ಬೆಳಗಾವಿ || ಎಂಇಎಸ್ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ || ಎಂಇಎಸ್ ಕಾರ್ಯಕರ್ತರಿಗೆ ಲಾಠಿ ರುಚಿ ತೋರಿಸಿದ ಬೆಳಗಾವಿ ಪೊಲೀಸರು

ಬೆಳಗಾವಿ : ನಗರದ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ವಿರೋಧಿಸಿ ಸಂಭಾಜಿ ವೃತ್ತಕ್ಕೆ ಬಂದ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖಂಡರು ಹಾಗೂ ಕಾರ್ಯಕರ್ತರನ್ನು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಂಇಎಸ್ ತನ್ನ ಮಹಾಮೇಳವನ್ನು ನಡೆಸದಂತೆ ಪೊಲೀಸರು ವ್ಯಾಪಕ ಭದ್ರತೆಯನ್ನು ಏರ್ಪಡಿಸಿದ್ದರು. ಎಂಇಎಸ್ನ ಕಾರ್ಯಾಧ್ಯಕ್ಷ ಮನೋಹರ್ ಕಿಣೇಕರ್ ಮತ್ತು ಖಜಾಂಚಿ ಪ್ರಕಾಶ ಮಾರ್ಗಲೆ ಸೇರಿದಂತೆ ಕಾರ್ಯಕರ್ತರನ್ನು ರಾಮಲಿಂಗಖಿಂಡ್ ಗಲ್ಲಿಯಲ್ಲಿರುವ ಕಚೇರಿಯಿಂದ ಬಂಧಿಸಲಾಗಿದೆ.

ನಂತರ ಮಹಾರಾಷ್ಟ್ರ ಪರ ಘೋಷಣೆಗಳನ್ನು ಕೂಗುತ್ತಾ ಗುಂಪು ಗುಂಪಾಗಿ ಆಗಮಿಸಿದ ಕಾರ್ಯಕರ್ತರನ್ನು ಸಂಭಾಜಿ ವೃತ್ತದಲ್ಲಿ ಬಂಧಿಸಲಾಯಿತು. ಕ್ಷಣಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

Leave a Reply

Your email address will not be published. Required fields are marked *