ಬೆಂಗಳೂರು || ಮಳೆಯ ಅವಾಂತರ – ಸಾಯಿ ಲೇಔಟ್‌ಗೆ ಜಲದಿಗ್ಭಂದನ

ಬೆಂಗಳೂರು || ಮಳೆಯ ಅವಾಂತರ – ಸಾಯಿ ಲೇಔಟ್‌ಗೆ ಜಲದಿಗ್ಭಂದನ

ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ಮತ್ತೆ ಸಾಯಿ ಲೇಔಟ್(Sai Layout) ಸಂಪೂರ್ಣ ಜಲಾವೃತಗೊಂಡಿದ್ದು, ಮನೆಯಿಂದ ಹೊರಬರಲಾಗದೇ ಜನ ಪರದಾಡುತ್ತಿದ್ದಾರೆ.

ಹೊರಮಾವು(Horamavu) ಸಮೀಪದ ವಡ್ಡರಪಾಳ್ಯದಲ್ಲಿ ಇನ್ನೂ ನೀರು ನಿಂತಿದ್ದು, ಹೊರಮಾವು ಅಗರ ಮುಖ್ಯ ರಸ್ತೆಯ ತುಂಬೆಲ್ಲಾ ನೀರು ತುಂಬಿದೆ. ಈ ಮಳೆ ನೀರಿನ ಮಧ್ಯೆ ಖಾಸಗಿ ಬಸ್ಸೊಂದು ರಸ್ತೆಯಲ್ಲೇ ಕೆಟ್ಟು ನಿಂತಿದೆ.

ವಡ್ಡರಪಾಳ್ಯದಲ್ಲಿ ರಾಜಾಕಾಲುವೆಯೂ ಭರ್ತಿಯಾಗಿ ರಸ್ತೆ ತುಂಬೆಲ್ಲಾ ನೀರು ನಿಂತಿದೆ. ಮುಂಜಾನೆ 4 ಗಂಟೆ ಸುಮಾರಿಗೆ ರಾಜಾಕಾಲುವೆ ಒಡೆದು ನೀರು ರಸ್ತೆಗೆ ಹರಿದಿದೆ. ಬಡಾವಣೆ ಮಧ್ಯೆ ಇರುವ ಖಾಲಿ ಜಮೀನು ಪೂರ್ತಿ ಮಳೆ ನೀರು ತುಂಬಿಕೊಂಡಿದೆ. ಈ ಮಳೆ ನೀರು ಖಾಲಿ ಜಮೀನಿನಿಂದ ರಸ್ತೆ ಹಾಗೂ ಬಡಾವಣೆ ಒಳಗೆಲ್ಲಾ ಹರಿದು ಬರುತ್ತಿದೆ.

ವಡ್ಡರಪಾಳ್ಯವು(Vaddarapalya) ಮಳೆ ನೀರಿಗೆ ದ್ವೀಪದಂತಾಗಿದೆ. 25ಕ್ಕೂ ಹೆಚ್ಚು ಕ್ರಾಸ್‌ಗಳಲ್ಲಿ ನೀರು ನಿಂತಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ. ಎರಡು ಬೋಟ್‌ಗಳ ಮೂಲಕ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಮಾಡುತ್ತಿದ್ದಾರೆ. ಮುಂಜಾನೆ 4 ಗಂಟೆ ಸುಮಾರಿಗೆ ಏಕಾಏಕಿ ನೀರು ಹೆಚ್ಚಾಗಿ, ರಸ್ತೆ ಹಾಗೂ ಮನೆಗಳಿಗೆ ನುಗ್ಗಿದೆ. ನೀರಿನ ಜೊತೆಗೆ ಹಾವುಗಳು ಕೆಲ ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಉದ್ಯೋಗಿಗಳು ಕೆಲಸಕ್ಕೆ ಹೋಗಲಾಗದೇ ಮನೆಗಳಲ್ಲೇ ಬಂಧಿಯಾಗಿದ್ದಾರೆ. ಇನ್ನು 30ಕ್ಕೂ ಹೆಚ್ಚು ಜನ ಕಾರ್ಮಿಕರೂ ಕೆಲಸಕ್ಕೆ ತೆರಳಲಾಗದೇ ಪರದಾಡುತ್ತಿದ್ದಾರೆ.

Leave a Reply

Your email address will not be published. Required fields are marked *