ಬೆಂಗಳೂರು ವಿವಿಯಲ್ಲಿ ಉದ್ಯೋಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ವಿವಿಯಲ್ಲಿ ಉದ್ಯೋಗ: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರಸಕ್ತ ಸಾಲಿನ ಒಂದು ವರ್ಷದ ಅವಧಿಗೆ ಲೈಬ್ರರಿ ಅಪ್ರೆಂಟಿಸ್ ತರಬೇತುದಾರರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

•ಹುದ್ದೆಗಳು: 3

•          ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ಪದವಿ ಅಥವಾ ಕರ್ನಾಟಕ ಸರ್ಕಾರ ತಾಂತ್ರಿಕ ನಿರ್ದೇಶನಾಲಯದ ಅಡಿಯಲ್ಲಿ ಡಿಪ್ಲೊಮಾ ಇನ್ ಲೈಬ್ರರಿ ಸೈನ್ಸ್ (ದ್ವಿತೀಯ ಪಿಯುಸಿ ನಂತರದ ಎರಡು ವರ್ಷದ ಕೋರ್ಸ್)ನಲ್ಲಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

•          ಸೂಚನೆ: 2024-25ನೇ ಸಾಲಿನಲ್ಲಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಕೂಡಾ ಅರ್ಜಿ ಸಲ್ಲಿಸಬಹುದು. ಈಗಾಗಲೇ 2023-24ನೇ ಸಾಲಿನಲ್ಲಿ ಅಪ್ರೆಂಟಿಸ್ಗಳಾಗಿ ತರಬೇತಿ ಪಡೆದಿರುವ ಹಾಗೂ ಅದರ ಹಿಂದಿನ ವರ್ಷಗಳಲ್ಲಿ ತರಬೇತಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

•          ವೇತನ: 17,000 ರೂಪಾಯಿ ಮಾಸಿಕ ಶಿಷ್ಯವೇತನ.

•          ಅರ್ಜಿ ಸಲ್ಲಿಕೆ: ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವಿಶ್ವವಿದ್ಯಾಲಯದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ಭರ್ತಿ ಮಾಡಿ, ಸ್ವಯಂ ದೃಢೀಕರಿಸಿ ಈ ವಿಳಾಸಕ್ಕೆ ಸಲ್ಲಿಸಬೇಕು.

•          ವಿಳಾಸ: ಕುಲಸಚಿವರು, ಬೆಂಗಳೂರು ನಗರ ವಿಶ್ವವಿದ್ಯಾನಿಲಯ, ಜ್ಞಾನಜ್ಯೋತಿ ಸೆಂಟ್ರಲ್ ಕಾಲೇಜು ಆವರಣ, ಬೆಂಗಳೂರು- 560 001

•          ಈ ಹುದ್ದೆಗೆ ಸಂದರ್ಶನದ ಮೂಲಕ ಅಭ್ಯರ್ಥಿಗಳ ನೇಮಕಾತಿ ನಡೆಸಲಾಗುವುದು. ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ನವೆಂಬರ್ 26. ಹೆಚ್ಚಿನ ಮಾಹಿತಿಗೆ www.bcu.ac.in ಭೇಟಿ ನೀಡಿ.

Leave a Reply

Your email address will not be published. Required fields are marked *