ಬೆಂಗಳೂರು: ನಟಿ ಸಂಜನಾ ಗಾನಿ ಅವರಿಗೆ ಹಣ ವಂಚಿಸಿದ ಪ್ರಕರಣದ ಅಪರಾಧಿ ರಾಹುಲ್ ತೋನ್ಸೆಗೆ ₹61.50 ಲಕ್ಷ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ 33ನೇ ಎಸಿಜೆಎಂ ನ್ಯಾಯಾಲಯ ಆದೇಶಿಸಿದೆ.

ಶೀಲಾ ಹಾಲ್ಕುರಿಕೆ ಸಾಮಾಜಿಕ ಕಾರ್ಯಕರ್ತೆ & ರಂಗಭೂಮಿ ನಟಿ
ಬನಶಂಕರಿ 3ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ 2018-19ರಲ್ಲಿ ಸಂಜನಾ ಗಾನಿ ಅವರಿಂದ ದ ₹45 ಲಕ್ಷ ಪಡೆದು ವಂಚಿಸಿದ್ದ ಆರೋಪವಿತ್ತು.
ದಂಡದ ಮೊತ್ತದಲ್ಲಿ ₹10 ಸಾವಿರ ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ ₹61.40 ಲಕ್ಷವನ್ನು ದೂರುದಾರೆ ಸಂಜನಾಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ, 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.
ಸಂಜನಾಗೆ ಸ್ನೇಹಿತನಾಗಿದ್ದ ರಾಹುಲ್ ತೋನ್ಸೆ, ‘ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ. ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಸಿಗಲಿದೆ’ ಎಂದು ಆಮಿಷವೊಡ್ಡಿದ್ದ.