಾತಾ ಬದಲಾವಣೆ ಆಗುವ ಸಂದರ್ಭದಲ್ಲಿ ಆ ಪ್ರಕಿಯೆ ಮುಗಿಯುವ ವರೆಗೆ ಕಾಯಿರಿ. ಇನ್ನು ಬಿ ಖಾತಾದಿಂದ ಎ ಖಾತಾಗೆ ಆಸ್ತಿ ದಾಖಲೆಗಳು ಬದಲಾದ ಮೇಲೆ ನಿಮಗೆ ಹೊಸ ಖಾತಾದ ಪ್ರಮಾಣ ಪತ್ರ ಲಭ್ಯವಾಗಲಿದೆ.