ಬೆಂಗಳೂರು || ಇನ್ಫಿ ಸಹ ಸಂಸ್ಥಾಪಕ ಕ್ರಿಸ್ ಸೇರಿ 18 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್

ಬೆಂಗಳೂರು || ಇನ್ಫಿ ಸಹ ಸಂಸ್ಥಾಪಕ ಕ್ರಿಸ್ ಸೇರಿ 18 ಮಂದಿ ವಿರುದ್ಧ ಅಟ್ರಾಸಿಟಿ ಕೇಸ್

ಬೆಂಗಳೂರು: ಇನ್ಫೋಸಿಸ್ (Infosys) ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ (Kris Gopalakrishnan) ಐಐಎಸ್‌ಸಿ (IISc) ಮಾಜಿ ನಿರ್ದೇಶಕ ಬಲರಾಮ್ ಸೇರಿದಂತೆ 18 ಮಂದಿ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Atrocities Act) ಪ್ರಕರಣ ದಾಖಲಾಗಿದೆ.

ಬೆಂಗಳೂರಿನ 71ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಿರ್ದೇಶನದ ಮೇರೆಗೆ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೋವಿ ಸಮುದಾಯಕ್ಕೆ ಸೇರಿದ ದೂರುದಾರ ದುರ್ಗಪ್ಪ ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನ ಕೇಂದ್ರದಲ್ಲಿ ಅಧ್ಯಾಪಕರಾಗಿದ್ದರು. 2014 ರಲ್ಲಿ ತನ್ನನ್ನು ಹನಿ ಟ್ರ್ಯಾಪ್ (Honey Trap) ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿ ವಜಾ ಮಾಡಲಾಗಿದೆ. ಅಷ್ಟೇ ಅಲ್ಲದೇ ಕ್ರಿಸ್ ಗೋಪಾಲಕೃಷ್ಣನ್ ಸೇರಿ 18 ಮಂದಿ 2008 ರಿಂದ 2025ರ ವರೆಗೆ ಜಾತಿನಿಂದನೆ ದೌರ್ಜನ್ಯ (Casteist abuse) ನಡೆಸುತ್ತಾ ಬಂದಿದ್ದಾರೆ ಎಂದು ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದನ್ ರಂಗರಾಜನ್, ರಂಗರಾಜನ್ ಶ್ರೀಧರ್ ವಾರಿಯರ್, ಸಂಧ್ಯಾ ವಿಶ್ವೇಶ್ವರಯ್ಯ, ಹರಿ ಕೆವಿಎಸ್, ದಾಸಪ್ಪ, ಹೇಮಲತಾ ಮಹಿತಿ, ಚಟ್ಟೋಪಾಧ್ಯಾಯ ಕೆ. ಪ್ರದೀಪ್ ಡಿ.ಸಾವರ್ ಮತ್ತು ಮನೋಹರನ್ ಮತ್ತಿತರರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. 

ಕ್ರಿಸ್ ಗೋಪಾಲಕೃಷ್ಣನ್ ಅವರು ಐಎಸ್ಸಿಯ ಟ್ರಸ್ಟಿ ಬೋರ್ಡ್‌ ಸದಸ್ಯರಾಗಿರುವ ಕಾರಣ ಅವರ ಮೇಲೂ ಕೇಸ್‌ ದಾಖಲಾಗಿದೆ. ಟ್ರಸ್ಟಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿರುವ ಕ್ರಿಸ್ ಗೋಪಾಲಕೃಷ್ಣನ್ ಅವರಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ

Leave a Reply

Your email address will not be published. Required fields are marked *