ಚಳಿಗಾಲದಲ್ಲಿ ಮೊಡವೆ ಬರದಂತೆ ವಹಿಸಿ ಎಚ್ಚರ…!

ಚಳಿಗಾಲದಲ್ಲಿ ಮೊಡವೆ ಬರದಂತೆ ವಹಿಸಿ ಎಚ್ಚರ...!

ಚಳಿಗಾಲದಲ್ಲಿ ಕೆಲವರಿಗೆ ಅತಿ ಹೆಚ್ಚು ಮೊಡವೆಗಳು ಮೂಡುತ್ತವೆ. ಇದಕ್ಕೆ ಮುಖ್ಯವಾದ ಕಾರಣಗಳೆಂದರೆ ರೋಗನಿರೋಧಕ ಶಕ್ತಿ ಕಡಿಮೆಯಾಗಿರುವುದು. ಇದರ ಪರಿಹಾರಕ್ಕೆ ಹೀಗೆ ಮಾಡಿ.

ಬಿಸಿಲಿಗೆ ಹೆಚ್ಚು ನಿಮ್ಮನ್ನು ಒಗ್ಗಿಕೊಳ್ಳಬೇಡಿ. ಹೊರಹೋಗುವಾಗ ಸನ್ ಸ್ಕ್ರೀನ್ ಲೋಷನ್ ಬಳಸಿ.

ಸ್ನಾನ ಮಾಡಿದ ತಕ್ಷಣ ಎಣ್ಣೆ ರಹಿತ ಮಾಯಿಸ್ಚರೈಸರ್ ಬಳಸಿ. ಇದು ತ್ವಚೆಯಲ್ಲಿ ತೇವಾಂಶ ಉಳಿಯುವಂತೆ ನೋಡಿಕೊಳ್ಳುತ್ತದೆ.

ಚಳಿಗಾಲದಲ್ಲಿ ಹೆಚ್ಚು ಸ್ಕ್ರಬ್ ಬಳಸುವುದರಿಂದ ನಿಮ್ಮ ತ್ವಚೆ ಮತ್ತಷ್ಟು ಶುಷ್ಕವಾಗುತ್ತದೆ. ಆಲ್ಕೋಹಾಲ್ ಆಧಾರಿತ ಟೋನರ್ ಗಳಿಂದ ದೂರವಿರಿ. ಸ್ಕಿನ್ ಕ್ಲೆನ್ಸರ್ ಬಳಸಿ. ಪದೇ ಪದೇ ಸೋಪು ಬಳಸದಿರಿ.

ಚಳಿಗಾಲದಲ್ಲಿ ಹೆಚ್ಚು ಬಾಯಾರಿಕೆ ಆಗುವುದಿಲ್ಲ. ಸಹಜವಾಗಿಯೇ ನೀವು ಕಡಿಮೆ ನೀರು ಕುಡಿಯುತ್ತೀರಿ. ಪರಿಣಾಮ ದೇಹದಲ್ಲಿ ನೀರಿನಂಶ ಕಡಿಮೆಯಾಗಿ ತ್ವಚೆ ಡ್ರೈ ಆಗುತ್ತದೆ. ಚರ್ಮವನ್ನು ತೇವಾಂಶಭರಿತವಾಗಿಡಲು ಪ್ರಯತ್ನಿಸಿ. ಆಲ್ಕೊಹಾಲ್ ನಿಂದ ದೂರವಿದ್ದಷ್ಟು ಒಳ್ಳೆಯದು.

Leave a Reply

Your email address will not be published. Required fields are marked *