ಬೆಂಗಳೂರು: ಕೇಂದ್ರ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿಯಾಗಿರುವ ಪ್ರಸಾರ ಭಾರತಿ ದೂರದರ್ಶನ ಸುದ್ದಿ ವಾಹಿನಿಯಲ್ಲಿ ಒಂದಷ್ಟು ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ನೇಮಕಾತಿ ನಡೆಯುತ್ತಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಬಲ್ಲ ತುಡಿತ, ಆಸಕ್ತಿ ಇರುವವರಿಗೆ ಈ ಕೆಳಗಿನ ಅರ್ಹತೆಗಳು ಇದ್ದರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.
ದೇಶಾದ್ಯಂತ ಪ್ರಸಾರ ಭಾರತಿ ದೂರದರ್ಶನ ನ್ಯೂಸ್ ಚಾನಲ್ನಲ್ಲಿ ಖಾಲಿ ಇರುವ ಸೀನಿಯರ್ ಕರೆಸ್ಪಾಂಡೆಂಟ್ ಹುದ್ದೆಗಳನ್ನು ಭರ್ತಿ ಮಾಡಿಕೊಳಲಾಗುತ್ತಿದೆ. ಈ ನಿಮಿತ್ತ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸರ್ಕಾರದ ವ್ಯಾಪ್ತಿಯಲ್ಲಿ ಉದ್ಯೋಗ ಮಾಡುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ವಿವಿಧ ರಾಜ್ಯಗಳಲ್ಲಿ ನೇಮಕಾತಿ ನಡೆಯುತ್ತಿದ್ದು, ಬೆಂಗಳೂರು, ಚೆನ್ನೈ, ಹೈದರಾಬಾದ್, ತಿರುವನಂತಪುರಂ, ವಿಜಯವಾಡ, ವಾರಣಾಸಿ, ಕೋಲ್ಕತ್ತ, ಪಣಜಿ ವ್ಯಾಪ್ತಿಯ ಪ್ರಸಾರ್ ಭಾರತಿ ಚಾನೆಲ್ ನಲ್ಲಿ ಭರ್ತಿ ಮಾಡಿಕೊಳ್ಳಳಾಗುತ್ತಿದೆ. ಉದ್ಯೋಗಾಕಾಂಕ್ಷಿಗಳು ಕೂಡಲೇ https://prasarbharati.gov.in/ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ನೇಮಕಾತಿ ಪೂರ್ಣ ವಿವರ ಇಲ್ಲಿದೆ ನೇಮಕಾತಿ ಸಂಸ್ಥೆ: ಪ್ರಸಾರ ಭಾರತಿ (ದೂರದರ್ಶನ) ಹುದ್ದೆ ಹೆಸರು: ಸೀನಿಯರ್ ಕರೆಸ್ಪಾಂಡೆಂಟ್ ಒಟ್ಟು ಹುದ್ದೆಗಳು: 08 ತಿಂಗಳ ವೇತನ: ರೂ.80,000 ರಿಂದ 1,25,000 ರೂ. ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್ ಗರಿಷ್ಠ ವಯೋಮಿತಿ: 45 ವರ್ಷ ಪೋಸ್ಟಿಂಗ್: ಭಾರತಾದ್ಯಂತ ಅರ್ಜಿ ಸಲ್ಲಿಕೆ ಕೊನೆ ದಿನ: ಇದೇ ಜನವರಿ 30
ಶೈಕ್ಷಣಿಕ ಅರ್ಹತೆ ಅರ್ಜಿ ಸಲ್ಲಿಸುವ ಆಸಕ್ತ ಅಭ್ಯರ್ಥಿಗಳು ಯಾವುದೇ ವಿಶ್ವ ವಿದ್ಯಾಲಯ ಇಲ್ಲವೇ ಶೈಕ್ಷಣಿಕ ಸಂಸ್ಥೆಗಲ್ಲಿ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಪದವಿ, ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೋಮ ವ್ಯಾಸಂಗ ಮಾಡಿರುವುದು ಕಡ್ಡಾಯ. ಹುದ್ದೆ ಸೇರಬಯಸುವವರಿಗೆ ಹಿಂದಿ, ಇಂಗ್ಲಿಷ್, ಕನ್ನಡ ಭಾಷೆಯ ಜ್ಞಾನ ಇರಬೇಕು.
ಬೆಂಗಳೂರು ನೇಮಕಾತಿ ವಿವರ ಕರ್ನಾಟಕ ರಾಜಧಾನಿ ಬೆಂಗಳೂರಿನ ಚಾನೆಲ್ ನಲ್ಲಿ ಒಂದು 01 ಹುದ್ದೆ ಖಾಲಿ ಇದೆ. ಈ ಹುದ್ದೆಯನ್ನು ಎರಡು ವರ್ಷದ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಮೂರು ಭಾಷೆ ಮಾತನಾಡಲು ಬರಬೇಕು. ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿದ ಅನುಭವ ಇರಬೇಕು. ಕರ್ನಾಟಕ ಬಿಟ್ಟು ಬೇರೆಡೆ ಕೆಲಸ ಮಾಡುವವರಿಗೆ ಅಲ್ಲಿನ ಸ್ಥಳೀಯ ಭಾಷೆಯ ಮೇಲೆ ಹಿಡಿತ ಇರಬೇಕು.
ಅರ್ಜಿ ಸಲ್ಲಿಕೆ ವಿಳಾಸ: ದಾಖಲೆಗಳು ಆಸಕ್ತ ಅಭ್ಯರ್ಥಿಗಳು ತಡಮಾಡದೇ ಈ ಕೂಡಲೇ ಆನ್ಲೈನ್ https://application.prasarbharati.org ಮೂಲಕ ಸೂಕ್ತ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಜೊತೆಗೆ ಅಭ್ಯರ್ಥಿಗಳು ಪತ್ರಿಕೋದ್ಯಮದಲ್ಲಿ ವ್ಯಾಸಂಗ ಮಾಡಿದ ಅಂಕಪಟ್ಟಿ, ಎಸ್ಎಸ್ಎಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್ ಸಂಖ್ಯೆ, ಶಿಕ್ಷಣದ ಇತರ ಪ್ರಮಾಣ ಪತ್ರ, ಕಾರ್ಯಾನುಭವದ ಪ್ರಮಾಣ ಪತ್ರ ಅಳವಡಿಸಬೇಕು. ನೀವು ಅರ್ಜಿ ಸಲ್ಲಿಸಿ ಸರ್ಕಾರದಿಂದ ಮಾನ್ಯ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಎಸ್ಎಸ್ಎಲ್ಸಿ ಮತ್ತು ದ್ವಿತಿಯ ಪಿಯುಸಿ ಉತ್ತೀರಣ ರಾದವರು, ಸಿನಿಮಾ, ವಿಡಿಯೋ ಎಡಿಟಿಂಗ್ ನಲ್ಲಿ ಪಿಜಿ ಡಿಪ್ಲೋಮ ಅಥವಾ ಪದವಿ ವಿದ್ಯಾರ್ಹತೆ ಪಡೆದವರು, ಎರಡು ವರ್ಷದ ಕಾರ್ಯಾನುಭವದ ಮೇಲೆ ಅರ್ಜಿ ಸಲ್ಲಿಸಬಹುದು ಎಂದ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ https://application.prasarbharati.org ಗೆ ಭಟಿ ಕೊಡಿ.