ಬೆಂಗಳೂರು || ಕೆಆರ್ ಪುರ-ಸಿಲ್ಕ್ ಬೋರ್ಡ್ ಔಟರ್ ರಿಂಗ್ ರೋಡ್ಗೆ ₹400 ಕೋಟಿ ವೆಚ್ಚದಲ್ಲಿ ಹೊಸ ಟಚ್

ಬೆಂಗಳೂರು || ಕೆಆರ್ ಪುರ-ಸಿಲ್ಕ್ ಬೋರ್ಡ್ ಔಟರ್ ರಿಂಗ್ ರೋಡ್ಗೆ ₹400 ಕೋಟಿ ವೆಚ್ಚದಲ್ಲಿ ಹೊಸ ಟಚ್

ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರ ಹಾಗೂ ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಮಾರ್ಗವು ಶೀಘ್ರದಲ್ಲೇ ನವೀಕರಣಕ್ಕೆ ಸಜ್ಜಾಗಿದೆ. ಟ್ರಾಫಿಕ್ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಈ ರಸ್ತೆಯು ಸದ್ಯದಲ್ಲೇ ವಿಶ್ವದರ್ಜೆಯ ರಸ್ತೆಯಾಗಿ ಹೊಸ ರೂಪ ಪಡೆದುಕೊಳ್ಳಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಈ 22 ಕಿ.ಮೀ. ಕಾರಿಡಾರ್ ರಸ್ತೆಯನ್ನ ನವೀಕರಿಸಲು ಬರೋಬ್ಬರಿ 400 ಕೋಟಿ ರೂಪಾಯಿ ಅನುದಾನವನ್ನು ಬಜೆಟ್ನಲ್ಲಿ ಘೋಷಿಸಿದೆ.

ಬೆಂಗಳೂರು || ಪನ್ನೀರ್ ಪ್ರಿಯರಿಗೆ ಆಹಾರ ಇಲಾಖೆ ಶಾಕ್: ಡೇಂಜರ್ ಕೆಮಿಕಲ್ ಪತ್ತೆ

ಸುಮಾರು 500ಕ್ಕೂ ಹೆಚ್ಚು ಕಂಪನಿಗಳಿಗೆ ನೆಲೆಯಾಗಿರುವ ಈ ರಸ್ತೆ ಮಾರ್ಗವು ಬಹಳ ಹಿಂದಿನಿಂದಲೂ ಕಳಪೆ ನಿರ್ವಹಣೆಯ ಸಮಸ್ಯೆಯನ್ನು ಎದುರಿಸುತ್ತಿತ್ತು. ಪ್ರತಿ ನಿತ್ಯ ಈ ಮಾರ್ಗದಲ್ಲಿ ಸಂಚರಿಸುವವರಿಗೂ ಇದು ದೊಡ್ಡ ತಲೆನೋವಾಗಿತ್ತು. ಈ ನಿಟ್ಟಿನಲ್ಲಿ ಈ ಹೊರ ವರ್ತುಲ ರಸ್ತೆಯನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಪರಿಷ್ಕರಿಸುವುದಾಗಿ ಬಿಬಿಎಂಪಿ ವಿಶೇಷ ಆಯುಕ್ತ (ಹಣಕಾಸು) ಹರೀಶ್ ಕುಮಾರ್ ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಈ ಯೋಜನೆಯನ್ನು ಕರ್ನಾಟಕ ಸರ್ಕಾರ ಹಾಗೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ನ ಸಹಯೋಗದೊಂದಿಗೆ ವಿಶ್ವ ದರ್ಜೆಯ ಮಾನದಂಡಗಳ ಪ್ರಕಾರ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಹೇಳಿದ್ದಾರೆ. ನಗರದ ರಸ್ತೆ ಮೂಲಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಸಾರ್ವಜನಿಕರಿಗಾಗಿ 1,000 ಕಿ.ಮೀ. ಪಾದಚಾರಿ ಮಾರ್ಗಗಳನ್ನು ನಿರ್ಮಿಸುವುದಾಗಿಯೂ ಬಿಬಿಎಂಪಿ ಹೇಳಿದೆ.

ಈ ರಸ್ತೆ ಮಾತ್ರವಲ್ಲದೆ ಈಗ ನಡೆಯುತ್ತಿರುವ ಮತ್ತು ಹೊಸ ರಸ್ತೆ ಯೋಜನೆಗಳ ಬಗ್ಗೆಯೂ ಬಿಬಿಎಂಪಿ ಬಜೆಟ್ ಒತ್ತು ನೀಡಿದೆ. ಸುಮಾರು 1,700 ಕೋಟಿ ರೂಪಾಯಿ ವೆಚ್ಚದಲ್ಲಿ 157 ಕಿ.ಮೀ ರಸ್ತೆಗಳ ವೈಟ್ ಟಾಪಿಂಗ್ ಕಾಮಗಾರಿ, 694 ಕೋಟಿ ಅಂದಾಜು ವೆಚ್ಚದಲ್ಲಿ 118 ರಸ್ತೆಗಳ ಡಾಂಬರೀಕರಣವೂ ಇದರಲ್ಲಿ ಸೇರಿದೆ.

ಹೆಚ್ಚುವರಿಯಾಗಿ ಟಿಡಿಆರ್ ಬಳಸಿಕೊಂಡು ಅಗಲೀಕರಣಕ್ಕಾಗಿ ಐದು ಪ್ರಮುಖ ರಸ್ತೆಗಳನ್ನ ಕೂಡ ಗುರುತಿಸಲಾಗಿದೆ. ಅವುಗಳೆಂದರೆ ಆರ್.ಟಿ.ನಗರ ಪೊಲೀಸ್ ಠಾಣೆಯಿಂದ ಬಿ.ಆರ್. ಅಂಬೇಡ್ಕರ್ ಕಾಲೇಜಿಗೆ, ಹೆಣ್ಣೂರು ಮುಖ್ಯ ರಸ್ತೆಯಿಂದ ಪುಲಕೇಶಿನಗರದ ಶ್ಯಾಮಪುರ ಮುಖ್ಯ ರಸ್ತೆವರೆಗೆ, ಕೆಂಚೇನಹಳ್ಳಿ ಮುಖ್ಯ ರಸ್ತೆಗಳ ಅಗಲೀಕರಣ ನಡೆಯಲಿದೆ. ರೈಲ್ವೆ ಸೇತುವೆಗಳು ಮತ್ತು ರಸ್ತೆ ಅಗಲೀಕರಣ ಯೋಜನೆಗಳು ಸೇರಿದಂತೆ ಕೆಂಗೇರಿಯ 1 ನೇ ಮುಖ್ಯ ರಸ್ತೆಯಲ್ಲಿ ರೈಲ್ವೆ ಓವರ್-ಬ್ರಿಡ್ಜ್ ಮತ್ತು ರಾಮೋಹಳ್ಳಿ ಗೇಟ್ ಬಳಿಯ ಕೆಳ ಸೇತುವೆ ನಿರ್ಮಾಣಕ್ಕಾಗಿ 20 ಕೋಟಿ ಅನುದಾನ ಘೋಷಿಸಿದೆ.

ಬ್ರ್ಯಾಂಡ್ ಬೆಂಗಳೂರು ಅಡಿಯಲ್ಲಿ ಸುಗಮ ಸಂಚಾರಕ್ಕಾಗಿ ರಸ್ತೆಗಳ ವೈಟ್ ಟಾಪಿಂಗ್, 400 ಕೋಟಿ ವೆಚ್ಚದಲ್ಲಿ ಸ್ಕೈ-ಡೆಕ್ ನಿರ್ಮಾಣ, 42,000 ಕೋಟಿ ವೆಚ್ಚದಲ್ಲಿ ನಗರ ಸುರಂಗ ಮಾರ್ಗಗಳಿಗೂ ಬಿಬಿಎಂಪಿ ಕೈಹಾಕಿದೆ. ಅಲ್ಲದೆ ಬ್ರ್ಯಾಂಡ್ ಬೆಂಗಳೂರು ಸುಗಮ ಸಂಚಾರಕ್ಕೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಎಲಿವೇಟೆಡ್ ಕಾರಿಡಾರ್, 300 ಕಿ.ಮೀ ಬಫರ್ ವಲಯ ರಸ್ತೆ, ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ವೈಟ್ ಟ್ಯಾಪಿಂಗ್, ಸೈಡೆಕ್, ನಗರದ ಸೌಂದರ್ಯ ಹೆಚ್ಚಳಕ್ಕೆ ದೀಪಾಲಂಕಾರಗಳ ಯೋಜನೆಗಳನ್ನು ಸಹ ಬಿಬಿಎಂಪಿ ಬಜೆಟ್ನಲ್ಲಿ ಘೋಷಿಸಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

Leave a Reply

Your email address will not be published. Required fields are marked *