ಬೆಂಗಳೂರು: ಏಪ್ರಿಲ್ 14ರಂದು 134ನೇ ಅಂಬೇಡ್ಕರ್ ಜಯಂತಿ , ಹೀಗಾಗಿ ಅದ್ಧೂರಿಯಾಗಿ ಆಚರಣೆ ಮಾಡಲೂ ಬೆಂಗಳೂರು ನಗರದಲ್ಲಿ ಅಂಬೇಡ್ಕರ್ ಜಯಂತಿಗೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಮುಖ್ಯವಾಗಿ ಬೆಂಗಳೂರಿನ 14 ಕಡೆಯಿಂದ ವಿಧಾನಸೌಧಕ್ಕೆ ರಥಯಾತ್ರೆ ಮಾಡುವುದರ ಮುಖಾಂತರ ಹಾಗೆ ಬೆಂಗಳೂರಿನ ಫ್ರೀಡಂ ಪರ‍್ಕ್ ನಲ್ಲಿ ಅದ್ದೂರಿ ಸಮಾರಂಭ ಕರ‍್ಯಕ್ರಮ ನಡೆಯಲಿದೆ ಎಂದು ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ ತಿಳಿಸಿದರು .

ಇನ್ನೂ ಇಂದು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮಾಗಡಿ ರಸ್ತೆಯಲ್ಲಿರುವ ಗೋಪಾಲಪುರದಲ್ಲಿ ಅಂಬೇಡ್ಕರ್ ಜಯಂತಿ ಹಿನ್ನೆಲೆ ಸಮತಾ ಸೈನಿಕ ದಳದ ಅಧ್ಯಕ್ಷ ವೆಂಕಟಸ್ವಾಮಿ ನೇತೃತ್ವದಲ್ಲಿ ಹೋರಾಟಗಾರರು, ಕರ‍್ಯರ‍್ತರು ಸೇರಿ ನಾಮಫಲಕ ಉದ್ಘಾಟನೆ ಮಾಡಿದರು.
ಉದ್ಘಾಟನಾ ಕರ‍್ಯಕ್ರಮದಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಡಾ. ಎಂ ವೆಂಕಟಸ್ವಾಮಿ , ರಾಜ್ಯ ಖಜಾಂಚಿ, ಜಿಲ್ಲಾ ಅಧ್ಯಕ್ಷ ಆರ್ ಚಂದ್ರಶೇಖರ್, ಬೆಂಗಳೂರು ನಗರ ಅಧ್ಯಕ್ಷ ಮಂಜುನಾಥ್ , ತಿಲಕ ಕುಮಾರ್, ಜಮೀರ್ ಪಾಷ, ಅನಿಲ್ ಕುಮಾರ್ , ಶಿವು ಸೇರಿದಂತೆ ಅನೇಕ ಗಣ್ಯರು ಭಾಗಿ ಆಗಿದ್ದರು.