ಬೆಂಗಳೂರು || ವಾಯುಭಾರ ಕುಸಿತ, ಒಣ ಹವೆ ಎಚ್ಚರಿಕೆ, ಮುಂದಿನ ದಿನಗಳು ಹೇಗಿರಲಿವೆ?

ಬೆಂಗಳೂರು || ವಾಯುಭಾರ ಕುಸಿತ, ಒಣ ಹವೆ ಎಚ್ಚರಿಕೆ, ಮುಂದಿನ ದಿನಗಳು ಹೇಗಿರಲಿವೆ?

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿಗೆ ಶುಷ್ಕ ವಾತಾವರಣದ ಎಚ್ಚರಿಕೆ ನೀಡಲಾಗಿದೆ. ಕೆಲ ದಿನಗಳ ಹಿಂದೆ ಫೆಬ್ರವರಿ 1ರಿಂದ ಬೆಂಗಳೂರಿಗೆ ವ್ಯಾಪಕ ಮಳೆ ಆಗಲಿದೆ ಎಂದು ಎಚ್ಚರಿಕೆ ಕೊಡಲಾಗಿತ್ತು. ಆದರೆ ವಾತಾವರಣದಲ್ಲಿ ಆದ ಬದಲಾವಣೆ ಕಾರಣದಿಂದಾಗಿ ನಗರದಲ್ಲಿ ಮಳೆ ಬದಲಾಗಿ ಶುಷ್ಕ ವಾತವರಣ ಆವರಿಸಿಕೊಳ್ಳುತ್ತಿದೆ. ನಗರದಲ್ಲಿ ಇಂದು ಶನಿವಾರ ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 19.39 °C ಮತ್ತು 29.86 °C ದಾಖಲಾಗಿದೆ.

ಬೆಂಗಳೂರಿನಲ್ಲಿ ಇಂದು ದಾಖಲಾದ ಉಷ್ಣಾಂಶವೇ ಮುಂದುವರಿಯಲಿದೆ. ತಾಪಮಾನ ಪ್ರಮಾಣ ನಗರದಲ್ಲಿ ಮುಂದಿನ ವಾರದಲ್ಲಿ ಕನಿಷ್ಠ 20 ಮತ್ತು ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಗಿಂತಲೂ ಹೆಚ್ಚು ದಾಖಲಾಗುವ ಮೂಲಕ ನಗರಾದ್ಯಂತ ಶುಷ್ಕ ವಾತಾವರಣ ನಿರ್ಮಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸೂರ್ಯೋದಯ, ಸೂರ್ಯಾಸ್ತ: ನಗರ ವಾತಾವರಣ ಬೆಂಗಳೂರಿನಲ್ಲಿ ಸದ್ಯ ಸಾಪೇಕ್ಷ ಆರ್ದ್ರತೆಯು ಶೇ 49ರಷ್ಟಿದೆ. ನಗರದಲ್ಲಿ ಗಂಟೆಗೆ 49 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಅಧಿಕ ಬಿಸಿಲು, ನೀಲಿ ಸ್ವಚ್ಛ ಆಕಾಶ ಇರುತ್ತದೆ. ಕೆಲವು ಸಮಯ ಮೋಡ ಕವಿದ ವಾತಾವರಣ ಕಂಡು ಬರುವ ನಿರೀಕ್ಷೆ ಇದೆ. ಆದರೆ ಮಳೆ ಬರುವ ಮುನ್ಸೂಚನೆ ಇಲ್ಲ. ಶೀತ ವಾತಾವರಣ ಸಂಪೂರ್ಣ ಮಾಯವಾಗಲಿದೆ. ನಿತ್ಯ ಬೆಳಗ್ಗೆ ಬೆಳಗ್ಗೆ 06:45 ಗಂಟೆಗೆ ಸೂರ್ಯ ಉದಯಿಸಲಿದ್ದಾನೆ. ಸಂಜೆ 06:20 ಸೂರ್ಯಾಸ್ತವಾಗಲಿದೆ. ಇದು ಮುಂದಿನ ಕೆಲವು ದಿನಗಳ ಬೆಂಗಳೂರಿನ ದಿನಚರಿಯಾಗಲಿರಲಿದೆ.

ಬೆಂಗಳೂರಿನ ಗಾಳಿಯ ಗುಣಮಟ್ಟ ಸೂಚ್ಯಂಕ ಉತ್ತಮವಾಗಿದೆ (0.0 AQI) ಬೆಂಗಳೂರಿಗೆ ಕಲುಷಿತ ಗಾಳಿ, ವಾಯುಗುಣಮಟ್ದೆ ಯಾವುದೇ ಹೆಚ್ಚರಿಕೆಗಳು ಇಲ್ಲ. ಶುಷ್ಕ ವಾತಾವರಣ, ಧೂಳು ಹಿನ್ನೆಲೆಯ ವಾತಾವರಣಕ್ಕೆ ತಕ್ಕಂತೆ ನೀವು ಹೊರಾಂಗಣದ ದೈನಂದಿನ ಚಟುವಟಿಕೆ ಆಯೋಜಿಸಿಕೊಳ್ಳಬಹುದು.

ಹವಾಮಾನ ಇಲಾಖೆ ಪ್ರಕಾರ, ಸಿಲಿಕಾನ್ ಸಿಟಿಯಲ್ಲಿ ಮುಂದಿನ ಒಂದು ವಾರ ಕಾಲ ಬೆಂಗಳೂರಿನಲ್ಲಿ ಹವಾಮಾನ ಮಾದರಿಯು ವೈವಿಧ್ಯಮಯದಿಂದ ಕೂಡಿರಲಿದೆ ಎನ್ನಲಾಗಿದೆ. ಶುಷ್ಕ ವಾತಾವರಣ ಕಂಡು ಬರಲಿದ್ದು, ಮಳೆ ಆರ್ಭಟ ಸಂಪೂರ್ಣ ಮರೆಯಾಗಿದೆ. ಹಿಂಗಾರು ಮಳೆ ಅಂತ್ಯ ಕಂಡಿದೆ. ವಾಯುಭಾರತ ಕುಸಿತ: ಕರ್ನಾಟಕ ಮಳೆ ಮುನ್ಸೂಚನೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. 0.9 ಕಿಲೋ ಮೀಟರ್ ಎತ್ತರದಲ್ಲಿ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿದೆ. ಹೀಗಿದ್ದರೂ ಮಳೆ ನಿರೀಕ್ಷೆ ಇಲ್ಲ. ಬದಲಾಗಿ ಬೆಂಗಳೂರು ಮಾತ್ರವಲ್ಲದೇ ಕರ್ನಾಟಕ ಮಲೆನಾಡಿನ ಜಿಲ್ಲೆಗಳು, ಕರಾವಳಿ ಜಿಲ್ಲೆಗಳೂ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.

Leave a Reply

Your email address will not be published. Required fields are marked *