ಬೆಂಗಳೂರು || ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ನಿರೀಕ್ಷಿತ ಈ ಭಾಗದ ಜನರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು || ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ನಿರೀಕ್ಷಿತ ಈ ಭಾಗದ ಜನರಿಗೆ ಭರ್ಜರಿ ಗುಡ್ ನ್ಯೂಸ್

ಬೆಂಗಳೂರು: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ. ಇದು ಎರಡು ಟರ್ಮಿನಲ್ಗಳನ್ನು ಒಳಗೊಂಡಿದ್ದರೂ ಸಹ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುತ್ತಿಲ್ಲ. ಈ ಹಿನ್ನೆಲೆ ನಗರದ ಸಮೀಪ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದ್ದು, ಸ್ಥಳಗಳನ್ನು ಸಹ ಗುರುತಿಸಿದೆ. ಈ ಪೈಕಿ ಬಿಡದಿ ಕೂಡ ಒಂದಾಗಿದೆ. ಇದೀಗ ಈ ಭಾಗದ ಜನರಿಗೆ ಇ-ಖಾತಾ ವಿಚಾರವಾಗಿ ಗುಡ್ ನ್ಯೂಸ್ ಸಿಕ್ಕಿದೆ.

ಬಿಡದಿ ಪುರಸಭೆ ಹಮ್ಮಿಕೊಂಡಿದ್ದ ಇ-ಖಾತೆ ಆಂದೋಲನ ಸಂಪೂರ್ಣ ಯಶಸ್ವಿ ಆಗಿದೆ. ಸುಮಾರು 500ಕ್ಕೂ ಹೆಚ್ಚು ಇ-ಖಾತೆ ನಮೂನೆಗಳನ್ನು ಅರ್ಜಿದಾರರ ಮನೆ ಬಾಗಿಲಿಗೆ ತಲುಪಿಸುವ ಮಾದರಿ ಕಾರ್ಯಕ್ಕೆ ಪುರಸಭೆ ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಬೆಂಗಳೂರಿನ ಅಕ್ಕಪಕ್ಕದಲ್ಲೇ ಇರುವ ಮೆಟ್ರೋ, 2ನೇ ಅಂತಾರಾಷ್ಟ್ರೀಯ ವಿಮಾನಾ ನಿಲ್ದಾಣ, ಟೌನ್ಶಿಪ್ ನಿರ್ಮಾಣ ನಿರೀಕ್ಷೆಯಲ್ಲಿರುವ ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ ನಿವೇಶನ ಖರೀದಿಸುವುದು ಅಷ್ಟು ಸುಲಭದ ಮಾತಲ್ಲ. ಇ-ಖಾತೆ ಪಡೆದುಕೊಳ್ಳುವುದು ಅಷ್ಟೇ ಕಷ್ಟ ಆಗಿತ್ತು. ಆದರೆ, ಇದೀಗ ಇ-ಖಾತೆ ಆಂದೋಲನವು ಖಾತೆ ಸಮಸ್ಯೆಗೆ ನಾಂದಿಯಾಡಲು ಪ್ರಮುಖ ಕಾರಣವಾಗಿದೆ. ಇದರಿಂದ ಅನಗತ್ಯ ವಿಳಂಬ, ಕಚೇರಿಗೆ ಅಲೆದಾಟ, ಯಾವುದೇ ಕಿರಿಕಿರಿ ಇಲ್ಲದೆ ಖಾತೆ ಪಡೆದುಕೊಳ್ಳಲು ಸಾಧ್ಯವಾಗುತ್ತಿದೆ. ಬಿಡದಿ ಪುರಸಭೆ ವ್ಯಾಪ್ತಿಯ 23 ವಾರ್ಡ್ಗಳಲ್ಲಿಇತ್ತೀಚೆಗೆ ನಡೆದ ಇ-ಖಾತಾ ಆಂದೋಲನದಲ್ಲಿಸಲ್ಲಿಕೆ ಆದ ಅರ್ಜಿಗಳ ಪೈಕಿ ಸುಮಾರು 500ಕ್ಕೂ ಹೆಚ್ಚು ಇ-ಖಾತಾ ನಮೂನೆಗಳನ್ನು ಅರ್ಜಿದಾರರ ಮನೆಬಾಗಿಲಿಗೆ ತಲುಪಿಸಲು ಪುರಸಭೆ ಅಧ್ಯಕ್ಷ ಎಂ.ಎನ್.ಅಧ್ಯಕ್ಷ ಹರಿಪ್ರಸಾದ್ ಮುಂದಾಗುದ್ದಾರೆ. ಈ ಮೂಲಕ ಪುರಸಭೆ ಸಭಾಂಗಣದಲ್ಲಿ ಕೆಲ ಆಸ್ತಿ ಮಾಲೀಕರಿಗೆ ಇ-ಸ್ವತ್ತು ಪತ್ರಗಳನ್ನು ಸಾಂಕೇತಿಕ ವಿತರಣೆಗೆ ಚಾಲನೆ ನೀಡಿದರು.

ಮನೆ ನಿರ್ಮಾಣ, ಬ್ಯಾಂಕ್ ಸಾಲ ಪಡೆಯಲು ಮತ್ತಿತರ ವಹಿವಾಟು ನಡೆಸಲು ಮಾಲೀಕರು ತಮ್ಮ ಸ್ವತ್ತುಗಳಿಗೆ ಇ-ಸ್ವತ್ತು ಪಡೆಯುವುದು ಅತ್ಯವಶ್ಯಕ. ಪ್ರಾಮುಖ್ಯತೆ ಇರುವ ಇ-ಸ್ವತ್ತು ಎಲ್ಲರಿಗೂ ನೀಡಬೇಕು ಎಂಬುದು ನಮ್ಮ ಗಿರಿಯಾಗಿದೆ ಎಂದು ಹೇಳಿದರು.

ಡಿಸೆಂಬರ್ 9, 2024ರಿಂದ ಜನವರಿ 2, 2025ರವರೆಗೆ ನಡೆದ ಆಂದೋಲನದಲ್ಲಿ ಪ್ರತಿ ವಾರ್ಡ್ಗೆ ತೆರಳಿ ಇ-ಖಾತೆ ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. 500ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿ ಕೇವಲ ಒಂದು ತಿಂಗಳೊಳಗೆ ಇ-ಖಾತೆಗಳನ್ನು ಸೃಜಿಸಲಾಗಿದೆ. ನಮ್ಮ ಎಲ್ಲಾ ಸದಸ್ಯರು, ಅಧಿಕಾರಿ ಮತ್ತು ಸಿಬ್ಬಂದಿ ಸಹಕಾರದಿಂದ ಇದು ಸಾಧ್ಯ ಆಗಿದೆ. ಮಾಲೀಕರ ಮನೆ ಬಾಗಿಲಿಗೆ ಹೋಗಿ ಆ ವಾರ್ಡ್ನ ಸದಸ್ಯರ ಸಮ್ಮುಖದಲ್ಲಿಇ-ಖಾತೆ ವಿತರಣಾ ಮಾಡಲಾಗುವುದು. ಇದರಿಂದ ಪುರಸಭೆ ಆಡಳಿತವನ್ನು ಜನರ ಬಳಿಗೆ ಕೊಂಡೊಯ್ಯುವುದರ ಜೊತೆಗೆ ಪುರಸಭೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಲಿದೆ ಎಂದು ಹೇಳಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಜಿ.ಲೋಹೀತ್ಕುಮಾರ್ ಮಾತನಾಡಿ, ಪುರಸಭೆಯಲ್ಲಿಹಲವು ದಿನಗಳಿಂದ ಇ-ಸ್ವತ್ತು ಪಡೆಯಲು ಸಾರ್ವಜನಿಕರು ಅಲೆದಾಡುವಂತಾಗಿತ್ತು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಪ್ರತಿ ವಾರ್ಡ್ಗಳಲ್ಲಿಇ-ಖಾತೆ ಆಂದೋಲನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಆಂದೋಲನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಗಳ ಸುರಿಮಳೆಯೇ ಹರಿದುಬಂದಿತ್ತು. ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *