ಬೆಂಗಳೂರು || ಬೆಂಗ್ಳೂರಿಂದ ಕುಂಭಮೇಳಕ್ಕೆ ಹೋಗ್ಬೇಕಾ? – ನಿಮಗಾಗಿಯೇ ಹೊರಡಲಿದೆ ವಿಶೇಷ ರೈಲು

ಬೆಂಗಳೂರು || ಬೆಂಗ್ಳೂರಿಂದ ಕುಂಭಮೇಳಕ್ಕೆ ಹೋಗ್ಬೇಕಾ? – ನಿಮಗಾಗಿಯೇ ಹೊರಡಲಿದೆ ವಿಶೇಷ ರೈಲು

ಬೆಂಗಳೂರು: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ (Prayagraj) ಜ.13ರಿಂದ ನಡೆಯಲಿರುವ ಮಹಾ ಕುಂಭಮೇಳಕ್ಕೆ (Maha Kumbh Mela) ಹೋಗುವ ಪ್ರಯಾಣಿಕರಿಗಾಗಿ ಬೆಂಗಳೂರಿನಿಂದ ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಪ್ರಯಾಗ್‌ರಾಜ್‌ಗೆ ಏಕಮಾರ್ಗ ಕುಂಭಮೇಳ ಎಕ್ಸ್‌ಪ್ರೆಸ್‌ (Kumbh Mela Express Train) ವಿಶೇಷ ರೈಲು ಓಡಾಟ ನಡೆಸಲಿದೆ. ಎಸ್‌ಎಂವಿಟಿ ಬೆಂಗಳೂರು ಟು ಪ್ರಯಾಗ್‌ರಾಜ್ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲು ಸಂಖ್ಯೆ 06577 ಎಸ್‌ಎಂವಿಟಿ ಬೆಂಗಳೂರು-ಪ್ರಯಾಗ್‌ರಾಜ್ ಏಕಮಾರ್ಗ ಕುಂಭಮೇಳ ವಿಶೇಷ ಎಕ್ಸ್‌ಪ್ರೆಸ್‌ ಬುಧವಾರ ರಾತ್ರಿ 8:50ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಜ.10 ಶುಕ್ರವಾರ ಸಂಜೆ 5:15ಕ್ಕೆ ಪ್ರಯಾಗ್‌ರಾಜ್ ತಲುಪಲಿದೆ.

ಈ ರೈಲು ವೈಟ್‌ಫೀಲ್ಡ್, ಬಂಗಾರಪೇಟೆ, ಜೋಲಾರ್ ಪೆಟ್, ಕಟಪಾಡಿ, ಪೆರಂಬೂರು, ಗುಡೂರು, ವಿಜಯವಾಡ, ವಾರಂಗಲ್, ಬಲ್ಹರ್ಷಾ, ಚಂದ್ರಾಪುರ, ಸೇವಾಗ್ರಾಮ್, ನಾಗ್ಪುರ, ಇಟಾರ್ಸಿ, ಜಬಲ್ಪುರ್, ಸತ್ನಾ ಮತ್ತು ಮಾಣಿಕ್ಪುರ ನಿಲ್ದಾಣಗಳಲ್ಲಿ ನಿಲ್ಲಲಿದೆ.

ಈ ರೈಲು 14 ಜನರಲ್ ಸೆಕೆಂಡ್ ಕ್ಲಾಸ್ ಬೋಗಿಗಳು, 4 ಸ್ಲೀಪರ್ ಬೋಗಿಗಳು ಮತ್ತು 2 ಲಗೇಜ್ ಕಂ ಬ್ರೇಕ್ ವ್ಯಾನ್‌ಗಳು ಸೇರಿ 20 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ

Leave a Reply

Your email address will not be published. Required fields are marked *