ಬೆಂಗಳೂರು : ಬಿಜೆಪಿಯಿಂದ ಉಚ್ಚಾಟಿತವಾಗಿರುವ ಯತ್ನಾಳ್ ಹೊಸ ಪಕ್ಷದ ಬಗ್ಗೆ ಸಾಕಷ್ಟು ಚರ್ಚೆ ಬೆನ್ನಲ್ಲೆ, ಕುಮಾರ್ ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಬಿಜೆಪಿ ವರಿಷ್ಠರು ಯತ್ನಾಳ್‌ರನ್ನು ಉಚ್ಚಾಟಿಸಿದ್ದಾರೆ ಮತ್ತು ನಾವು ಪಕ್ಷದ ನಿರ್ದಾರಕ್ಕೆ ನಾವು ಬದ್ದರಾಗಿರುತ್ತೆವೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.

ಪ್ರಮುಖ ಭಿನ್ನಮತೀಯ ಮತ್ತು ರೆಬೆಲ್ ಶಾಸಕನೆಂದು ಗುರುತಿಸಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸಿದರೂ ಅವರ ಜೊತೆಗಿದ್ದ ಭಿನ್ನಮತೀಯರು ಪ್ರತ್ಯೇಕವಾಗಿ ಸಭೆ ನಡೆಸುವುದನ್ನು ಮುಂದುವರಿಸಿದ್ದಾರೆ, ತಮ್ಮ ಮನೆಯಲ್ಲಿಂದು ಪತ್ರಿಕಾ ಗೋಷ್ಠಿ ನಡೆಸಿ ಮಾತಾಡಿದ ಕುಮಾರ ಬಂಗಾರಪ್ಪ, ವಕ್ಫ್ ಹೋರಾಟದಲ್ಲಿ
ಯತ್ನಾಳ್ ಪ್ರಮುಖ ಪಾತ್ರ ವಹಿಸಿದ್ದು ನಿಜ, ಆದರೆ ಅವರನ್ನು ಈಗ ಪಕ್ಷದಿಂದ ವರಿಷ್ಠರು ಉಚ್ಚಾಟಿಸಿದ್ದಾರೆ, ವರಿಷ್ಠರ ನಿರ್ಣಯಕ್ಕೆ ತಾವು ಬದ್ಧರಾಗಿರುತ್ತೇವೆ ಮತ್ತು ಅವರ ನಿರ್ಣಯವನ್ನು ಮುಂದುವರಿಸಿಕೊAಡು ಹೋಗುತ್ತಿದ್ದೇವೆ ಎಂದು ಹೇಳಿದರು.