ರಾಜ್ಯದಲ್ಲಿ ಮುಂಚೂಣಿ ನಾಯಕರನ್ನು ಬೆಳೆಸಿದ  ಬಾವುರಾವ್ ದೇಶಪಾಂಡೆ: C.T. Ravi

ರಾಜ್ಯದಲ್ಲಿ ಮುಂಚೂಣಿ ನಾಯಕರನ್ನು ಬೆಳೆಸಿದ ಬಾವುರಾವ್ ದೇಶಪಾಂಡೆ: C.T. Ravi

ಬೆಂಗಳೂರು: ಬಾವುರಾವ್ ದೇಶಪಾಂಡೆ ಅವರು ಕ್ರಾಂತಿಕಾರಿ ಹೋರಾಟದಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ತಿಳಿಸಿದರು.

ಬಾವುರಾವ್ ದೇಶಪಾಂಡೆ ಅವರ ಪುಣ್ಯತಿಥಿಯ ಅಂಗವಾಗಿ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪುಪರ್ಚನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಳಿಕ ದೇಶಪಾಂಡೆ ಅವರು ರಾಷ್ಟ್ರೀಯ ವಿಚಾರಧಾರೆಯ ಸಂಘಟನೆ, ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪ್ರಚಾರಕರಾಗಿ ಕೆಲಸ ಮಾಡಿದ್ದರು. ಭಾರತೀಯ ಜನಸಂಘದ ಕರ್ನಾಟಕ ರಾಜ್ಯದ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು ಎಂದು ವಿವರಿಸಿದರು.

ಆಗ ಅಧ್ಯಕ್ಷೀಯ ವ್ಯವಸ್ಥೆ ಇರಲಿಲ್ಲ. ಸಂಘಟನಾ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲೇ ಸಂಘಟನೆ ನಡೆಯುತ್ತಿದ್ದ ಕಾಲಘಟ್ಟವದು. ಕೇಡರ್ ಆಧಾರಿತ ಸಂಘಟನೆಯಾಗಿ ಕಟ್ಟುವುದರಲ್ಲಿ ದೇಶಪಾಂಡೆ ಮತ್ತು ಜಗನ್ನಾಥ ರಾವ್ ಜೋಶಿ ಅವರ ಬಹಳ ದೊಡ್ಡ ಯೋಗದಾನ ಕರ್ನಾಟಕದಲ್ಲಿ ಇದೆ ಎಂದು ಹೇಳಿದರು. ಇಂಥ ಕಾರ್ಯಕರ್ತರು ಮುಂದೆ ನಾಯಕರಾಗಿ ಬೆಳೆದರು ಎಂದು ವಿಶ್ಲೇಷಿಸಿದರು.

ಕರಂಬಳ್ಳಿ ಸಂಜೀವ ಶೆಟ್ಟಿ, ಎಸ್.ಮಲ್ಲಿಕಾರ್ಜುನಯ್ಯ, ಯಡಿಯೂರಪ್ಪ, ಡಾ.ವಿ.ಎಸ್.ಆಚಾರ್ಯ- ಹೀಗೆ ಹಲವು ಜನ ಸಾಮಾನ್ಯ ಕಾರ್ಯಕರ್ತರನ್ನು ಮುಂಚೂಣಿ ನಾಯಕರಾಗಿ ಬೆಳೆಸಿದವರು ಬಾವುರಾವ್ ದೇಶಪಾಂಡೆ ಅವರು ಎಂದು ವಿವರಿಸಿದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ರಾಜ್ಯ ಖಜಾಂಚಿ ಸುಬ್ಬ ನರಸಿಂಹ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್. ದತ್ತಾತ್ರೀ, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೆಕಲ್ಲು, ರಾಜ್ಯ ಮಾಧ್ಯಮ ಸಹ-ಸಂಚಾಲಕ ಪ್ರಶಾಂತ್ ಕೆಡಂಜಿ ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *