ಬಳ್ಳಾರಿ: ಆಸ್ಪತ್ರೆಯಲ್ಲಿ ಕುಡಿಯುವ ಉದ್ದೇಶಕ್ಕೆ ಮತ್ತು ಶೌಚಾಲಯಕ್ಕೆ ನೀರು ಪೂರೈಸುವ ಓವರ್ ಹೆಡ್ ಟ್ಯಾಂಕ್ಗಳ ಸ್ಥಿತಿ ಕಂಡು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಸ್ಪತ್ರೆ ಮೇಲಿನ ಓವರ್ ಹೆಡ್ ಟ್ಯಾಂಕ್ಗಳನ್ನು ಖುದ್ದು ವೀಕ್ಷಿಸಿದ ಅವರು, ಇದಂತೂ ವರ್ಸ್್ಟ ಇದೆ ನೋಡಿ… ಟ್ಯಾಂಕ್ಗಳನ್ನು ತೊಳೆಸುವುದಿಲ್ಲವೇ, ನೀರನ್ನು ಪರೀಕ್ಷೆಗೆ ಕಳುಹಿಸುವುದಿಲ್ಲವೇ, ಟ್ಯಾಂಕ್ ತುಂಬ ಮಣ್ಣು, ಪಾಚಿ ಇದೆ. ಮನೆಗಳ ಟ್ಯಾಂಕ್ಗಳನ್ನೇ ಆರು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತದೆ. ಆಸ್ಪತ್ರೆ ಟ್ಯಾಂಕ್ಗಳನ್ನು ನಿಯಮಿತವಾಗಿ ತೊಳೆಸುತ್ತಿರಬೇಕಲ್ಲವೇ? ಎಂದು ಪ್ರಶ್ನೆ ಮಾಡಿದರು. ಈ ಪ್ರಶ್ನೆಗಳಿಗೆ ಜಿಲ್ಲಾ ಶಸ್ತçಚಿಕಿತ್ಸಕ ಬಸರೆಡ್ಡಿ ನಿರುತ್ತರರಾಗಿ ನಿಂತಿದ್ದು ಕಂಡುಬಂತು.
ಬಳ್ಳಾರಿ ತಹಶೀಲ್ದಾರ್ಗೆ ತರಾಟೆ: ಜಿಲ್ಲಾ ಆಸ್ಪತ್ರೆ ಬಳಿಗೆ ತಡವಾಗಿ ಬಂದ ಬಳ್ಳಾರಿ ತಹಶೀಲ್ದಾರ್ ಗುರುರಾಜ್ಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ತರಾಟೆಗೆ ತೆಗೆದುಕೊಂಡರು. ಪ್ರವಾಸ ವಿವರ ಬಂದಿಲ್ಲ, ಕೋರ್ಟ್ ಇತ್ತು ಎಂದು ಸಮಜಾಯಿಸಿ ನೀಡಲು ಗುರುರಾಜ್ ಮುಂದಾದರು. ಜಿಲ್ಲಾಧಿಕಾರಿಗೆ ಪ್ರವಾಸ ವಿವರ ಬಂದಿದೆ. ಅವರೇ ಮೊದಲು ಬಂದಿದ್ದಾರೆ. ೬೦ ಕಿ.ಮೀಗಳಿಂದ ಜನ ಬಂದಿದ್ದಾರೆ. ಪ್ರವಾಸ ವಿವರ ಬಂದಿಲ್ಲ ಎಂದು ಜಿಲ್ಲಾಧಿಕಾರಿ ಎದುರಲ್ಲೇ ಹೇಳುತ್ತಿರಲ್ರೀ? ಎಂದು ಪ್ರಶ್ನೆ ಮಾಡಿದರು. ಸೂಕ್ತ ಉತ್ತರ ನೀಡಲಾಗದೇ ತಹಶೀಲ್ದಾರ್ ಗುರುರಾಜ್ ಪೆಚ್ಚಾಗಿ ನಿಂತರು.