ಬೆಂಗಳೂರು || ನಮ್ಮ ಮೆಟ್ರೋ ದರ ಏರಿಕೆ ನಂತರ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಳ

ಬೆಂಗಳೂರು || ಮೆಟ್ರೋ ಪ್ರಯಾಣಿಕರ ಕುಸಿತ, ನಗರದ ವಾಯು ಮಾಲಿನ್ಯ ಹೆಚ್ಚಳ: ಇಂದಿನ AQI ಎಷ್ಟಿದೆ?

ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆಯಾದ ನಂತರ ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ ಎಂದು ರಾಷ್ಟ್ರೀಯ ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರದ ದತ್ತಾಂಶದಿಂದ ತಿಳಿದುಬಂದಿದೆ. ಭಾರತೀಯ ವಿಜ್ಞಾನ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ, ಪ್ರಯಾಣದ ದರ ಏರಿಕೆ ಬಳಿಕ ಸಾಕಷ್ಟು ಜನರು ನಮ್ಮ ಮೆಟ್ರೋ ಬಿಟ್ಟು ಸ್ವಂತ ವಾಹನಗಳಲ್ಲಿ ಓಡಾಡಲು ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಫೆಬ್ರವರಿ 9 ರಂದು ನಮ್ಮೆ ಮೆಟ್ರೋ ಪ್ರಯಾಣದ ದರವನ್ನು ಏರಿಕೆ ಮಾಡಿತ್ತು. ದರ ಏರಿಕೆ ಬಳಿಕ ಮೆಟ್ರೋದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯಲ್ಲಿನ ಇಳಿಕೆಯಾಗಿದೆ. “ನಮ್ಮ ಸರಾಸರಿ ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು ಶೇ. 10.5 ರಷ್ಟು ಇಳಿಕೆಯಾಗಿದೆ ಎಂದು ಎಂದು ಬಿಎಂಆರ್ಸಿಎಲ್ ಹೇಳಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಮೆಟ್ರೋ ಟಿಕೆಟ್ ದರಕ್ಕಿಂತ ಪೆಟ್ರೋಲ್ ಅಗ್ಗ

ಮೆಟ್ರೋ ಪ್ರಯಾಣದ ದರ ವಿಚಾರವಾಗಿ ಓರ್ವ ಪ್ರಯಾಣಿಕ ಮಾತನಾಡಿ, “ಯೆಲಚೇನಹಳ್ಳಿಯಿಂದ ಎಂಜಿ ರಸ್ತೆಗೆ ನನ್ನ ಪ್ರಯಾಣದ ವೆಚ್ಚ ದ್ವಿಗುಣವಾಗಿದ್ದು, 66 ರೂ.ಗೆ ತಲುಪಿದೆ. ವಾಪಸ್ ಬರುವಾಗಲೂ 66 ರೂ. ತಗಲುತ್ತದೆ. ಜೊತೆಗೆ, ಪಾರ್ಕಿಂಗ್ ಶುಲ್ಕ 30 ರೂ. ಪಾವತಿಸಬೇಕು. ಇದು ತುಂಬಾ ದುಬಾರಿಯಾಗಿದೆ. ಹೀಗಾಗಿ, ನಾನು ನನ್ನ ಬುಲೆಟ್ ಮೊಬೈಕ್ ಮೇಲೆ ಸಂಚರಿಸುತ್ತಿದ್ದೇನೆ. ಒಂದು ಲೀಟರ್ ಪೆಟ್ರೋಲ್ ಬೆಲೆ ಇದಕ್ಕಿಂತ ಅಗ್ಗವಾಗುತ್ತದೆ” ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಪ್ರಕಾರ, ಸಾರಿಗೆ ವಲಯದಿಂದ ಶೇಕಡಾ 40 ರಿಂದ 51 ರಷ್ಟು ವಾಯು ಮಾಲಿನ್ಯವಾಗುತ್ತಿದ್ದು, ಧೂಳಿನಿಂದ ಶೇ.17 ರಿಂದ 51 ರಷ್ಟು ವಾಯು ಮಾಲಿನ್ಯವಾಗುತ್ತಿದೆ. ದರ ಏರಿಕೆ ನಂತರ ಫೆಬ್ರವರಿ 10ರಿಂದ ಮಾಲೀನ್ಯ ಹೆಚ್ಚಾಗಿದೆ. ಈ ಮೂಲಕ ಜನರು ಮೆಟ್ರೋ ಬಿಟ್ಟು ಸ್ವಂತ ವಾಹನದಲ್ಲಿ ಓಡಾಡುವವರ ಸಂಖ್ಯೆ ಅಧಿಕವಾಗಿದೆ. ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI)ದಲ್ಲೂ ಮಾಲೀನ್ಯ ಏರಿಕೆ ಕಂಡಿದೆ.

ಉದಾಹರಣೆಗೆ, ಜಯನಗರ 5 ನೇ ಬ್ಲಾಕ್ನಲ್ಲಿರುವ ಮೇಲ್ವಿಚಾರಣಾ ಕೇಂದ್ರವು ದರ ಏರಿಕೆಗೆ ಮುನ್ನ, ಬೆಳಿಗ್ಗೆ ಮತ್ತು ಸಂಜೆ ಪೀಕ್ ಅವರ್ನಲ್ಲಿ ಸರಾಸರಿ ಪರ್ಟಿಕ್ಯುಲೇಟ್ ಮ್ಯಾಟರ್ 2.5 ಪ್ರತಿ ಘನ ಮೀಟರ್ಗೆ 43 ರಿಂದ 54 ಮೈಕ್ರೋಗ್ರಾಂಗಳ ನಡುವೆ ಇತ್ತು ಎಂದು ತೋರಿಸಿದೆ. ಫೆಬ್ರವರಿ 10 ರಂದು 112-114 ಮೈಕ್ರೋಗ್ರಾಂ/ಘನ ಮೀಟರ್ಗೆ ತಲುಪಿತು ಎಂದು ತೋರಿಸಿದೆ.

Leave a Reply

Your email address will not be published. Required fields are marked *