ಬೆಂಗಳೂರು : ಕೆಎಎಸ್ ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಪಾಸ್ ಮಾಡಿಸೋದಾಗಿ ಸ್ಪರ್ಧಾಕಾಂಕ್ಷಿಗಳಿಂದ ಹಣ ಪಡೆದು ವಂಚಿಸುತ್ತಿದ್ದ ಆರೋಪಿಯನ್ನು ಇದೀಗ ವಿಜಯನಗರ ಎಸಿಪಿ ಚಂದನ್ ಕುಮಾರ್ ಅಂಡ್ ಟೀಂ ಬಂಧಿಸಿದೆ.
ಬಂದಿತನನ್ನು ಗೋವಿಂದರಾಜು ಎಂದು ಗುರುತಿಸಲಾಗಿದೆ. ಕೆಎಎಸ್, ಪಿಡಿಒ, ಪಿಎಸ್ ಐ , ಎಫ್ ಡಿಎ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಮಾಡಿಸೋದಾಗಿ ಲಕ್ಷಾಂತರ ಹಣ ಪಡೆದು ವಂಚಿಸಿದ್ದರು ಎನ್ನಲಾಗಿದೆ.
ಗೊತ್ತಿರೋದನ್ನ ಬರೆದು ಉಳಿಕೆ ಖಾಲಿ ಬಿಟ್ಟು ಬರುವಂತೆ ಆರೋಪಿ ಸೂಚನೆ ಮಾಡುತ್ತಿದ್ದ. ಆರೋಪಿ ಮಾತು ನಂಬಿ ಲಕ್ಷಾಂತರ ರೂ ಹಣ ನೀಡಿ ಖಾಲಿ ಬಿಟ್ಟು ಸ್ಪರ್ಧಾಕಾಂಕ್ಷಿಗಳು ಬರುತ್ತಿದ್ದರು ಎನ್ನಲಾಗಿದೆ. ಆರೋಪಿ ಗೋವಿಂದರಾಜು ರೈಲ್ವೆ ಉದ್ಯೋಗಿಯಾಗಿರೋದು ಬೆಳಕಿಗೆ ಬಂದಿದೆ. ಈ ಹಿಂದೆ 2019 ರಲ್ಲಿ ಸಿಸಿಬಿ ಪೊಲೀಸರು ಗೋವಿಂದರಾಜು ಮೇಲೆ ಕೇಸ್ ದಾಖಲು ಮಾಡಿದ್ದರು.