ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ವತಿಯಿಂದ ಸಿಲ್ಕ್ ಬೋರ್ಡ್ನಿಂದ ಕೆ.ಆರ್.ಪುರಂವರೆಗೆ ಮತ್ತು ಕೆ.ಆರ್.ಪುರಂನಿಂದ ಬೆಂಗಳೂರು ವಿಮಾನ ನಿಲ್ದಾಣವರೆಗೆ 58 ಕಿಲೋ ಮೀಟರ್ ಉದ್ದದ ನೀಲಿ ಮಾರ್ಗ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ ಈ ಮಾರ್ಗ ನಿರ್ಮಾಣಕ್ಕೂ ಮೊದಲೇ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) 100 ₹100 ಕೋಟಿ ಆದಾಯ ಹರಿದು ಬಂದಿದೆ.
ಹೌದು, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಅಧಿಕಾರಿಗಳೇ ಹೇಳುವಂತೆ ಈ ಮಾಹಿತಿ ಸತ್ಯ. ನಿಗಮದೊಂದಿಗೆ ಎಂಬಸಿ ಆಫೀಸ್ ಪಾರ್ಕ್ಸ್ REIT (ಎಂಬೆಸಿ REIT) ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2ಎ ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರ ಮಾರ್ಗದ ಮೂಲಕ ಹೊರವರ್ತುಲ ರಸ್ತೆಯ ಮಾರ್ಗದಲ್ಲಿ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ಈ ನಿಲ್ದಾಣಕ್ಕೆ ಸಂಬಂಧಿಸಿದಂತೆ ಪ್ರಮುಖ ಒಪ್ಪಂದ ಏರ್ಪಟ್ಟಿದೆ ಎಂದು ಸೋಮವಾರ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ಎಂಬೆಸಿ ಟೆಕ್ ವಿಲೇಜ್ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ’ ಎಂಬಸಿ ಆರ್ ಐಟಿಯ ಭಾಗವಾಗಿರುವ ವಿಕಾಸ್ ಟೆಲಿಕಾಂ ಪ್ರೈವೇಟ್ ಲಿಮಿಟೆಡ್ (ವಿಟಿಪಿಎಲ್), ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಹೊಸ ಮೆಟ್ರೋ ನಿಲ್ದಾಣ ನಿಲ್ದಾಣದ ನಿರ್ಮಾಣಕ್ಕೆ ಒಪ್ಪದಂತೆ ರೂ. 100 ಕೋಟಿ ನೀಡಲಿದೆ. ಏಕೆಂದರೆ ಮೆಟ್ರೋ ನಿಗಮವು 30 ವರ್ಷಗಳ ಅವಧಿಗೆ ಜಾಹೀರಾತು, ವಾಣಿಜ್ಯ ಸ್ಥಳ ಮತ್ತು ನೇರ ಸಂಪರ್ಕದ ಜೊತೆಗೆ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣದ ನಾಮಕರಣದ ಹಕ್ಕುಗಳನ್ನು ಕಂಪನಿಗೆ ಒಪ್ಪಂದಂತೆ ನೀಡುತ್ತದೆ. ಈ ಹೊಸ ನಿಲ್ದಾಣವನ್ನು ‘ಎಂಬೆಸಿ ಟೆಕ್ ವಿಲೇಜ್ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣ’ ಎಂದು ಮರು ನಾಮಕರಣ ಮಾಡಲಾಗಿದೆ.
17 ಕಿ.ಮೀ ಮಾರ್ಗ 16 ನಿಲ್ದಾಣ ಕಾಡುಬೀಸನಹಳ್ಳಿ ಮೆಟ್ರೋ ನಿಲ್ದಾಣವು 17 ಕಿ.ಮೀ ಓ.ಆರ್.ಆರ್ ಮಾರ್ಗದ ಒಂದು ಭಾಗವಾಗಿದೆ. ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-2A ಅಡಿಯಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್ ಪುರಂ 16 ನಿಲ್ದಾಣಗಳನ್ನು ಹೊಂದಿದೆ. ಈ ಮಾರ್ಗವು ಬೆಂಗಳೂರಿನ ಎಲ್ಲಾ ಭಾಗಗಳ ನಿವಾಸಿಗಳು ಮತ್ತು ಪ್ರಯಾಣಿಕರಿಗೆ ಚಲನಶೀಲತೆಗಾಗಿ ಸುಸ್ಥಿರ ಮತ್ತು ಪರಿಣಾಮಕಾರಿ ಪರ್ಯಾಯ ಹೊಂದಿದೆ. ಈ ಮೂಲಕ ಓ.ಆರ್.ಆರ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುತ್ತದೆ ಮತ್ತು ವಾಹನ ಮಾಲಿನ್ಯದಿಂದ ಪರಿಸರದ ಪರಿಣಾಮ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಿ.ಎಂ.ಆರ್.ಸಿ.ಎಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಮಹೇಶ್ವರ ರಾವ್, ಸುಸ್ಥಿರ ನಗರಾಭಿವೃದ್ಧಿ ಮತ್ತು ನಗರ ಸಾರಿಗೆಗೆ ತಮ್ಮ ಬೆಂಬಲದೊಂದಿಗೆ ಎಂಬೆಸಿ REIT ಸಂಸ್ಥೆ ಮುಂದೆ ಬಂದಿರುವುದು ಸಂತಸ ತಂದಿದೆ ಎಂದು ತಿಳಿಸಿದರು. O.R.R ಕಾರಿಡಾರ್ ಬೆಂಗಳೂರಿನಲ್ಲಿ ಪ್ರಮುಖ ಚಲನಶೀಲ ಮಾರ್ಗವಾಗಿದೆ,. ಪ್ರಮುಖ ವಾಣಿಜ್ಯ ಕೇಂದ್ರಗಳು, ಕಚೇರಿ ಉದ್ಯಾನವನಗಳು ಮತ್ತು ವಸತಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇಂತಹ ಸಹಭಾಗಿತ್ವಗಳು ಮೂಲಸೌಕರ್ಯ ಬೆಳವಣಿಗೆಯನ್ನು ವೇಗಗೊಳಿಸಲು ಸಹಕಾರಿಯಾಗಿದೆ. ಅದಷ್ಟೇ ಅಲ್ಲದೇ ನಗರಕ್ಕೆ ಹೆಚ್ಚು ಸುಲಭವಾಗಿ ಮತ್ತು ಸುಸ್ಥಿರವಾದ ಮೆಟ್ರೊ ಜಾಲ ನಿರ್ಮಿಸಲು ಒಟ್ಟಾಗಿ ಕೆಲಸ ಮಾಡಲು ಇಂತಹ ಒಪ್ಪಂದಗಳನ್ನು BMRCL ಎದುರು ನೋಡುತ್ತಿದೆ ಎಂದು ತಿಳಿಸಿದರು. ಸಾರ್ವಜನಿಕ ಸಾರಿಗೆ ಉತ್ತೇಜನ ನೀಡುತ್ತದೆ
BMRCL ಜೊತೆಗೆ ಒಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಎಂಬೆಸಿ ಆರ್ಐಟಿಯ ಸಿಐಒ ಋತ್ವಿಕ್ ಭಟ್ಟಾಚಾರ್ಜ, ಕಾಡುಬೀಸನಹಳ್ಳಿಯಲ್ಲಿ ಮೆಟ್ರೋ ನಿಲ್ದಾಣದ ಅಭಿವೃದ್ಧಿಗಾಗಿ ಬಿಎಂಆರ್ಸಿಎಲ್ ಜೊತೆ ಪಾಲುದಾರಿಕೆ ಮಾಡಿಕೊಂಡಿರುವುದು ಖುಷಿಯ ವಿಷಯ. ಸಾರ್ವಜನಿಕ ಚಲನಶೀಲತೆ ಪ್ರೋತ್ಸಹಿಸಲು, ದೀರ್ಘಾವಧಿಯ ಹೂಡಿಕೆಗಳ ಮೂಲಕ ಬೆಂಗಳೂರಿನ ನಗರ ಮೂಲಸೌಕರ್ಯ ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ. ಈ ಮೆಟ್ರೋ ಯೋಜನೆಯು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ಸಾರಿಗೆಯ ಹೆಚ್ಚಿನ ಬಳಕೆಗೆ ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.