ಬೆಂಗಳೂರು || ಈ ಬಾರಿಯ ಬೇಸಿಗೆಯಲ್ಲಿ ಕಾದ ಕೆಂಡವಾಗಲಿದೆ ಬೆಂಗಳೂರು! ಎಷ್ಟಿರುತ್ತೆ ತಾಪಮಾನ?

ಬೆಂಗಳೂರು || ನಗರದಲ್ಲಿ ವಾಡಿಕೆಗಿಂತ ಅಧಿಕ ತಾಪಮಾನ, ಮುಂದಿನ 10 ದಿನ ಹೇಗಿರಲಿವೆ? ಮುನ್ಸೂಚನೆ

ಬೆಂಗಳೂರು: ಬೆಂಗಳೂರಿನಾದ್ಯಂತ ಒಣಹವೆಯ ಕಾವು ಏರತೊಡಗಿದೆ. ಫೆಬ್ರವರಿ ಆರಂಭದಲ್ಲೇ ಹೀಗಾದರೆ, ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆ ಇದೆ. ಅಂದರೆ ಉಷ್ಣ ಅಲೆಯ ಪ್ರಮಾಣ ನಿರಂತರವಾಗಿ ಏರಿಕೆ ಆಗುವ ಮುನ್ಸೂಚನೆ ಇದೆ. ಸದ್ಯ ನಗರಾದ್ಯಂತ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಹವಾಮಾನ ಇಲಾಖೆ ಬೆಂಗಳೂರಿಗೆ ಬಿಸಿಗಾಳಿಯ ಎಚ್ಚರಿಕೆ ಕೊಟ್ಟಿದೆ.

ಬೆಂಗಳೂರಿನಲ್ಲಿ ಬೆಳಗ್ಗೆ ಮಂಜಿನ ವಾತಾವರಣ ಅಲ್ಲಲ್ಲಿ ಮುಂದುವರೆದಿದ್ದು, ಸ್ವಚ್ಚ ನೀಲಿ ಆಕಾಶ ಕಂಡು ಬರುತ್ತಿದೆ. ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ, ನಗರದಲ್ಲಿ ಸದ್ಯ 16 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ಹಾಗೂ 33-34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ಕಂಡು ಬರುತ್ತಿದೆ.

ಈಗಲೂ ನಗರದ ಕೆಲವು ಕಡೆಗಳಲ್ಲಿ ಸಂಜೆ ಇಲ್ಲವೇ ರಾತ್ರಿ ತಂಪು ಗಾಳಿ ದಾಖಲಾಗುತ್ತಿದೆ. ಫೆಬ್ರವರಿ ಅಂತ್ಯವಾಗುತ್ತಿದ್ದಂತೆ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಗರದ ಹವಾಮಾನ ಸ್ಥಿತಿ ತೀವ್ರ ಸ್ವರೂಪದಲ್ಲಿ ಬದಲಾಗಲಿದೆ. ಕ್ರಮೇಣ ತಾಪಮಾನ ಹೆಚ್ಚಾಗುವುದರ ಜೊತೆಗೆ ರಾತ್ರಿಯಿಡೀ ಸೆಕೆಯ ವಾತಾವರಣ ನಿರ್ಮಾಣವಾಗಲಿದೆ.

ಕಾದ ಕೆಂಡವಾಗಲಿದೆ ಬೆಂಗಳೂರು! ಹವಾಮಾನ ತಜ್ಞರು ಅಂದಾಜಿಸಿರುವ ಸದ್ಯದ ಮುನ್ಸೂಚನೆ ಪ್ರಕಾರ ನೋಡುವುದಾದರೆ, ಮುಂದಿನ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ನಗರದ ತಾಪಮಾನ ಅತ್ಯಧಿಕ ಮಟ್ಟ ತಲುಪಲಿದೆ. ಅಂದರೆ ಬೆಂಗಳೂರು ಕಾದ ಕೆಂಡವಾಗಲಿದೆ. ನಗರದಲ್ಲಿ ಆ ವೇಳೆ 39 ಡಿಗ್ರಿ ಸೆಲ್ಸಿಯಸ್ ಆಸುಪಾಸು ಉಷ್ಣಾಂಶ ನಿತ್ಯವು ದಾಖಲಾಗುವ ಸಂಭವವಿದೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಮಾತ್ರವಲ್ಲದೇ, ಕರ್ನಾಟಕದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಅಷ್ಟೇ ಅಲ್ಲದೇ ಸದಾ ತಂಪು ಹಾಗೂ ಹಸಿರಿನಿಂದ ಕಂಗೊಳಿಸುವ ಮಲೆನಾಡಿನ ಜಿಲ್ಲೆಗಳಲ್ಲೂ ಅಧಿಕ ತಾಪ ಆವರಿಸುತ್ತಿದೆ. ಒಟ್ಟಾರೆ ಬಾರಿಯ ಬೇಸಿಗೆ ಬೆಂಗಳೂರು ಹಾಗೂ ಕರ್ನಾಟಕ ಜನರನ್ನು ಇನ್ನಿಲ್ಲದಂತೆ ಕಾಡಲಿದೆ. ಜನರು ಫೆಬ್ರವರಿ ಆರಂಭದ ಬಿಸಿಲು ತಾಳಲಾರದೇ ಎಳನೀರು, ಐಸ್ಕ್ರೀ, ಕೋಲ್ಡ್ಡ್ರಿಂಕ್ಸ್ ನಂತಹ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಕೆಲವರಂತೆ ಮಧ್ಯಾಹ್ನ ಆದರೆ ಸಾಕು ಮನೆಯಿಂದ ಹೊರ ಬರಲು ಭಯಪಡುತ್ತಿದ್ದಾರೆ. ಆರೋಗ್ಯ ಬಗ್ಗೆ ಕಾಳಹಿ ವಹಿಸುತ್ತಿದ್ದಾರೆ. ಎಲ್ಲರಿಗೂ ಮುಂದಿನ ಬೇಸಿಗೆಯ ದಿನಗಳು ಹೇಗಿರುತ್ತೆ ಎಂಬುದೆ ಚಿಂತೆ ಆಗಿದೆ. ಸದ್ಯ ಜನರು ಆರೋಗ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ವೈದ್ಯರು ಸಹ ಹೆಚ್ಚು ನೀರು ಕುಡಿಯುವುದು, ದೇಹ ತಂಪಾಗಿರುವ ಕಡೆ ಗಮನ ಹರಿಸುವಂತೆ ತಿಳಿಸಿದ್ದಾರೆ. ಆದಷ್ಟು ಹೊರಾಂಗಣ ಕಾರ್ಯಕ್ರಮಕ್ಕೆ ಸ್ವಲ್ಪ ದಿನ ಬ್ರೇಕ್ ಹಾಕುವಂತೆಯು ಜನರಿಗೆ ಸಲಹೆ ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *