ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP ekhata) ವ್ಯಾಪ್ತಿಯಲ್ಲಿ ಲಕ್ಷಾಂತರ ಕರಡು ಇ-ಖಾತಾಗಳು ಇವೆ. ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಸ್ತಿ ಮಾಲೀಕರಿಗೆ ವಿತರಣೆ ಮಾಡಲು ಬಿಬಿಎಂಪಿ ಅರ್ಜಿಗಳನ್ನು ಆಹ್ವಾನಿಸಿತ್ತು. ಅದರಂತೆ ಅನೇಕ ಅರ್ಜಿಗಳು ಸಲ್ಲಿಕೆಯಾಗಿವೆ. ಸದ್ಯದವರೆಗೆ ನಗರದ ವ್ಯಾಪ್ತಿಯಲ್ಲಿ ಬರೋಬ್ಬರಿ 2.71 ಲಕ್ಷ ಅಂತಿಮ ಇ-ಖಾತಾಗಳನ್ನು ನಾಗರಿಕಗೆ ನೀಡಲಾಗಿದೆ.

ಹೌದು ಖಾತಾ ವಿತರಣೆಲ್ಲಿ ಕ್ರಮೇಣ ಪ್ರಗತಿ ಸಾಧಿಸಲಾಗುತ್ತದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಮುಖ್ಯ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಗುರುವಾರ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 25 ಲಕ್ಷ ಕರಡು ಇ-ಖಾತಗಳು ಆನ್ ಲೈನ್ನಲ್ಲಿ ಲಭ್ಯ ಇವೆ. ಅವುಗಳನ್ನು ಪಡೆಯಲು ಆಸ್ತಿ ಮಾಲೀಕರಿಂದ ಒಟ್ಟು 2.87 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ ಎಂದು ವಿವರಿಸಿದರು.
ಒಟ್ಟು ಎಂಟು ವಲಯಗಳಲ್ಲಿ 2,71,927 ಅಂತಿಮ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ. ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿದ 2 ದಿನಗಳಲ್ಲೇ ಫೈನಲ್ ಇ-ಖಾತ ವಿತರಣೆಗೆ ಕ್ರಮ ವಹಿಸಲಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು https://BBMPeAasthi.karnataka.gov.in ಅಧಿಕೃತ ಜಾಲತಾಣ ಮೂಲಕ ಆನ್ಲೈನ್ನಲ್ಲಿ ಅರ್ಜಿ ಹಾಕಬೇಕು. ಒಂದು ವೇಳೆ ನಿಗದಿತ ದಿನಗಳಲ್ಲಿ ಅರ್ಜಿ ಸಿಗದಿದ್ದರೆ, ತಡವಾಗಬಹುದು. ಕಚೇರಿ ಬಾರದೇ ಜನರು ತಾಳ್ಮೆಯಿಂದ ಕಾಯವಂತೆ ಅವರು ಮನಿವಿ ಮಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು 08 ವಲಯಗಳ ಪೈಕಿ ಬೊಮ್ಮನಹಳ್ಳಿ ವಲಯದಲ್ಲಿ ಅತ್ಯಧಿಕ ಇ-ಖಾತಾಗಳು ಅಂದರೆ 46,025 ಅಂತಿಮ ಇ-ಖಾತಾಗಳನ್ನು ವಿತರಣೆ ಮಾಡಲಾಗಿದೆ. ಅದರೆ ನಂತರದ ಸ್ಥಾನದಲ್ಲಿ ರಾಜರಾಜೇಶ್ವರಿ ನಗರ ವಲಯದಲ್ಲಿ 42191 ಇ-ಖಾತಾಗಳು, ಯಲಹಂಕ ವಲಯದಲ್ಲಿ 38,494, ಮಹದೇವಪುರ ವಲಯದಲ್ಲಿ 37,793 ಇ-ಖಾತಾಗಳು ವಿತರಣೆ ಆಗಿವೆ.
ಬೆಂಗಳೂರು ದಕ್ಷಿಣ ವಲಯ 37,738, ಬೆಂಗಳೂರು ಪೂರ್ವ ವಲಯದಲ್ಲಿ 25,848 ಮತ್ತು ದಾಸರಹಳ್ಳಿ ವಲಯದಲ್ಲಿ ಕೇವಲ 16,818 ಅಂತಿಮ ಇ-ಖಾತಾಗಳುನ್ನು ಪಾಲಿಕೆ ವಿತರಣೆ ಮಾಡಿದ್ದ ಸೇರಿ ಒಟ್ಟು 2,71,927 ಲಕ್ಷ ಅಂತಿಮ ಡಿಜಿಟಲ್ ಖಾತಾಗಳು ನಾಗರಿಕರ ಕೈ ಸೇರಿವೆ ಎಂದು ಮೌನೀಶ್ ಮೌದ್ಗಿಲ್ ಅವರು ತಿಳಿಸಿದರು.
ವಲಯವಾರು ಅಂತಿಮ ಇ-ಖಾತಾ ವಿತರಣೆ ಪಟ್ಟಿ 1. ಬೊಮ್ಮನಹಳ್ಳಿ : 46,025 2. ರಾಜರಾಜೇಶ್ವರಿ ನಗರ : 42,191 3. ದಾಸರಹಳ್ಳಿ : 16,818 4. ಮಹದೇವಪುರ : 37,793 5. ಪಶ್ಚಿಮ ವಲಯ : 27,020 6. ಪೂರ್ವ ವಲಯ : 25,848 7. ದಕ್ಷಿಣ ವಲಯ: 37,738, 8. ಯಲಹಂಕ : 38,494 * ಒಟ್ಟು ಇ-ಖಾತಾ ವಿತರಣೆ: 2,71,927