ಬೆಂಗಳೂರು: ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿ ತೆರಿಗೆ ಸಂಗ್ರಹದಲ್ಲಿ ಇದೀಗ ಇನ್ನಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದು. ಒಂದು ಹಂತದಲ್ಲಿ ರಾಜ್ಯ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದೆ. ಹೌದು ಬೆಂಗಳೂರಿನಲ್ಲಿ ಅಂದಾಜು 2 ಲಕ್ಷಕ್ಕೂ ಹೆಚ್ಚು ಜನ ಆಸ್ತಿ ತೆರಿಗೆ ಬಾಕಿಯನ್ನು ಉಳಿಸಿಕೊಂಡಿದ್ದಾರೆ. ಅಲ್ಲದೆ ಇದರಲ್ಲಿ ಮೂರು ಸಾವಿರ ಜನರು ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿ ಮಾಡಿಲ್ಲ. ಈ ರೀತಿಯ ಆಸ್ತಿಗಳ ಮೇಲೆ ಕಠಿಣ ಕ್ರಮಕ್ಕೆ ಬಿಬಿಎಂಪಿಯು ಮುಂದಾಗಿದೆ. ಇದರ ನಡುವೆ ಇದೀಗ ಬೆಂಗಳೂರಿನ ಪ್ರತಿಷ್ಠಿತ ಕಚೇರಿಗಳಾದ ವಿಧಾನಸೌಧ ಹಾಗೂ ರಾಜಭವನ ಹಲವು ಸರ್ಕಾರಿ ಕಚೇರಿಗಳಿಗೇ ಶಾಕ್ ಕೊಡುವುದಕ್ಕೆ ಪಾಲಿಕೆ ಮುಂದಾಗಿದೆ. ಅದೇನು ಎನ್ನುವ ವಿವರ ಮುಂದಾಗಿದೆ.
ನಗರದಲ್ಲಿ ಹಲವು ಪ್ರತಿಷ್ಠಿತ ಕಚೇರಿಗಳು ಹಾಗೂ ಆಸ್ತಿ ಮಾಲೀಕರಿಗೆ ಈಗಾಗಲೇ ಶಾಕ್ ಕೊಟ್ಟಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇದೀಗ ರಾಜ್ಯದ ಪ್ರಮುಖ ಸರ್ಕಾರಿ ಕಚೇರಿಗಳ ವಿರುದ್ಧವೂ ಸಮರ ಸಾರಿದೆ. ಸರ್ಕಾರಿ ಕಚೇರಿಗಳು ಕಳೆದ ಒಂದು ದಶಕಕ್ಕೂ ಹೆಚ್ಚು ಅವಧಿಯಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದು. ಇದೀಗ ಈ ರೀತಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಸಂಸ್ಥೆಗಳ ಮಾಲೀಕರಿಗೆ ಶಾಕ್ ಕೊಡಲಾಗಿದೆ.
ಹೌದು ಬೆಂಗಳೂರಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಮುಖ್ಯ ಆದಾಯವೇ ಬೆಂಗಳೂರಿನ ಆಸ್ತಿ ತೆರಿಗೆ ಸಂಗ್ರಹದಿಂದ ಬರುವ ಆದಾಯದಿಂದ ಆದರೆ, ಕೆಲವು ಆಸ್ತಿದಾರರು ಬಿಬಿಎಂಪಿಯ ಸೂಚನೆಗಳಿಗೆ ಕ್ಯಾರೇ ಎಂದಿಲ್ಲ. ಇದೀಗ ಈ ರೀತಿ ಕೇರ್ ಲೆಸ್ ಆಗಿರುವ ಆಸ್ತಿದಾರರಿಗೆ ಈಗಾಗಲೇ ಬಿಸಿ ಮುಟ್ಟಿಸಲಾಗಿದೆ. ಸರ್ಕಾರದ ಕೆಲವು ಕಚೇರಿಗಳು ಸಹ ಇದೇ ಮಾದರಿಯನ್ನು ಅನುಸರಿಸಿದ ಹಿನ್ನೆಲೆಯಲ್ಲಿ ಸರ್ಕಾರಿ ಸಂಸ್ಥೆಯ ಕಚೇರಿಗಳಿಗೂ ಬಿಸಿ ಮುಟ್ಟಿಸಲಾಗುತ್ತಿದೆ.
ಸರ್ಕಾರಿ ಕಚೇರಿಗಳಿಗೂ ಶಾಕ್ ಕೊಟ್ಟ ಪಾಲಿಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಇದೀಗ ಬೆಂಗಳೂರಿನ ಬರೋಬ್ಬರಿ 258 ಸರ್ಕಾರಿ ಕಚೇರಿ / ಕಟ್ಟಡಗಳಿಗೆ ಶಾಕ್ ಕೊಟ್ಟಿದೆ. ಅದರಲ್ಲಿ ಮುಖ್ಯವಾಗಿ ರಾಜ್ಯದ ಶಕ್ತಿ ಕೇಂದ್ರ ಎಂದೇ ಬಿಂಬಿತವಾಗಿರುವ ವಿಧಾನಸೌಧ ಹಾಗೂ ರಾಜಭವನ ಸರ್ಕಾರಿ ಕಟ್ಟಡಗಳು ಸೇರಿವೆ. ಸುದೀರ್ಘ ಅವಧಿಯಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 258 ಆಸ್ತಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಈ ರೀತಿ ಗುರುತಿಸಲಾದ ಸರ್ಕಾರಿ ಕಚೇರಿಗಳು ಕೋಟಿಗಟ್ಟಲೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ.
17 ವರ್ಷಗಳಿಂದ ತೆರಿಗೆ ಬಾಕಿ: ಇನ್ನು ಇದೇ ಸಂದರ್ಭದಲ್ಲಿ ಕೆಲವು ಸರ್ಕಾರಿ ಕಚೇರಿಗಳು ಬರೋಬ್ಬರಿ 17 ವರ್ಷಗಳಿಂದ ಪಾಲಿಕೆಗೆ ಆಸ್ತಿ ತೆರಿಗೆ ಬಾಕಿಯನ್ನು ಪಾವತಿ ಮಾಡಿಲ್ಲ ಎಂದು ಹೇಳಲಾಗಿದೆ. ಕೋಟ್ಯಾಂತರ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವುದರಿಂದ ಬಿಬಿಎಂಪಿಗೆ ಆರ್ಥಿಕ ಸಂಕಷ್ಟ ಎದುರಾಗಿದ್ದು. ಇದೀಗ ಸರ್ಕಾರಿ ಕಚೇರಿಗಳು ಎಂದೂ ನೋಡದೆ. ಈ ಸರ್ಕಾರಿ ಕಚೇರಿಗಳ ಮುಖ್ಯಸ್ಥರಿಗೆ ನೋಟಿಸ್ ಮಂಜೂರು ಮಾಡಲಾಗಿದೆ. ಈ ಸಂಬಂಧ ಇನ್ನೊಮ್ಮೆ ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.