ಬೆಂಗಳೂರು: ಇ – ಖಾತಾ ವಿಚಾರದಲ್ಲಿ ಬೆಂಗಳೂರಿನಲ್ಲಿ ಫ್ಲಾಟ್ಗಳು, ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್ನ್ಯೂಸ್ ಕೊಟ್ಟಿದೆ. ಇ- ಖಾತಾ ಜಾರಿ ಮಾಡಿ ಆರು ತಿಂಗಳು ಸಮೀಪಿಸುತ್ತಿದ್ದರೂ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಕೇವಲ 2.25 ಲಕ್ಷ ಆಸ್ತಿದಾರರಿಗೆ ಮಾತ್ರ ಅಂತಿಮ ಇ – ಖಾತಾ ನೀಡಲಾಗಿದೆ. ಇದೀಗ ಬೆಂಗಳೂರಿನಲ್ಲಿ ಇ ಖಾತಾದಲ್ಲಿ ಇನ್ನೂ ಗೊಂದಲ ಇರುವುದರಿಂದ ಇದನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿಯು ಫ್ಲಾಟ್ಗಳು, ಅಪಾರ್ಟ್ಮೆಂಟ್ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಇ – ಖಾತಾ ನೀಡುವುದನ್ನು ಸುಲಭವಾಗಿಸಿದೆ.

ಬೆಂಗಳೂರಿನ ಬಹು ಫ್ಲಾಟ್ಗಳು, ವಾಣಿಜ್ಯ ಘಟಕಗಳಿಗೆ ಒಟ್ಟಾಗಿ ಹೊಸ ಖಾತಾ ನೀಡುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಭರ್ಜರಿ ಗುಡ್ನ್ಯೂಸ್ ನೀಡಿದೆ. ಅದೇನು ಎನ್ನುವ ವಿವರವನ್ನು ಮುಂದೆ ನೋಡೋಣ. ನೀವು ಕಟ್ಟಡಗಳ ಅಭಿವೃದ್ಧಿದಾರರು, ಮಾಲೀಕರಾಗಿದ್ದು, ಎಲ್ಲಾ ಬಹು ಫ್ಲಾಟ್ಗಳು/ವಾಣಿಜ್ಯ ಘಟಕಗಳಿಗೆ ಹೊಸ ಖಾತಾ ಪಡೆದುಕೊಳ್ಳಬೇಕು ಎಂದು ಕಾಯುತ್ತಿದ್ದೀರಾ ಹಾಗಾದರೆ ಇದೀಗ ಬಿಬಿಎಂಪಿಯು ದೊಡ್ಡ ಗುಡ್ನ್ಯೂಸ್ವೊಂದನ್ನು ಕೊಟ್ಟಿದೆ. ಅತ್ಯಂತ ಸರಳವಾಗಿ ಮತ್ತು ಸ್ವತಃ ನೀವೇ (Suo-moto) ಅರ್ಜಿ ಸಲ್ಲಿಸಬಹುದು ಎಂದು ಹೇಳಿದೆ.
ನಗರದಲ್ಲಿ ಆಸ್ತಿದಾರರಿಗೆ ಪಾಲಿಕೆಯು ಇ – ಖಾತಾ ನೀಡುವುದನ್ನು ಕಡ್ಡಾಯ ಮಾಡಿದೆ. ಅಲ್ಲದೇ ಎಲ್ಲಾ ಆಸ್ತಿದಾರರು ಇ ಖಾತಾ ಪಡೆದುಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಬಿಬಿಎಂಪಿಯು ಮಾಡುತ್ತಿದೆ. ಇದೀಗ ಫ್ಲಾಟ್ಗಳು, ವಾಣಿಜ್ಯ ಘಟಕಗಳಿಗೆ ಒಟ್ಟಾಗಿ ಹೊಸ ಖಾತಾ ನೀಡುವ ಸರಳ ವಿಧಾನವನ್ನು ಪರಿಚಯಿಸಿದೆ. * ಬಿಬಿಎಂಪಿ ವೆಬ್ಸೈಟ್ ಮಾಹಿತಿ: ಬೆಂಗಳೂರಿನಲ್ಲಿ ಇರುವವರು ಈ ಆಸ್ತಿಗಳಿಗೆ ಆಸ್ತಿದಾರರು ಇ ಖಾತಾ ತೆಗೆದುಕೊಳ್ಳಬೇಕು ಎಂದಾದರೆ ನೀವು https://BBMP.karnataka.gov.in/NewKhata ದಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇಲ್ಲಿ ನೀವು ನಿಮ್ಮ ಎಲ್ಲಾ ಫ್ಲಾಟ್ಗಳು ಅಥವಾ ಬಿಬಿಎಂಪಿ ಖಾತಾ ಇಲ್ಲದೆ ಇರುವ ನಿರ್ದಿಷ್ಟ ಫ್ಲಾಟ್ಗಳಿಗೆ ನೀವೇ ಹೊಸ ಬಿಬಿಎಂಪಿ ಖಾತಾವನ್ನು ರಚಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
* ಇನ್ನು ನೀವು ಬಿಬಿಎಂಪಿ ಖಾತಾ ಹೊಂದಿದ್ದರೆ. ಇ-ಖಾತಾ ಬಯಸಿದರೆ – ಹೊಸ ಖಾತಾ ಪಡೆಯಲು ಪ್ರಯತ್ನಿಸಬೇಡಿ. ನಕಲಿ ಖಾತೆ ಪಡೆಯುವ ಇಂತಹ ಪ್ರಯತ್ನವು ವ್ಯಕ್ತಿಯನ್ನು ಕ್ರಿಮಿನಲ್ ಪ್ರಕರಣಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದೂ ಬಿಬಿಎಂಪಿಯು ಎಚ್ಚರಿಕೆ ನೀಡಿದೆ.
* ಇನ್ನು ಎಲ್ಲಾ ಘಟಕಗಳಿಗೆ/ವಾಣಿಜ್ಯ ಘಟಕಗಳಿಗೆ ಹೊಸ ಬಿಬಿಎಂಪಿ ಖಾತೆ ಪಡೆಯಲು, ಆನ್ಲೈನ್ನಲ್ಲಿ ಈ ಕೆಳಕಂಡ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ. * ಪ್ರತಿನಿಧಿ ಅಥವಾ ಆಸ್ತಿ ಮಾಲೀಕರ ಆಧಾರ್ ಸಂಖ್ಯೆ
ಎ – ಖಾತಾ ಬೇಕಾದಲ್ಲಿ ಕಟ್ಟಡದ ಅನುಮೋದಿತ ನಕ್ಷೆ ಮತ್ತು ಸ್ವಾಧೀನ ಪ್ರಮಾಣ ಪತ್ರ ಸಲ್ಲಿಸಬೇಕು. ಆಸ್ತಿಯ ಭಾವಚಿತ್ರವನ್ನು ಸಲ್ಲಿಕೆ ಮಾಡಬೇಕು ಎಂದು ಬಿಬಿಎಂಪಿಯ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.