ಬೆಂಗಳೂರು || ಬಾಲಕಿ ಮೇಲೆ ಅ*ಚಾರ :: ಆರೋಪಿ ಫೋನ್ ನಲ್ಲಿ 8 ದೇಸಿ ಹುಡುಗಿಯರ ಅಶ್ಲೀಲ ವಿಡಿಯೋ ಪತ್ತೆ..!

ಬೆಂಗಳೂರು || ಬಾಲಕಿ ಮೇಲೆ ಅ*ಚಾರ :: ಆರೋಪಿ ಫೋನ್ ನಲ್ಲಿ 8 ದೇಸಿ ಹುಡುಗಿಯರ ಅಶ್ಲೀಲ ವಿಡಿಯೋ ಪತ್ತೆ..!

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬ್ಯಾಡ್ಮಿಂಟನ್ ಕೋಚ್ ವೊಬ್ಬನನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಬ್ಯಾಡ್ಮಿಂಟನ್ ಕೋಚ್ ಸುರೇಶ್ ಬಾಲಾಜಿ(30) ಬಂಧಿತ ಆರೋಪಿಯಾಗಿದ್ದಾನೆ.  ವಿಚಾರಣೆ ವೇಳೆ ಆರೋಪಿ ಸುರೇಶ್ ಬಾಲಾಜಿ ಬ್ಯಾಡ್ಮಿಂಟನ್ ಹೇಳಿಕೊಡುವ ನೆಪದಲ್ಲಿ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕವಾಗಿ ಬಳಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಕೋಚಿಂಗ್​ ಸೇರಿದ್ದ ಬಾಲಕಿಯನ್ನು ಆಗಾಗ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಯಾರ ಬಳಿಯೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾನೆ.

ಎಸ್ ಎಸ್ ಎಲ್‌ ಸಿ ಪರೀಕ್ಷೆಯ ಫಲಿತಾಂಶದ ನಿರೀಕ್ಷೆಯಲ್ಲಿದ್ದ ಬಾಲಕಿ, ರಜಾ ದಿನಗಳನ್ನು ಕಳೆಯಲು ಅಜ್ಜಿಯ ಮನೆಗೆ ತೆರಳಿದ್ದಳು. ಈ ವೇಳೆ ಬಾಲಕಿ ಅಜ್ಜಿಯ ಫೋನ್‌ ನಿಂದ ಅಪರಿಚಿತ ನಂಬರ್‌ ಗೆ ತನ್ನ ಬೆತ್ತಲೆ ಫೋಟೋ ಕಳುಹಿಸಿದ್ದಳು. ಇದನ್ನು ಗಮನಿಸಿದ ಅಜ್ಜಿ, ತಕ್ಷಣ ಆಕೆಯ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಲಕಿಯ ತಾಯಿಯು ಮಗಳನ್ನು ವಿಚಾರಿಸಿದಾಗ ಸಾಕಷ್ಟು ಬಾರಿ ಬ್ಯಾಡ್ಮಿಂಟನ್ ಕೋಚ್, ಲೈಂಗಿಕ ದೌರ್ಜನ್ಯ ಎಸಗಿರುವುದು ತಿಳಿದು ಬಂದಿದೆ.

ತಕ್ಷಣವೇ ಬಾಲಕಿಯ ತಾಯಿ ಹುಳಿಮಾವು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕೇಸ್ ದಾಖಲಿಸಿಕೊಂಡ ಪೊಲೀಸರು ಸುರೇಶ್ ಬಾಲಾಜಿಯನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್ ನಲ್ಲಿ 13 ರಿಂದ 16 ವರ್ಷ ವಯಸ್ಸಿನ 8 ಹುಡುಗಿಯರ ನಗ್ನ ಫೋಟೋಗಳು ಮತ್ತು ವಿಡಿಯೋಗಳು ಸಹ ಪತ್ತೆಯಾಗಿವೆ.

ಸದ್ಯ ಆರೋಪಿಯನ್ನು ಕೋರ್ಟ್ ಗೆ​ ಹಾಜರುಪಡಿಸಲಾಗಿದ್ದು, 8 ದಿನಗಳ ಕಾಲ ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

Leave a Reply

Your email address will not be published. Required fields are marked *