ಬಳ್ಳಾರಿ || ಅತ್ಯಾಚಾರ ಆರೋಪ: ಇಬ್ಬರು ಪೊಲೀಸರ ಅಮಾನತು

ಬಳ್ಳಾರಿ || ಅತ್ಯಾಚಾರ ಆರೋಪ: ಇಬ್ಬರು ಪೊಲೀಸರ ಅಮಾನತು

ಬಳ್ಳಾರಿ: ಕೌಟುಂಬಿಕ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಮೇಲೆ ಇಬ್ಬರು ಪೊಲೀಸರ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಾಗಿದೆ.

ಕೌಲ್ ಬಜಾರ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಸೈಯದ್ ಇಮ್ರಾನ್ ಮತ್ತು ಆತನ ಅಕ್ಕನ ಮಗನಾದ, ಬಳ್ಳಾರಿ ಸಂಚಾರ ಠಾಣೆಯ ಸಿಬ್ಬಂದಿ ಆಜಾದ್ ವಿರುದ್ಧ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಜಾದ್‌ನ ಬಂಧನವಾಗಿದ್ದು, ಇಮ್ರಾನ್ ಪರಾರಿಯಾಗಿದ್ದಾನೆ. ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.

ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆ ದೂರು ದಾಖಲಿಸಲು ಎರಡು ವರ್ಷಗಳ ಹಿಂದೆ ಕೌಲ್ ಬಜಾರ್ ಠಾಣೆಗೆ ಹೋದಾಗ, ಸೈಯದ್ ಇಮ್ರಾನ್‌ನ ಪರಿಚಯವಾಗಿತ್ತು. ಮಹಿಳೆಯನ್ನು ಪತಿ ಮನೆಯಿಂದ ಹೊರಗೆ ಹಾಕಿದಾಗ ಇಮ್ರಾನ್ ೧೫ ಸಾವಿರ ನೀಡಿ ಪ್ರತ್ಯೇಕ ಮನೆ ಮಾಡಿಕೊಳ್ಳಲು ನೆರವಾಗಿದ್ದ. ಬಳಿಕ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಆಜಾದ್‌ಗೂ ಪರಿಚಯಿಸಿದ್ದ. ಆತನೂ ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *