ಬೆಂಗಳೂರು : ಅಭಿವೃದ್ಧಿ ಎಂದರೆ ಕೇವಲ ಅಭಿವೃದ್ಧಿಯಲ್ಲಿ ಕರ್ನಾಟಕದ ಇನ್ಯಾವುದೇ ಜಿಲ್ಲೆಗಳಲ್ಲೂ ಕಾಣದಷ್ಟು ಬೃಹತ್ ಮಟ್ಟದ ಅಭಿವೃದ್ಧಿ ಬೆಂಗಳೂರಿನಲ್ಲಿ ಆಗುತ್ತಿದೆ. ಆದರೆ, ಈ ಅಭಿವೃದ್ಧಿ ಕಾರ್ಯಗಳಿಂದಾಗಿ ಬೆಂಗಳೂರಿನಲ್ಲಿ ಮೇಲೆ ವಿಪರೀತವಾದ ಒತ್ತಡವು ನಿರ್ಮಾಣವಾಗುತ್ತಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್, ನೀರಿನ ಸಮಸ್ಯೆ ಹಾಗೂ ಮೂಲಸೌಕರ್ಯದ ಸಮಸ್ಯೆ ಮಿತಿ ಮೀರಿದೆ. ಹೀಗಾಗಿ, ಜನ ನಿಧಾನವಾಗಿ ಬೆಂಗಳೂರನ್ನು ಬಿಟ್ಟು ಬೇರೆಯ ಕಡೆ ವಲಸೆ ಹೋಗುತ್ತಿದ್ದಾರೆ. ಅಂದರೆ ರಾಜ್ಯದ ಮತ್ತೊಂದು ಜಿಲ್ಲೆಗೆ ವಲಸೆ ಶುರು ಮಾಡಿಕೊಂಡಿದ್ದಾರೆ. ನೆಮ್ಮದಿಯ ಜೀವನ ನಡೆಸುವುದಕ್ಕೆ ಹಾಗೂ ಭವಿಷ್ಯದ ದೃಷ್ಟಿಯಿಂದ ನೆರೆಯ ಜಿಲ್ಲೆಯಲ್ಲಿ ಜಾಗ ಖರೀದಿ ಶುರು ಮಾಡಿಕೊಂಡಿದ್ದು. ಇದರಿಂದ ಇಲ್ಲಿ ರಿಯಲ್ ಎಸ್ಟೇಟ್ಗೆ ಬೂಸ್ಟ್ ಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಿತಿ ಮೀರಿದ ಜನಸಂಖ್ಯೆ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಜೀವನ ನಡೆಸುವುದರ ವೆಚ್ಚ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಜೀವನ ನಡೆಸುವುದಕ್ಕೆ ಬೆಂಗಳೂರಿನಲ್ಲಿ ಇನ್ನಷ್ಟು ವೆಚ್ಚ ಹೆಚ್ಚಾಗಲಿದೆ. ಅಲ್ಲದೆ ಇನ್ನಷ್ಟು ಸಮಸ್ಯೆಗಳು ಸಹ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೀಗಾಗಿ, ಜನ ಇದೀಗ ಬೆಂಗಳೂರು ಬಿಟ್ಟು ಮೈಸೂರಿನಲ್ಲಿ ಜಾಗ, ಮನೆ ಖರೀದಿ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.
ಬೆಂಗಳೂರಿನ ನಂತರ ಹಲವು ಕಾರಣಗಳಿಗೆ ಮೈಸೂರು ಆಕರ್ಷಣೆಯ ಕೇಂದ್ರವಾಗಿದೆ. ಇಲ್ಲಿರುವ ವಿಶಾಲವಾದ ರಸ್ತೆಗಳು, ಟ್ರಾಫಿಕ್ ಜಾಮ್ ಸಮಸ್ಯೆ ಇಲ್ಲದೆ ಇರುವುದು ಹಾಗೂ ನೀರು ಮತ್ತು ಮೂಲಸೌಕರ್ಯ ಉತ್ತಮವಾಗಿರುವುದು ಸೇರಿದಂತೆ ಹಲವು ಕಾರಣಕ್ಕೆ ಇಲ್ಲಿನ ರಿಯಲ್ ಎಸ್ಟೇಟ್ಗೆ ಬಂಪರ್ ಬಂದಿದೆ ಎಂದೇ ಹೇಳಬಹುದು.
ಹೂಡಿಕೆ ಹೆಚ್ಚಳ: ಅರಮನೆ ನಗರಿ ಖ್ಯಾತಿಯ ಮೈಸೂರಿನಲ್ಲಿ ಹಲವು ವಿಷಯಗಳು ಜನರನ್ನು ಸೆಳೆಯುತ್ತಿದೆ. ಮುಖ್ಯವಾಗಿ ಈ ಭಾಗದಲ್ಲಿ ಸ್ವಚ್ಛತೆ, ಮೂಲಸೌಕರ್ಯ ಹಾಗೂ ಜನಜಂಗುಳಿ ಕಡಿಮೆ ಇರುವುದು ಜನರನ್ನು ಆಕರ್ಷಿಸುತ್ತಿದೆ. ಈ ಭಾಗದಲ್ಲಿ ಶೈಕ್ಷಣಿಕವಾಗಿಯೂ ಉತ್ತಮವಾಗಿದೆ. ಹೀಗಾಗಿ, ಈ ಜಿಲ್ಲೆಯಲ್ಲಿ ಹೂಡಿಕೆ ಮಾಡುವವರ ಸಂಖ್ಯೆ ಹೆಚ್ಚಳವಾಗುತ್ತಿದೆ.
ಮೈಸೂರಿನಲ್ಲಿ ಜನ ಭೂಮಿ, ಮನೆ, ಕ್ಲಬ್ಹೌಸ್ಗಳು ಹಾಗೂ ಹೋಟೆಲ್ ಸೇರಿದಂತೆ ವಿವಿಧ ಆಸ್ತಿಗಳ ಮೇಲೆ ಹೂಡಿಕೆ ಮಾಡುವುದು ಹೆಚ್ಚಳವಾಗಿದೆ. ಬೆಂಗಳೂರಿನ ನಂತರ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದು ಖಚಿತ ಎಂದೇ ಹೇಳಲಾಗುತ್ತಿದ್ದು. ಭವಿಷ್ಯದ ದೃಷ್ಟಿಯಿಂದ ಜನ ಇಲ್ಲಿ ಹೂಡಿಕೆ ಮಾಡುವುದು ಹೆಚ್ಚಳವಾಗಿದೆ.
ಇನ್ನು ಬೆಂಗಳೂರು ಹಾಗೂ ಮೈಸೂರಿನ ನಡುವೆ ಬಿಡದಿ ಸಂಪರ್ಕಕೊಂಡಿಯಾಗಿದೆ. ಬಿಡದಿ ಇಲ್ಲವೇ ಕನಕಪುರ ರಸ್ತೆಯಲ್ಲಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣವಾಗಲಿದೆ ಎನ್ನುವ ಬಗ್ಗೆ ಚರ್ಚೆಗಳು ನಡೆದಿದ್ದು. ಇದೂ ಸಹ ರಿಯಲ್ ಎಸ್ಟೇಟ್ ಧಮಾಕಗೆ ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಎಕರೆ ಬೆಲೆ 10ರಿಂದ 15 ಲಕ್ಷ ರೂಪಾಯಿ ಇತ್ತು. ಇದೀಗ ವಿವಿಧ ಭಾಗದಲ್ಲಿ ಭೂಮಿಯ ಬೆಲೆಯು 25ರಿಂದ 40 ಲಕ್ಷ ತಲುಪಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ತಜ್ಞರು.